Home latest ಪ್ರಪ್ರಥಮವಾಗಿ ಐಫೋನ್ ಹ್ಯಾಕ್ ಮಾಡಿದ ವ್ಯಕ್ತಿಗೆ ಟ್ವಿಟರ್ ನಲ್ಲಿ ಕೆಲಸ| ಅಷ್ಟಕ್ಕೂ ಎಲಾನ್ ಮಸ್ಕ್ ಕೊಟ್ಟಿರುವ...

ಪ್ರಪ್ರಥಮವಾಗಿ ಐಫೋನ್ ಹ್ಯಾಕ್ ಮಾಡಿದ ವ್ಯಕ್ತಿಗೆ ಟ್ವಿಟರ್ ನಲ್ಲಿ ಕೆಲಸ| ಅಷ್ಟಕ್ಕೂ ಎಲಾನ್ ಮಸ್ಕ್ ಕೊಟ್ಟಿರುವ ಕೆಲಸ ಏನಿರಬಹುದು?

Hindu neighbor gifts plot of land

Hindu neighbour gifts land to Muslim journalist

2007 ರಲ್ಲಿ ಐಫೋನ್ ಹ್ಯಾಕ್ ಮಾಡಿದ ಮೊದಲ ವ್ಯಕ್ತಿ ಎಂದು ಪ್ರಪಂಚದಾದ್ಯಂತ ಖ್ಯಾತಿ ಪಡೆದಿದ್ದ ಗೆರೊಜ್ ಹಾಟ್ಜ್ (George Hotz) ಅವರು ಮುಂದಿನ ಕೆಲವು ವಾರಗಳ ಕಾಲ ಟ್ವಿಟರ್‌ ಸಂಸ್ಥೆಗಾಗಿ ಕಾರ್ಯನಿರ್ವಹಿಸಲಿದ್ದಾರೆ.

ಎಲಾನ್ ಮಸ್ಕ್ ಅವರು ಟ್ವಿಟರ್ ಸ್ವಾಧೀನ ಪಡಿಸಿಕೊಂಡ ನಂತರ ಟ್ವಿಟರ್ ನಲ್ಲಿ ಬಾರೀ ಬದಲಾವಣೆ ತರಲು ಮುಂದಾಗಿದ್ದಾರೆ. ಹಾಗೂ ಹಲವಾರು ಬದಲಾವಣೆಗಳು ಕೂಡ ಆಗಿವೆ. ಸಂಸ್ಥೆಯಲ್ಲಿ ಸುಮಾರು 4 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ನಂತರ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಟ್ವಿಟರ್ ಮಾಲಿಕ ಎಲಾನ್ ಮಸ್ಕ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿತ್ತು.

ಹಾಗೇ ಎಲಾನ್ ಮಸ್ಕ್ ಅವರು ಸೆಕ್ಯುರಿಟಿ ಹ್ಯಾಕರ್ ‘ಗೆರೊಜ್ ಹಾಟ್ಜ್’ ಅವರನ್ನು ಆಹ್ವಾನಿಸಿದ್ದಾರೆ. ಇವರಿಗೆ ಯಾವ ಕೆಲಸ ಕೊಟ್ಟಿದ್ದಾರೆ ಎಂದರೆ, ಟ್ವಿಟರ್ ಸರ್ಚ್ ಮತ್ತು ಲಾಗಿನ್-ಪಾಪ್ ಸಮಸ್ಯೆಗಳನ್ನು ಸರಿಪಡಿಸುವ ಹೊಣೆಯನ್ನು ನೀಡಿದ್ದಾರೆ.

” ನಾನು 12 ವಾರಗಳ ಕಾಲ ಟ್ವಿಟರ್ ನಲ್ಲಿ ಕಾರ್ಯನಿರ್ವಹಿಸುತ್ತೇನೆ. ಈ ವೇಳೆ ಬ್ರೋಕನ್ ಸರ್ಚ್ ವೈಶಿಷ್ಟ್ಯವನ್ನು ಸರಿಪಡಿಸಲು ಮತ್ತು ಬ್ರೌಸಿಂಗ್ ಮಾಡುವಾಗ ಕಾಣಿಸಿಕೊಳ್ಳುವ ತೆಗೆದುಹಾಕಲಾದ ಲಾಗಿನ್ ಪಾಪ್-ಅಪ್ ಅನ್ನು ತೆಗೆದುಹಾಕುವ ಕಾರ್ಯ ಮಾಡುತ್ತೇನೆ. ಈ ಕಾರ್ಯ ನಿಸ್ತೇಜಗೊಂಡ ಜಗತ್ತಿನಲ್ಲಿ ಬಂಡವಾಳವನ್ನು ಸಂಗ್ರಹಿಸುವುದರ ಬಗ್ಗೆ ಅಲ್ಲ, ಬದಲಾಗಿ ಈ ಜಗತ್ತನ್ನು ಮತ್ತೆ ಕ್ರಿಯಾಶೀಲವನ್ನಾಗಿ ಮಾಡುವುದಕ್ಕಾಗಿ” ಎಂದು ಗೆರೊಜ್ ಹಾಟ್ಜ್ ಅವರು ಟ್ವೀಟ್ ಮಾಡಿದ್ದಾರೆ.

ಗೆರೊಜ್ ಹಾಟ್ಜ್ ಅವರು ತಾವು ಕಾಂಫ್ಲೆಕ್ಸ್ ಕೋಡ್‌ಬೇಸ್‌ಗಳಿಗೆ ಕಾರ್ಯನಿರ್ವಹಿಸುವುದಾಗಿ, ಈ ಕೆಲಸ 12 ವಾರಗಳಲ್ಲಿ 1000 ಮೈಕ್ರೋ ಸರ್ವೀಸ್‌ಗಳಲ್ಲಿ ಕೆಲವನ್ನು ಡಾಕ್ಯುಮೆಂಟ್ ಮಾಡಲು ಮತ್ತು ಸ್ವಚ್ಛಗೊಳಿಸಲು ರಿವರ್ಸ್‌ ಎಂಜಿನಿಯರಿಂಗ್ ನಿಂದ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ, ಗೆರೊಜ್ ಹಾಟ್ಜ್ ಅವರು ದೀರ್ಘಕಾಲ ಟ್ವಿಟರ್ ಕಂಪನಿಗೆ ಸೇರಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಹಾಗೇ ಗೆರೊಜ್ ಹಾಟ್ಜ್ ಅವರು ಹಾಸ್ಯವಾಗಿ, “ಸ್ಯಾನ್‌ ಫ್ರಾನ್ಸಿಕ್ಸೋದಲ್ಲಿ ಜೀವನ ವೆಚ್ಚ ನಿಭಾಯಿಸುವುದಕ್ಕಾಗಿ ನಾನು 12 ವಾರಗಳ ಕಾಲ ಟ್ವಿಟರ್ ನಲ್ಲಿ ಇಂಟರ್ನ್‌ಶಿಪ್‌ ಮಾಡುತ್ತಿದ್ದೇನೆ” ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಎಲಾನ್ ಮಸ್ಕ್ ಅವರು, “ಖಂಡಿತ, ಮಾತನಾಡೋಣ” ಎಂದು ಹೇಳುವ ಮೂಲಕ ಗೆರೊಜ್ ಹಾಟ್ಜ್ ಅವರಿಗೆ ಶುಭಕೋರಿದ್ದಾರೆ.