Home latest ಗಂಡನ ಮೇಲಿನ ಸಿಟ್ಟಿಗೆ ಒಂದೂವರೆ ವರ್ಷದ ಮಗುವಿಗೆ ಯದ್ವಾತದ್ವಾ ಹೊಡೆದ ತಾಯಿ | ವಿಡಿಯೋ ವೈರಲ್...

ಗಂಡನ ಮೇಲಿನ ಸಿಟ್ಟಿಗೆ ಒಂದೂವರೆ ವರ್ಷದ ಮಗುವಿಗೆ ಯದ್ವಾತದ್ವಾ ಹೊಡೆದ ತಾಯಿ | ವಿಡಿಯೋ ವೈರಲ್ ,ತಾಯಿಯನ್ನು ಬಂಧಿಸಿದ ಪೊಲೀಸರು

Hindu neighbor gifts plot of land

Hindu neighbour gifts land to Muslim journalist

ಪತಿಯ ಮೇಲಿನ ಕೋಪಕ್ಕೆ ತನ್ನ ಒಂದೂವರೆ ವರ್ಷದ ಮಗುವಿಗೆ ಯದ್ವಾತದ್ವಾ ಹೊಡೆದು ಹಿಂಸೆ ನೀಡಿ ವಿಕೃತವಾಗಿ ವರ್ತಿಸುತ್ತಿದ್ದ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಿಂಸೆಯ ದೃಶ್ಯ ನಿನ್ನೆ ವೈರಲ್ ಆಗಿದ್ದು, ಬಳಿಕ ತಮಿಳುನಾಡು ಪೊಲೀಸರು ಆಂಧ್ರಪ್ರದೇಶದಲ್ಲಿ ಆಕೆಯನ್ನು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರಿನಲ್ಲಿರುವ 22 ವರ್ಷದ ತುಳಸಿ ಎಂಬಾಕೆಯೇ ಬಂಧಿತ ಆರೋಪಿ, ಈಕೆ ಐದು ವರ್ಷಗಳ ಹಿಂದೆ ತಮಿಳುನಾಡಿನ ವಡಿವಜಗನ್ ಎಂಬಾತನನ್ನು ಮದುವೆಯಾಗಿದ್ದು, ತಮಿಳುನಾಡಿನ ಮೊಟ್ಟೂರು ಗ್ರಾಮದಲ್ಲಿ ನೆಲೆಸಿದ್ದರು. ಈ ದಂಪತಿಗೆ ನಾಲ್ಕು ವರ್ಷದ ಗೋಕುಲ್ ಹಾಗೂ ಒಂದೂವರೆ ವರ್ಷದ ಪ್ರದೀಪ್ ಎಂಬ ಇಬ್ಬರು ಮಕ್ಕಳಿದ್ದಾರೆ.

ದಂಪತಿ ಮಧ್ಯೆ ಯಾವಾಗಲೂ ಗಲಾಟೆ ನಡೆಯುತ್ತಿದ್ದು, ಇದರಿಂದ ಬೇಸತ್ತಿದ್ದ ಪತಿ, ಪತ್ನಿಯನ್ನು ಆಂಧ್ರಪ್ರದೇಶದಲ್ಲಿರುವ ತಾಯಿಯ ಮನೆಗೆ ಕರೆದೊಯ್ದು ಬಿಟ್ಟಿದ್ದ. ಪತಿಯ ಮೇಲಿನ ಸಿಟ್ಟಿನಿಂದ ತುಳಸಿ ತನ್ನ ಮಗುವಿಗೆ ಯದ್ವಾತದ್ವಾ ಹೊಡೆಯುತ್ತಿದ್ದು, ಅವಳು ಅದರ ವಿಡಿಯೋ ಕೂಡ ಮಾಡಿಟ್ಟುಕೊಂಡಿದ್ದು ಅದು ನಿನ್ನೆ ವೈರಲ್ ಆಗಿತ್ತು. ಆ ವಿಡಿಯೋವನ್ನು ತುಳಸಿಯ ಸಂಬಂಧಿಕರು ನೋಡಿ ಪತಿಯ ಗಮನಕ್ಕೆ ತಂದಿದ್ದು, ಬಳಿಕ ತಮಿಳುನಾಡು ಪೊಲೀಸರಿಗೆ ದೂ ನೀಡಲಾಗಿತ್ತು.

ತುಳಸಿ ತನ್ನ ಒಂದೂವರೆ ವರ್ಷದ ಮಗುವಿಗೆ ಯಾವ ರೀತಿ ಹೊಡೆದಿದ್ದಳೆಂದರೆ ಮಗುವಿನ ಮೈಮೇಲೆ ಬಾಸುಂಡೆಗಳು ಎದ್ದಿದ್ದವು, ಬರೆಗಳು ಬಿದ್ದಿದ್ದವು. ಮಗುವಿಗೆ ಮುಷ್ಟಿ ಕಟ್ಟಿ ಗುದ್ದುತ್ತಿದ್ದಳು, ಚಪ್ಪಲಿಯಲ್ಲಿ ಬಾರಿಸುತ್ತಿದ್ದಳು. ಹೀಗೆಲ್ಲ ಹೊಡೆದು ಬಡಿದು ವಿಡಿಯೋ ಮಾಡಿ ಅದನ್ನು ವಿಕೃತವಾಗಿ ನೋಡಿ ವಿಡಿಯೋ ಮಾಡಿಟ್ಟಿದ್ದಳು. ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಸೂಕ್ತ ಕ್ರಮ ಜರುಗಿಸಿದ್ದಾರೆ.