Home Interesting Furniture Cleaning Hacks: ಫರ್ನೀಚರ್ ಸ್ವಚ್ಛಗೊಳಿಸಲು ಈ ಸುಲಭ ವಿಧಾನ ಅನುಸರಿಸಿ | ಕಣ್ಣುಮಿಟುಕಿಸುವುದರಲ್ಲಿ ಫಳಫಳ...

Furniture Cleaning Hacks: ಫರ್ನೀಚರ್ ಸ್ವಚ್ಛಗೊಳಿಸಲು ಈ ಸುಲಭ ವಿಧಾನ ಅನುಸರಿಸಿ | ಕಣ್ಣುಮಿಟುಕಿಸುವುದರಲ್ಲಿ ಫಳಫಳ ಮಿನುಗುತ್ತೆ

Hindu neighbor gifts plot of land

Hindu neighbour gifts land to Muslim journalist

ಸಾಮಾನ್ಯವಾಗಿ ಮನೆಯ ಸೊಬಗನ್ನು ಹೆಚ್ಚಿಸಲು ಮನೆಯ ಸುತ್ತಮುತ್ತಲಿನ ಪರಿಸರ ಮನೆಯ ಒಳಗಿನ ಹೊರಗಿನ ಉಪಕರಣಗಳು ನೋಡುಗರ ಕಣ್ಮನ ಸೆಳೆಯುವಂತೆ ಇರಬೇಕು ಎಂದು ಬಯಸುವುದು ಸಹಜ. ಅದಕ್ಕಾಗಿ ಮನೆಯ ಅಂದ ಚೆಂದ ಹೆಚ್ಚಿಸಲು ನಾನಾ ರೀತಿಯ ಪ್ರಯೋಗ ಮಾಡುತ್ತಲೇ ಇರುತ್ತಾರೆ.

ಅದೇ ರೀತಿ, ಮನೆಯ ಗೋಡೆ ಕಪ್ಪು ಬಣ್ಣಕ್ಕೆ ತಿರುಗಿದರೆ ನೋಡಲು ಒಂದು ರೀತಿಯ ಮುಜುಗರ ಎನಿಸುವುದು ಸಾಮಾನ್ಯ. ಮನೆಯ ಫರ್ನೀಚರ್ ಹೆಚ್ಚು ಬಳಕೆ ಮಾಡಿದಂತೆ ಬಣ್ಣ ಕಪ್ಪಾಗುವುದೋ ಇಲ್ಲವೆ ಕಲೆಗಳು ಉಂಟಾಗಿ ಮನೆಯ ಒಳಗಿನ ಶೋಭೆಗೆ ಕಪ್ಪು ಚುಕ್ಕೆಯಂತೆ ಪರಿಣಮಿಸುತ್ತದೆ. ನೀವು ಕೂಡ ಈ ಸಮಸ್ಯೆ ಎದುರಿಸುತ್ತಿದ್ದು ಪರಿಹಾರ ಕಂಡುಕೊಳ್ಳಲು ಬಯಸುತ್ತಿದ್ದಿರಾ??

ಹೆಚ್ಚಿನವರ ಮನೆಯಲ್ಲಿ ಪೀಠೋಪಕರಣಗಳು ಇರುವುದು ಸಾಮಾನ್ಯ. ಇವುಗಳು ನೋಡಲು ತುಂಬಾ ಸುಂದರವಾಗಿರುವ ಜೊತೆಗೆ ಮನೆಯ ಸೌಂದರ್ಯ ದುಪ್ಪಟ್ಟು ಮಾಡಲು ಕಾರಣವಾಗುತ್ತದೆ. ಆದರೆ, ಅದೇ ಕಲೆ ಇಲ್ಲವೇ ಜಿಡ್ಡು ಕೊಳೆ ತುಂಬಿಕೊಂಡರೆ ಅದನ್ನು ಶುಭ್ರ ಗೊಳಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ನೀವು ಈ ಸಮಸ್ಯೆ ಎದುರಿಸಿದ್ದರೆ, ಫರ್ನೀಚರ್ ಸ್ವಚ್ಛಗೊಳಿಸಲು ನಾವು ಹೇಳುವ ಸರಳ ವಿಧಾನಗಳನ್ನು ಅನುಸರಿಸಿ ಕ್ಷಣದಲ್ಲಿ ಫಳಫಳ ಅಂತಾ ಮಿನುಗುತ್ತೆ ಪೀಠೋಪಕರಣಗಳ ಬದಲಾವಣೆ ಗಮನಿಸಬಹುದು.

ಅಡಿಗೆ ಸೋಡಾದ ಸಹಾಯದಿಂದ ಸುಲಭವಾಗಿ ಪೀಠೋಪಕರಣಗಳನ್ನು ಸ್ವಚ್ಛಗೊಳಿಸಬಹುದಾಗಿದೆ. ನೀವು ಬಿಸಿ ನೀರಿನಲ್ಲಿ ಅಡಿಗೆ ಸೋಡಾವನ್ನು ಬೆರೆಸಿ, ಅದನ್ನು ಬಾಟಲಿಯಲ್ಲಿ ಹಾಕಿ ಸಿಂಪಡಿಸಬೇಕು. ಆ ಬಳಿಕ ಕೆಲ ಸಮಯದ ಬಳಿಕ ಮೈಕ್ರೋಫೈಬರ್ ಬಟ್ಟೆಯಿಂದ ಅದನ್ನು ಸ್ವಚ್ಛಗೊಳಿಸಿ ಪ್ರಯೋಜನ ಕಂಡುಕೊಳ್ಳಬಹುದು.

ಪೀಠೋಪಕರಣಗಳಲ್ಲಿ ಹೆಚ್ಚಿನ ಸಂದರ್ಭದಲ್ಲಿ ಕಲೆಗಳು ಕಂಡು ಬರುತ್ತವೆ. ಅದನ್ನು ತೊಡೆದುಹಾಕಲು ನಾನಾ ರೀತಿಯ ಪ್ರಯೋಗ ಮಾಡಿ ವಿಫಲರಾಗಿರುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಏರೋಸಲ್ (Aerosol)ನ್ನು ಬಳಕೆ ಮಾಡಬಹುದಾಗಿದೆ. ಪೀಠೋಪಕರಣಗಳ ಮೇಲೆ ಅವುಗಳನ್ನು ಸಿಂಪಡಿಸಿ, ಮೃದುವಾದ ಬಟ್ಟೆಯಿಂದ ಸ್ವಚ್ಛಗೊಳಿಸಿ ಕಲೆ ಮಾಯವಾಗುವುದನ್ನು ಗಮನಿಸಬಹುದು.

ಗ್ಲಿಸರಿನ್ ಮತ್ತು ಯಾವುದೇ ಎಣ್ಣೆಯನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿಕೊಂಡು ಬಳಿಕ ನಿಂಬೆರಸ ಹಿಂಡಬೇಕು. ಈಗ ಅದನ್ನು ಪೀಠೋಪಕರಣಗಳ ಪ್ರತಿಯೊಂದು ಮೂಲೆಯಲ್ಲಿ ಸಿಂಪಡಿಸಿದ ನಂತರ ಅದನ್ನು ಮೃದುವಾದ ಬಟ್ಟೆಯಿಂದ ಸ್ವಚ್ಛಗೊಳಿಸಬೇಕು.

ಅಡುಗೆಯ ರುಚಿಯನ್ನು ಹೆಚ್ಚಿಸಲು ಹೆಚ್ಚಾಗಿ ಬಿಳಿ ವಿನೆಗರ್ ಅನ್ನು ಬಳಕೆ ಮಾಡುವ ವಿಚಾರ ಗೊತ್ತಿರುವಂತದ್ದೇ! ಬಿಳಿ ವಿನೆಗರ್ ಅನ್ನು ಬಾಟಲಿಯಲ್ಲಿ ಇರಿಸಿ ಮತ್ತು ಪೀಠೋಪಕರಣಗಳ ಮೇಲೆ ಸಿಂಪಡಿಸಿದರೆ ಫರ್ನೀಚರ್ ಹೊಳೆಯುವಂತೆ ಮಾಡಬಹುದು.

ಪೀಠೋಪಕರಣಗಳನ್ನು ಸ್ವಚ್ಛಗೊಳಿಸಲು ಮಾರುಕಟ್ಟೆಯಲ್ಲಿ ಹಲವು ರೀತಿಯ ಕ್ಲೀನಿಂಗ್ ವಸ್ತುಗಳು ಲಭ್ಯವಿದ್ದು, ಇದರ ನೆರವಿನಿಂದ ಟೇಬಲ್ ಮತ್ತು ಕುರ್ಚಿಯ ಮೇಲೆ ಸ್ಪ್ರೇ ಮಾಡಿ ನಂತರ ಸ್ವಚ್ಛವಾದ ಹತ್ತಿ ಬಟ್ಟೆಯ ಸಹಾಯದಿಂದ ನಿಧಾನವಾಗಿ ಉಜ್ಜಿದರೆ ಪೀಠೋಪಕರಣಗಳು ಫಳ ಫಳ ಹೊಳೆಯುವುದನ್ನು ಗಮನಿಸಬಹುದು. ಮೇಲೆ ತಿಳಿಸಿದ ಸರಳ ಕ್ರಮ ಅನುಸರಿಸಿ ಕಲೆ ಕೊಳೆ ತುಂಬಿರುವ ಪೀಠೋಪಕರಣಗಳನ್ನು ಹೊಳೆಯುವಂತೆ ಮಾಡಬಹುದಾಗಿದೆ.