Home latest Nothing Phone (1): ಹೊಸ ಸ್ಮಾರ್ಟ್​ಫೋನ್ ಖರೀದಿಸುವ ಆಲೋಚನೆ ಇದೆಯೇ? ನಥಿಂಗ್ ಫೋನ್ (1) ಮೇಲೆ...

Nothing Phone (1): ಹೊಸ ಸ್ಮಾರ್ಟ್​ಫೋನ್ ಖರೀದಿಸುವ ಆಲೋಚನೆ ಇದೆಯೇ? ನಥಿಂಗ್ ಫೋನ್ (1) ಮೇಲೆ ಬಂಪರ್ ಡಿಸ್ಕೌಂಟ್!!!

Hindu neighbor gifts plot of land

Hindu neighbour gifts land to Muslim journalist

ನಥಿಂಗ್ ಫೋನ್ (1) ಇದೀಗ ಭರ್ಜರಿ ಡಿಸ್ಕೌಂಟ್​ನಲ್ಲಿ ಮಾರಾಟವಾಗುತ್ತಿದೆ. ನೀವು ಮಧ್ಯಮ ಬೆಲೆಗೆ ಒಂದು ಅತ್ಯುತ್ತಮ ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಹೀಗೆ ಹಲವಾರು ಫೀಚರ್ಸಗಳಿರುವ ಉತ್ತಮವಾದ ಸ್ಮಾರ್ಟ್ ​ಫೋನ್ ಹುಡುಕುತ್ತಿದ್ದರೆ ಇದಕ್ಕಿಂತ ಉತ್ತಮ ಆಯ್ಕೆ ಬೇರೆ ಸಿಗಲು ಸಾಧ್ಯವಿಲ್ಲ. ಅಂದ ಮೇಲೆ ಇನ್ನೇಕೆ ತಡ ಹೊಸ ಸ್ಮಾರ್ಟ್ ​ಫೋನ್ ಖರೀದಿಸಲಿರುವವರಿಗೆ ಅತ್ಯುತ್ತಮ ಅವಕಾಶ ಇಲ್ಲಿದೆ. ಅತಿ ಬೇಗನೆ ಆರ್ಡರ್ ಮಾಡಿ ನಥಿಂಗ್ ಫೋನ್ (1) ನಿಮ್ಮದಾಗಿಸಿ. ಇನ್ನೂ ಈ ಸ್ಮಾರ್ಟ್ ​ಫೋನ್ ಎಷ್ಟು ಬೆಲೆಗೆ ಸೇಲ್ ಆಗುತ್ತಿದೆ? ಯಾವುದೆಲ್ಲಾ ಫೀಚರ್ಸ್ ಇದೆ? ಎಂದು ನೋಡೋಣ.

ನಥಿಂಗ್ ಕಂಪನಿಯ ಸ್ಮಾರ್ಟ್ ​ಫೋನ್ ನಥಿಂಗ್ ಫೋನ್​ (1) ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಿದ್ದರೂ ಈ ಫೋನ್ ಭರ್ಜರಿಯಾಗೇ ಸೇಲ್ ಆಗುತ್ತಿದೆ. ಬಿಡುಗಡೆಯಾದ ಒಂದೇ ತಿಂಗಳಲ್ಲಿ ಇದರ ಬೆಲೆ ಕೂಡ ಹೆಚ್ಚಳವಾಗಿತ್ತು. ಅತೀ ಹೆಚ್ಚು ಪ್ರಸಿದ್ಧತೆ ಪಡೆದಿರುವ ಫ್ಲಿಪ್​ಕಾರ್ಟ್​ನಲ್ಲಿ ಭರ್ಜರಿ ಸೇಲ್ ಕಾಣುತ್ತಿರುವ ಈ ಫೋನ್ ಕೆಲವು ಬಾರಿ ಔಟ್ ಆಫ್ ಸ್ಟಾಕ್​ನಲ್ಲಿ ಕೂಡ ಕಾಣಿಸಿಕೊಂಡಿದೆ. ಇದರ ನಡುವೆ ನಥಿಂಗ್ ಫೋನ್ (1) ಇದೀಗ ಬಂಪರ್ ಡಿಸ್ಕೌಂಟ್​ನಲ್ಲಿ ಸೇಲ್ ಆಗುತ್ತಿದೆ.

ಭಾರತದಲ್ಲಿ ನಥಿಂಗ್ ಫೋನ್ (1) 8GB RAM + 128GB ಸ್ಟೋರೇಜ್ ಆಯ್ಕೆಗೆ ಮೂಲಬೆಲೆ 33,999ರೂ. ಹಾಗೆಯೇ 8GB RAM + 256GB ಸ್ಟೋರೇಜ್ ಆಯ್ಕೆಗೆ 36,999ರೂ. ಮತ್ತು 12GB RAM + 256GB ಸ್ಟೋರೇಜ್ ಆಯ್ಕೆಗೆ 39,999ರೂ. ಇದೆ. ಆದರೆ ಇದೀಗ ಫ್ಲಿಪ್​ಕಾರ್ಟ್​ನಲ್ಲಿ ಆಫರ್ ನೀಡಲಾಗಿದೆ. ಈಗ ನಥಿಂಗ್ ಫೋನ್ (1) ಬೆಲೆ ಕಡಿಮೆಯಾಗಿ 8GB RAM + 128GB ಸ್ಟೋರೇಜ್ ಆಯ್ಕೆಗೆ ಕೇವಲ 26,999 ರೂ. ಗೆ ಮಾರಾಟ ಮಾಡುತ್ತಿದೆ. ಅದರ ಜೊತೆಗೆ ಸಿಟಿ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಇದ್ದರೆ ಇನ್ನಷ್ಟು ರಿಯಾಯತಿ ಪಡೆದುಕೊಳ್ಳಬಹುದಾಗಿದೆ.

ಇನ್ನು ಈ ಫೋನಿನ ಫೀಚರ್ಸ್ ಬಗ್ಗೆ ಹೇಳೋದಾದ್ರೆ, ಇದು 6.55 ಇಂಚಿನ ಫುಲ್‌ ಹೆಚ್‌ ಡಿ ಪ್ಲಸ್‌ ಡಿಸ್‌ ಪ್ಲೇ ಹೊಂದಿದೆ. ಈ ಡಿಸ್‌ ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದ್ದು, 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ನೀಡಲಾಗಿದೆ. ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ ಡ್ರಾಗನ್ 778G+ SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 12ನ ಜೊತೆಗೆ ಕಾರ್ಯ ನಿರ್ವಹಿಸಲಿದೆ.

ನಥಿಂಗ್ ಫೋನ್ (1) ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಅದರಲ್ಲಿ ಮೊದಲನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದೆ. ಇದು OIS ಜೊತೆಗೆ EIS ಇಮೇಜ್ ಸ್ಟೆಬಿಲೈಸೇಶನ್‌ ನೊಂದಿಗೆ ಬರುತ್ತದೆ. ಇನ್ನು ಎರಡನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸ್ಯಾಮ್‌ ಸಂಗ್‌ JN1 ಸೆನ್ಸಾರ್‌ ಹೊಂದಿದೆ. ಇದು EIS ಇಮೇಜ್ ಸ್ಟೆಬಿಲೈಸೇಶನ್, 114-ಡಿಗ್ರಿ ಫೀಲ್ಡ್ ಆಫ್ ವ್ಯೂ ಮತ್ತು ಮ್ಯಾಕ್ರೋ ಮೋಡ್‌ ಅನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ 16 ಮೆಗಾ ಪಿಕ್ಸೆಲ್ ಸೋನಿ IMX471 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಅದರ ಜೊತೆಗೆ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೈರ್ಡ್ ಚಾರ್ಜಿಂಗ್, 15W Qi ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್‌ ಬೆಂಬಲಿಸಲಿದೆ. ನಥಿಂಗ್‌ ಫೋನ್‌ (1) ನೊಂದಿಗೆ ಟೈಪ್‌ ಸಿ ಚಾರ್ಜಿಂಗ್ ಕೇಬಲ್‌ ಸಿಗುತ್ತದೆ. ಇಷ್ಟು ಫೀಚರ್ಸ್ ಜೊತೆಗೆ ಆಫರ್ ಇರಬೇಕಾದರೆ ಇನ್ನೇಕೆ ತಡ ಸ್ಮಾರ್ಟ್ಫೋನ್ ಖರೀದಿ ಮಾಡಿ, ನಥಿಂಗ್‌ ಫೋನ್‌ (1) ನಿಮ್ಮದಾಗಿಸಿ.