Home News ತಂದೆ ಸತ್ತು ಮಲಗಿದ್ದಾಗ ನಗುತ್ತಾ ಶವದ ಮುಂದೆ ಫೋಟೋಶೂಟ್ ಮಾಡಿಸಿಕೊಂಡ ಮಾಡೆಲ್, ಆಕ್ರೋಶ ಸಾರ್ವತ್ರಿಕ !

ತಂದೆ ಸತ್ತು ಮಲಗಿದ್ದಾಗ ನಗುತ್ತಾ ಶವದ ಮುಂದೆ ಫೋಟೋಶೂಟ್ ಮಾಡಿಸಿಕೊಂಡ ಮಾಡೆಲ್, ಆಕ್ರೋಶ ಸಾರ್ವತ್ರಿಕ !

Hindu neighbor gifts plot of land

Hindu neighbour gifts land to Muslim journalist

ಪ್ರೀತಿ ಪಾತ್ರರ ಅಗಲಿಕೆಯ ನೋವು ಯಾವತ್ತೂ ಶಾಶ್ವತ. ಈ ದುಃಖ ಜೀವನದುದ್ದಕ್ಕೂ ಕ್ಷಣಕ್ಷಣಕ್ಕೂ ಕಾಡುತ್ತಿರುತ್ತದೆ. ಪ್ರೀತಿ ಪಾತ್ರರು ಅಗಲಿದಂದು ಎಲ್ಲರೂ ಕಣ್ಣೀರ ಕಡಲಲ್ಲಿ ಮುಳುಗಿರುತ್ತಾರೆ. ಅತ್ತು ಅತ್ತು ಸುಸ್ತಾಗಿರುತ್ತಾರೆ. ಊಟ ನಿದ್ದೆ ಬಿಟ್ಟು ಬಸವಳಿದಿರುತ್ತಾರೆ. ಇದು ಸಹಜ ಕೂಡಾ. ಅಗಲಿಕೆಯ ನೋವೇ ಅಂತಹದ್ದು.

ಆದರೆ, ಎಂದಾದರೂ ಮೃತದೇಹದೆದುರು ಫೋಟೋಶೂಟ್ ಮಾಡಿಸಿಕೊಂಡ ಬಗ್ಗೆ ಕೇಳಿದ್ದೀರಾ? ಅದೂ ಪುತ್ರಿಯೇ ಹೀಗೆ ಮಾಡಲು ಸಾಧ್ಯನಾ? ಕೇಳಿದರೆ ಅಚ್ಚರಿಯಾಗಬಹುದು. ಸದ್ಯ ಮಾಡೆಲ್‌ ಒಬ್ಬರು ಇಂತಹ ವಿಲಕ್ಷಣ ನಡೆಯ ಕಾರಣದಿಂದ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

ಹೌದು ಫ್ಲೋರಿಡಾದಲ್ಲಿ ಮಾಡಲು ಒಬ್ಬಳು ತನ್ನ ತಂದೆಯ ಶವದ ಮುಂದೆ ನಸುನಗುತ್ತಾ ಫೋಟೋಶೂಟ್ ಮಾಡಿಸಿಕೊಂಡಿದ್ದಾಳೆ. ಮಾಡೆಲ್ ಅನ್ನು ಜಯೆ ರಿವೇರಾ(20) ಎಂದು ಗುರುತಿಸಲಾಗಿದ್ದು, ಈಕೆ ಫ್ಲೋರಿಡಾದ ಮೈಮಿ ನಗರದ ಸಾಮಾಜಿಕ ಜಾಲತಾಣದ ಸ್ಟಾರ್ ಆಗಿದ್ದಾಳೆ. ಇದೀಗ ಈಕೆಯ ಫೋಟೋಶೂಟ್ ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಿವೇರಾ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾಳೆ. ಈಕೆ ತನ್ನ ತಂದೆಯ ಶವದ ಮುಂದೆ ನಿಂತು ಫೋಟೋಶೂಟ್ ಮಾಡಿಸಿದ್ದಾಳೆ. ಅಲ್ಲದೆ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡು, ‘ಚಿಟ್ಟೆ ದೂರ ಹಾರಿದೆ. ನೀವು ನನ್ನ ಬೆಸ್ಟ್ ಫ್ರೆಂಡ್. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಚೆನ್ನಾಗಿಯೇ ಬದುಕಿದ್ರಿ’ ಎಂದು ಬರೆದುಕೊಂಡಿದ್ದಾಳೆ ಮತ್ತು #DadLess ಎಂದು ಹ್ಯಾಶ್‍ಟ್ಯಾಗ್ ಕೂಡ ನೀಡಿದ್ದಾಳೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಆಕೆಯ ವಿರುದ್ಧ ಕಿಡಿಕಾರುತ್ತಿದ್ದಾರೆ.

ರಿವೇರಾ ತನ್ನ ತಂದೆಯ ಮೃತದೇಹದ ಮುಂದೆ ನಿಂತು ಸಖತ್ ಸ್ಟೈಲಿಶ್ ಆಗಿ ನಗುತ್ತಾ, ವಿಧ ವಿಧವಾಗಿ ಫೋಟೋಗಳಿಗೆ ಪೋಸ್ ನೀಡಿದ್ದಾಳೆ. ಇದು ನೆಟ್ಟಿಗರ ಸಿಟ್ಟಿಗೆ ಕಾರಣವಾಗಿದೆ. 20 ವರ್ಷದ ಈಕೆಗೆ 3 ಲಕ್ಷಕ್ಕೂ ಅಧಿಕ ಟಿಕ್ ಟಾಕ್ ಫಾಲೋವರ್ಸ್ ಇದ್ದಾರೆ.

ತಂದೆಗೆ ಗೌರವ ಕೊಡಿ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ನೀವು ಈ ಫೋಟೋಗಳನ್ನು ಕೂಡಲೇ ಡಿಲೀಟ್ ಮಾಡಿ ಕ್ಷಮೆ ಕೇಳಿ, ಸ್ವಲ್ಪವೂ ಸೂಕ್ಷ್ಮತೆ ಎಂಬುದಿಲ್ಲ. ಇದೊಂದು ಕೆಟ್ಟ ರೀತಿಯ ನಡವಳಿಕೆ ಎಂದೆಲ್ಲ ನೆಟ್ಟಿಗರು ಕಾಮೆಂಟ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.