Home latest EPFO ಚಂದಾದಾರರಿಗೆ ಗುಡ್ ನ್ಯೂಸ್ | ಸಿಗಲಿದೆ ಈ ಎಲ್ಲಾ ಪ್ರಯೋಜನಗಳು

EPFO ಚಂದಾದಾರರಿಗೆ ಗುಡ್ ನ್ಯೂಸ್ | ಸಿಗಲಿದೆ ಈ ಎಲ್ಲಾ ಪ್ರಯೋಜನಗಳು

Hindu neighbor gifts plot of land

Hindu neighbour gifts land to Muslim journalist

ಭವಿಷ್ಯ ನಿಧಿಯೊಂದಿಗೆ ತನ್ನ ಸದಸ್ಯರಿಗೆ ಆರೋಗ್ಯ, ಹೆರಿಗೆ ಮತ್ತು ಅಂಗವೈಕಲ್ಯ ಪ್ರಯೋಜನಗಳನ್ನು ಒದಗಿಸುವತ್ತ ಇಪಿಎಫ್‌ಒ (EPFO) ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ತನ್ನ ಸೇವಾ ವಿಸ್ತರಣೆ ಮಾಡುವ ಯೋಜನೆಯಲ್ಲಿದ್ದು, ಭವಿಷ್ಯ ನಿಧಿಗೆ ಸಂಬಂಧಿಸಿದ ಅನೇಕ ಪ್ರಯೋಜನಗಳನ್ನು ಉದ್ಯೋಗಿಗಳಿಗೆ ನೀಡಲು ಮುಂದಾಗಿದೆ. ತನ್ನ ವ್ಯಾಪ್ತಿಯನ್ನು ಆರೋಗ್ಯ, ಪಿಂಚಣಿ, ಹೆರಿಗೆ ಮತ್ತು ಅಂಗವೈಕಲ್ಯದ ಪ್ರಯೋಜನಗಳನ್ನು ವಿಸ್ತರಿಸುವ ತೀರ್ಮಾನ ಕೈಗೊಂಡಿದ್ದು, ಶೀಘ್ರದಲ್ಲೇ ಸದಸ್ಯರಿಗೆ ಒದಗಿಸುವ ಸಾಧ್ಯತೆಗಳು ದಟ್ಟವಾಗಿದೆ. ಇದೀಗ ಪ್ರಾಥಮಿಕ ಹಂತದ ಚರ್ಚೆಗಳು ನಡೆಯುತ್ತಿವೆ ಎಂಬ ಮಾಹಿತಿ ಇದ್ದು, ಉದ್ಯೋಗಿಗಳ ಮೂಲಭೂತ ಅವಶ್ಯಕತೆ, ಸಾಮಾಜಿಕ ಭದ್ರತಾ ಖಾತರಿಗಳ ಜೊತೆಗೆ, ಬಡತನ, ದುರ್ಬಲತೆ ಮತ್ತು ಸಾಮಾಜಿಕ ಬಹಿಷ್ಕಾರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿ ಅವರ ಏಳಿಗೆಯ ಜೊತೆಗೆ ರಕ್ಷಣೆ ನೀಡುವ ಯೋಜನೆ ರೂಪಿಸಿ ಭದ್ರತೆ ನೀಡುವುದರೊಟ್ಟಿಗೆ ಆರೋಗ್ಯ ರಕ್ಷಣೆ ಮತ್ತು ಮೂಲ ಆದಾಯ ಭದ್ರತೆಯ ಲಭ್ಯತೆಯ ವಾಸ್ತವಾಂಶಗಳನ್ನು ಸಹ ಒಳಗೊಂಡಿದೆ.

ಇಪಿಎಫ್‌ಒ ಪ್ರಸ್ತುತ ತನ್ನ ಸುಮಾರು ೪.೫ ಕೋಟಿ ಸದಸ್ಯರಿಗೆ ಪ್ರಯೋಜನಗಳನ್ನು ನೀಡಲು ಮಾತುಕತೆ ನಡೆಯುತ್ತಿದ್ದು ಸದ್ಯದಲ್ಲೇ ಉದ್ಯೋಗಿಗಳಿಗೆ ಇದರ ಲಾಭ ದೊರಕುವ ಸಾಧ್ಯತೆಯಿದೆ. ಈ 4.5 ಕೋಟಿ ಸದಸ್ಯರಲ್ಲಿ, ಶೇಕಡಾ 90 ರಷ್ಟು ಜನರು ಅಸಂಘಟಿತ ವಲಯದವರಾಗಿರುವುದರಿಂದ ಈ ಸೇವೆಯಿಂದ ಹೆಚ್ಚಿನ ಪ್ರಯೋಜನ ಸಿಗುವ ನಿರೀಕ್ಷೆಯಿದೆ. ಇದ್ದಲ್ಲದೆ ಭವಿಷ್ಯ ನಿಧಿಯ ಹೊರತಾಗಿ ಇಪಿಎಫ್‌ಒ ತನ್ನ ಸದಸ್ಯರಿಗೆ ಇನ್ನೂ ಕೆಲವು ಸಾಮಾಜಿಕ ಭದ್ರತೆ-ಸಂಬಂಧಿತ ಸೇವೆಗಳನ್ನು ಒದಗಿಸಬೇಕೆಂಬ ಯೋಚನೆಯಲ್ಲಿದೆ. ಮಹಿಳೆಯರ ಹೆರಿಗೆ ಪ್ರಯೋಜನಗಳಿಂದ ಹಿಡಿದು ವಿಕಲಚೇತನ ಸದಸ್ಯರಿಗೆ ಸಹಾಯದವರೆಗೆ ಅನೇಕ ಉತ್ಪನ್ನಗಳನ್ನು ಒಳಗೊಂಡಿರಬಹುದು ಎಂದು ಭಾವಿಸಲಾಗಿದ್ದು, ಈ ಯೋಚನೆ ಕೇವಲ ಪರಿಗಣನೆ ಯಲ್ಲಿರುವ ಕಾರಣ ಇದರ ಜಾರಿಯ ನಂತರವಷ್ಟೆ ಏನೆಲ್ಲ ಪ್ರಯೋಜನಗಳನ್ನು ಒಳಗೊಂಡಿದೆ ಎಂಬುದು ತಿಳಿಯುತ್ತದೆ.