Home News ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಬಿಎಂಡಬ್ಲ್ಯು ಎಲೆಕ್ಟ್ರಿಕ್ ವರ್ಷನ್ ಕಾರ್ !! | ಹೊಚ್ಚ ಹೊಸ ಐ4...

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಬಿಎಂಡಬ್ಲ್ಯು ಎಲೆಕ್ಟ್ರಿಕ್ ವರ್ಷನ್ ಕಾರ್ !! | ಹೊಚ್ಚ ಹೊಸ ಐ4 ಎಲೆಕ್ಟ್ರಿಕ್ ಸೆಡಾನ್ ನ ವಿಶೇಷತೆ ಹೇಗಿದೆ ಗೊತ್ತಾ ??

Hindu neighbor gifts plot of land

Hindu neighbour gifts land to Muslim journalist

ಭಾರತದ ಮಾರುಕಟ್ಟೆಯಲ್ಲಿ ಹೊಸ ವಿನ್ಯಾಸದ ಕಾರುಗಳಿಗೇನು ಕೊರತೆಯಿಲ್ಲ. ಒಂದರ ಹಿಂದೆ ಒಂದು ಎಂಬಂತೆ ಹೊಸ ಹೊಸ ವಿನ್ಯಾಸದ ಕಾರುಗಳು ಮಾರುಕಟ್ಟೆಯಲ್ಲಿ ಲಗ್ಗೆಯಿಡುತ್ತಲೇ ಇವೆ. ಅಂತೆಯೇ ‌ಬಿಎಂಡಬ್ಲ್ಯು ಮೋಟಾರ್ಸ್ ಕಂಪನಿಯು ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಸರಣಿ ಕಾರು ಮಾದರಿಗಳ ಬಿಡುಗಡೆಗೆ ಭರ್ಜರಿ ಸಿದ್ದತೆ ನಡೆಸುತ್ತಿದ್ದು, ಜಾಗತಿಕ ಮಾರುಕಟ್ಟೆಗಾಗಿ ಶೀಘ್ರದಲ್ಲೇ ತನ್ನ ಪ್ರಮುಖ ಕಾರು ಮಾದರಿಗಳ ಎಲೆಕ್ಟ್ರಿಕ್ ವರ್ಷನ್ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ವಿವಿಧ ರಾಷ್ಟ್ರಗಳು 2030ರಿಂದಲೇ ಸಂಪೂರ್ಣವಾಗಿ ಇಂಧನ ಚಾಲಿತ ವಾಹನಗಳ ಮಾರಾಟವನ್ನು ಪೂರ್ಣಪ್ರಮಾಣದಲ್ಲಿ ಸ್ಥಗಿತಗೊಳಿಸುವ ನಿರ್ಣಯ ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಸಹ ಹೆಚ್ಚಿಸಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಯುರೋಪ್ ಒಕ್ಕೂಟದಲ್ಲಿನ ಪ್ರಮುಖ ರಾಷ್ಟ್ರಗಳ ನಿರ್ಣಯದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವು ಸಾಕಷ್ಟು ಇಳಿಕೆಯಾಗುತ್ತಿದ್ದು, ಹೈಬ್ರಿಡ್ ಮತ್ತು ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳ ಮಾರಾಟವದಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬಂದಿದೆ.

2021ರಲ್ಲಿ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಬರೋಬ್ಬರಿ 8 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದ್ದು, ಮುಂಬರುವ ದಿನಗಳಲ್ಲಿ ವಿವಿಧ ಕಾರು ಕಂಪನಿಗಳು ಮತ್ತಷ್ಟು ಇವಿ ವಾಹನಗಳ ಮಾರಾಟವನ್ನು ಹೆಚ್ಚಿಸಲು ಸಜ್ಜಾಗುತ್ತಿವೆ.

ಬಿಎಂಡಬ್ಲ್ಯು ಗ್ರೂಪ್ ಕಂಪನಿಗಳ ಸಮ್ಮೆಳನದಲ್ಲಿ ತನ್ನ ಹೊಚ್ಚ ಹೊಸ ಐ4 ಎಲೆಕ್ಟ್ರಿಕ್ ಸೆಡಾನ್ ಮಾದರಿಯನ್ನು ಈಗಾಗಲೇ ಅನಾವರಣಗೊಳಿಸಲಾಗಿದ್ದು, ಹೊಸ ಕಾರು ಮಾದರಿಯನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಪರಿಚಯಿಸುವ ಸುಳಿವು ನೀಡಿದೆ. ಹೊಸ ಕಾರು ಮಾದರಿಯನ್ನು ಕಂಪನಿಯು ಇದೀಗ ಭಾರತದಲ್ಲೂ ಅನಾವರಣಗೊಳಿಸುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಪ್ರತಿಸ್ಪರ್ಧಿ ಎಲೆಕ್ಟ್ರಿಕ್ ಮಾದರಿಗಳಿಂತಲೂ ಇದು ಉತ್ತಮ ಮೈಲೇಜ್ ಮತ್ತು ತಂತ್ರಜ್ಞಾನ ಸೌಲಭ್ಯದೊಂದಿಗೆ ಸ್ಪೋಟಿ ವಿನ್ಯಾಸ ಹೊಂದಿದೆ.

ಐ4 ಕಾರು ಮಾದರಿಯನ್ನು ಗ್ರ್ಯಾನ್ ಕೂಪೆ ಸರಣಿ ಮಾದರಿಗಳನ್ನು ವಿನ್ಯಾಸವನ್ನು ನಿರ್ಮಾಣ ಮಾಡಿರುವ ಬಿಎಂಡಬ್ಲ್ಯು ಕಂಪನಿಯು ಇದೀಗ ಹೊಸ ಕಾರಿನ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸುತ್ತಿದ್ದು, ಗ್ರಾಹಕರ ಬೇಡಿಕೆಯಂತೆ ಹೊಸ ಕಾರು ಇಡ್ರೈವ್35, ಇಡ್ರೈವ್40 ಮತ್ತು ಟಾಪ್ ಎಂಡ್ ಮಾದರಿಯಾಗಿ ಎಂ50 ಪರ್ಫಾಮೆನ್ಸ್ ವೆರಿಯೆಂಟ್ ಹೊಂದಿರಲಿದೆ. ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಇಡ್ರೈವ್35, ಇಡ್ರೈವ್40 ಮತ್ತು ಎಂ50 ಪರ್ಫಾಮೆನ್ಸ್ ವೆರಿಯೆಂಟ್‌ಗಳಲ್ಲಿ ಬ್ಯಾಟರಿ ಪ್ಯಾಕ್ ಆಯ್ಕೆ ನೀಡಲಿದ್ದು, ಇವು ಪ್ರತಿ ಚಾರ್ಚ್‌ಗೆ ಗರಿಷ್ಠ 590 ಕಿ.ಮೀ ಮೈಲೇಜ್ ಹಿಂದಿರುಗಿಸಲಿವೆ.

390kW ಪವರ್ ಔಟ್‌ಪುಟ್‌ನೊಂದಿಗೆ 530 ಬಿಎಚ್‌ಪಿ ಉತ್ಪಾದನೆ ಹೊಂದಿರುವ ಹೊಸ ಕಾರು ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಮೈಲೇಜ್ ವಿಚಾರದಲ್ಲೂ ಗಮನಸೆಳೆಯಲಿದ್ದು, ಕೇವಲ ನಾಲ್ಕು ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳುವ ಪರ್ಫಾಮೆನ್ಸ್ ಮಾದರಿಯಾಗಿ ಗುರುತಿಸಿಕೊಳ್ಳಲಿದೆ.
ಜೊತೆಗೆ ಬಿಎಂಡಬ್ಲ್ಯು ಕಂಪನಿಯು ಅಭಿವೃದ್ದಿಪಡಿಸಿರುವ ಐಡ್ರೈವ್ 8 ಟೆಕ್ನಾಲಜಿ ಸೌಲಭ್ಯವು ಕೂಡಾ ಐಷಾರಾಮಿ ಕಾರುಗಳ ಬಳಕೆಗೆ ಹೊಸ ಅನುಭವ ಒದಗಿಸುತ್ತಿದ್ದು, ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲೂ ಬಿಎಂಡಬ್ಲ್ಯು ಕಂಪನಿಯು ಮುಂಚೂಣಿ ಸಾಧಿಸುವ ತವಕದಲ್ಲಿದೆ.

ಹೊಸ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯು ಜರ್ಮನಿಯ ಡಿಂಗೋಲ್ಫಿಂಗ್ ಘಟಕದಲ್ಲಿ ಈಗಾಗಲೇ ಆರಂಭವಾಗಿದ್ದು, ಹೊಸ ಇವಿ ಕಾರುಗಳನ್ನು ಬಿಎಂಡಬ್ಲ್ಯು ಕಂಪನಿಯು ಸದ್ಯ ಸಿಬಿಯು ಆಮದು ನೀತಿ ಅಡಿಯಲ್ಲಿಯೇ ಭಾರತಕ್ಕೆ ಆಮದು ಮಾಡಿಕೊಂಡು ಮಾರಾಟ ಮಾಡಲಿದೆ.

ಭಾರತದಲ್ಲಿ ಸದ್ಯ ಐಷಾರಾಮಿ ಕಾರುಗಳ ಮಾರಾಟ ವಿಭಾಗದಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಗೆ ಮತ್ತು ಬಿಎಂಡಬ್ಲ್ಯು ಕಂಪನಿಯ ನಡುವೆ ಸಾಕಷ್ಟು ಪೈಪೋಟಿ ನಡೆಯುತ್ತಿದ್ದು, ಬಿಎಂಡಬ್ಲ್ಯು ಹೊಸ ಕಾರು ಉತ್ಪನ್ನಗಳು ಮರ್ಸಿಡಿಸ್‌ಗೆ ಪೈಪೋಟಿ ನೀಡುವ ತವಕದಲ್ಲಿವೆ.
ಬಿಎಂಡಬ್ಲ್ಯು ಕಂಪನಿಯು ಭಾರತದಲ್ಲಿ ಈಗಾಗಲೇ ಐಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಿದ್ದು, ಎರಡನೇ ಕಾರು ಮಾದರಿಯಾಗಿ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಮತ್ತು ಮೂರನೇ ಕಾರು ಮಾದರಿಯಾಗಿ ಐ4 ಎಲೆಕ್ಟ್ರಿಕ್ ಸೆಡಾನ್ ಮಾದರಿಯನ್ನು ಬಿಡುಗಡೆ ಮಾಡಬಹುದಾಗಿದೆ.

ಭಾರತದಲ್ಲಿ ಸದ್ಯ ವಿವಿಧ ಸರಣಿಗಳಲ್ಲಿ ಒಟ್ಟು 16 ಕಾರುಗಳ ಮಾರಾಟ ಹೊಂದಿರುವ ಬಿಎಂಡಬ್ಲ್ಯು ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಕಾರುಗಳಲ್ಲಿ ಎಲೆಕ್ಟ್ರಿಕ್ ಕಾರು ಮಾದರಿಗಳು ಸಹ ಪ್ರಮುಖ ಆಕರ್ಷಣೆಯಾಗಿವೆ.