Home latest ಇಂದು ರಾಜ್ಯದ ಹಲವೆಡೆ ಭೂಕಂಪನ, ನಸುಕಿನ ವೇಳೆ ನಡೆದ ಘಟನೆ, ಮನೆಯಿಂದ ಹೊರಗೋಡಿ ಬಂದ...

ಇಂದು ರಾಜ್ಯದ ಹಲವೆಡೆ ಭೂಕಂಪನ, ನಸುಕಿನ ವೇಳೆ ನಡೆದ ಘಟನೆ, ಮನೆಯಿಂದ ಹೊರಗೋಡಿ ಬಂದ ಜನ!

Hindu neighbor gifts plot of land

Hindu neighbour gifts land to Muslim journalist

ಕರ್ನಾಟಕದ ರಾಜ್ಯದ ಹಲವು ಕಡೆಗಳಲ್ಲಿ ಇಂದು ನಸುಕಿನ ವೇಳೆ ಭೂಕಂಪನವಾಗಿದೆ. ಕೊಡಗು ಮತ್ತು ಹಾಸನ ಜಿಲ್ಲೆಯ ವಿವಿಧೆಡೆ ಗುರುವಾರ (ಜೂನ್ 23) ನಸುಕಿನಲ್ಲಿ ಭೂಮಿ ಕಂಪಿಸಿದೆ ಭೂ ಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆ ದಾಖಲಿಸಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಆಯುಕ್ತರು ಭೂಕಂಪನ ಸಂಭವಿಸಿರುವುದನ್ನು ದೃಢಪಡಿಸಿದ್ದಾರೆ. ಹಾಸನ ಜಿಲ್ಲೆಯ, ಅರಕಲಗೂಡು, ಹೊಳೆನರಸೀಪುರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ನಸುಕಿನ 4.30ರಿಂದ 5 ಗಂಟೆಯ ಅವಧಿಯಲ್ಲಿ ಭೂಮಿಯು ಕಂಪಿಸಿದೆ. ಹೊಳೆನರಸೀಪುರ ತಾಲ್ಲೂಕಿನ ಮನುಗನಹಳ್ಳಿ ಗ್ರಾಮವು ಭೂಕಂಪನ ಕೇಂದ್ರವಾಗಿತ್ತು. ಭಯಬಿದ್ದ ಜನರು, ನಿದ್ರೆಯಲ್ಲಿದ್ದವರು ಗಾಬರಿಗೊಂಡು ಮನೆಗಳಿಂದ ಹೊರಗೆ ಓಡಿ ಬಂದಿದ್ದರು. ಇದೀಗ ಭೂಕಂಪ ಆಗಿರುವ ಬಗ್ಗೆ ಅಧಿಕಾರಿಗಳು ದೃಢಪಡಿಸಿದ್ದಾರೆ.

ನಸುಕಿನ 4.38ರಲ್ಲಿ ಭೂಮಿ ಲಘುವಾಗಿ ಕಂಪಿಸಿದೆ. ಅರಕಲಗೂಡು ಮತ್ತು ಹೊಳೆನರಸೀಪುರ ತಾಲ್ಲೂಕುಗಳ
ನಸುಕಿನ 4.38ರಲ್ಲಿ ಭೂಮಿ ಲಘುವಾಗಿ ಕಂಪಿಸಿದೆ. ಅರಕಲಗೂಡು ಮತ್ತು ಹೊಳೆನರಸೀಪುರ ತಾಲ್ಲೂಕುಗಳ ಜನರಿಗೆ ಭೂಮಿಯು ಕಂಪಿಸಿದ್ದು ಸ್ಪಷ್ಟವಾಗಿ ಅನುಭವಕ್ಕೆ ಬಂದಿದೆ. ಭೂಮಿಯು ಕಂಪಿಸುವ ಮೊದಲು ದೊಡ್ಡ ಸದ್ದು ಕೇಳಿಸಿತು ಎಂದು ಹಲವರು ಹೇಳಿದ್ದಾರೆ. ಅರಕಲಗೂಡು ಪಟ್ಟಣ, ತಾಲ್ಲೂಕಿನ ಮುದ್ದನಹಳ್ಳಿ, ಹನೆಮಾರನಹಳ್ಳಿ, ಕಾರಳ್ಳಿ, ಹೊಳೆನರಸೀಪುರ ತಾಲ್ಲೂಕಿನ ಚಿಟ್ನಳ್ಳಿ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ ಭೂಮಿಯು ಕಂಪಿಸಿದೆ. ಭೂಮಿಯು ಅಲುಗಾಡುತ್ತಿರುವ ಅನುಭವವಾದ ತಕ್ಷಣ ಜನರು ಭಯಗೊಂಡು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಈ ಘಟನೆಯು ಜನರಲ್ಲಿ ಭೀತಿ ಉಂಟು ಮಾಡಿದೆ.

ಇಷ್ಟು ಮಾತ್ರವಲ್ಲದೇ, ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ರೇಂಜರ್ ಬ್ಲಾಕ್, ನೇಗಳ್ಳಿ ಗ್ರಾಮದಲ್ಲಿ ಹಲವರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಮಡಿಕೇರಿ ತಾಲೂಕಿನ ಮಡಿಕೇರಿ ನಗರ ಮತ್ತು ದೇವಸೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿಯೂ ಜನರಿಗೆ ಇಂಥದ್ದೇ ಅನುಭವವಾಗಿದೆ. ನಸುಕಿನ 4:37ಕ್ಕೆ ಭೂಕಂಪನವಾಗಿದೆ ಎಂದು ಮೂಲಗಳು ದೃಢಪಡಿಸಿವೆ.