Home latest ಕೋಟಿಗಟ್ಟಲೆ ಹಣ ವ್ಯಯಿಸಿ ಮದುವೆ ಮಾಡಿಕೊಟ್ಟ ಪೋಷಕರು | ಇತ್ತ ಕಡೆ ಗಂಡ, ಹೆಂಡತಿಯ ಮೇಲೆ...

ಕೋಟಿಗಟ್ಟಲೆ ಹಣ ವ್ಯಯಿಸಿ ಮದುವೆ ಮಾಡಿಕೊಟ್ಟ ಪೋಷಕರು | ಇತ್ತ ಕಡೆ ಗಂಡ, ಹೆಂಡತಿಯ ಮೇಲೆ ಮೂತ್ರ ಮಾಡಿ ವಿಕೃತಿ ಮೆರೆದ, ಕೊನೆಗೆ ಹೆಂಡತಿ ಮಾಡಿದ್ದಾದರೂ ಏನು ಗೊತ್ತೇ?

Hindu neighbor gifts plot of land

Hindu neighbour gifts land to Muslim journalist

ಹೆತ್ತವರು ಹೆತ್ತ ಮಕ್ಕಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂಬ ಆಸೆ ಇರುವುದು ಸಹಜ. ಅದರಲ್ಲೂ ಹೆಣ್ಣುಮಗಳ ಮದುವೆ. ಹೆಣ್ಣು ಮಗಳ ಮದುವೆ ಎಂದರೆ ಖರ್ಚು ಜಾಸ್ತಿ. ಅಂತೆಯೇ ಇಲ್ಲೊಂದು ಕಡೆ ಪೋಷಕರು
ಕೋಟ್ಯಂತರ ರೂ.ವ್ಯಯಿಸಿ ಅದ್ಧೂರಿಯಾಗಿ ಮದುವೆ ಮಾಡಿ, ಕಾರು, ಚಿನ್ನಾಭರಣ, ನಗದು ನೀಡಿ ಮದುವೆ ಮಾಡಿದ್ದಾರೆ. ಕೋಟಿ ಖರ್ಚು ಮಾಡಿದರೇನು? ಮಗಳು ನೆಮ್ಮದಿಯಾಗಿದ್ದಾಳಾ ? ಅದೇ ಈ ಘಟನೆಯ ಮುಖ್ಯ ಟ್ವಿಸ್ಟ್.

ಹೈದರಾಬಾದ್ ಮೂಲದ 28 ವರ್ಷದ ಮಹಿಳೆಯೇ ಈಗ ನೊಂದು ಬೆಂದು ಹೋದ ಸಂತ್ರಸ್ತೆ. ಈಕೆ ಕೊಟ್ಟ ದೂರಿನ ಆಧಾರದ ಮೇಲೆ ಖಾಸಗಿ ಕಂಪನಿ ಉದ್ಯೋಗಿ ಸುದೀಪ್ ವಿರುದ್ಧ ಬಸವನಗುಡಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆಯ ಸಂದರ್ಭದಲ್ಲಿ 55 ಲಕ್ಷ ರೂ. ಮೌಲ್ಯದ ಮಿನಿ ಕೂಪರ್ ಕಾರು, 200 ಕೆಜಿ ಬೆಳ್ಳಿ, 4 ಕೆ.ಜಿ. ಚಿನ್ನಾಭರಣ ವನ್ನು ಸುದೀಪ್‌ಗೆ ವರದಕ್ಷಿಣೆಯಾಗಿ ಕೊಟ್ಟಿದ್ದರು. ಮದುವೆ ಕಾರ್ಯಕ್ರಮಕ್ಕಾಗಿ ಒಟ್ಟಾರೆ 6 ಕೋಟಿ ರೂ. ಖರ್ಚು ಮಾಡಲಾಗಿತ್ತು. ಇಷ್ಟೆಲ್ಲ ಕೊಟ್ಟರೂ ತೃಪ್ತಿ ಇಲ್ಲದ ಈ ಹಣಬಾಕ ಪತಿ ಸುದೀಪ್, ತವರು ಮನೆಯಿಂದ ಮತ್ತಷ್ಟು ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡಿದ್ದಾನೆ.

ಅಷ್ಟು ಮಾತ್ರವಲ್ಲದೇ, ಹೆಂಡತಿಯ ತಂದೆಯ ಹೆಸರಿನಲ್ಲಿದ್ದ 2 ಕಂಪನಿಗಳನ್ನು ಆಕೆಯ ಹೆಸರಿಗೆ ಬರೆಸಿ, ಅದರಿಂದ ಬರುವ ಲಾಭವನ್ನು ಆರೋಪಿ ಪಡೆದುಕೊಂಡಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದಾಳೆ.

ಈ ಪತಿ ಡ್ರಗ್ಸ್ ವ್ಯಸನಿಯಾಗಿದ್ದು, ಸ್ನೇಹಿತರನ್ನು ಮನೆಗೆ ಕರೆಸುತ್ತಿದ್ದ. ಡ್ರಗ್ಸ್ ಸೇವಿಸಿದ ಬಳಿಕ ಅಮಲಿನಲ್ಲಿ ಪತ್ನಿಯ ತಲೆಯ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆಯುತ್ತಿದ್ದ. ಈ ಬಗ್ಗೆ ಪ್ರಶ್ನಿಸಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಸುತ್ತಿದ್ದ. ಇದರಿಂದ ನೊಂದ ಪತ್ನಿ ಈ ವಿಚಾರವನ್ನು ಪತಿಯ ಪಾಲಕರಿಗೆ ತಿಳಿಸಿದ್ದಳು. ಆದರೆ, ಅವರು ಪುತ್ರನಿಗೆ ಪ್ರೋತ್ಸಾಹ ಕೊಟ್ಟಿದ್ದಾರೆ. ನನ್ನನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಸಂತ್ರಸ್ತೆ ಉಲ್ಲೇಖೀಸಿದ್ದಾಳೆ. ಬಸವನ ಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.