Home News ಪಕ್ಕದ ಮನೆಯ ಹೆಂಗಸಿನ ಹೆಸರು ಹಿತ್ತಲಿನ ಮನೆಯ ನಾಯಿಗೆ !!| ತನ್ನ ಪತ್ನಿಯ ಹೆಸರು ನಾಯಿಗೆ...

ಪಕ್ಕದ ಮನೆಯ ಹೆಂಗಸಿನ ಹೆಸರು ಹಿತ್ತಲಿನ ಮನೆಯ ನಾಯಿಗೆ !!| ತನ್ನ ಪತ್ನಿಯ ಹೆಸರು ನಾಯಿಗೆ ಇಟ್ಟಿದ್ದಕ್ಕೆ ಗರಂ ಆದ ಗಂಡ | ಬಳಿಕ ಅಲ್ಲಿ ಆಗಿದ್ದೇನು ಗೊತ್ತೇ?

Hindu neighbor gifts plot of land

Hindu neighbour gifts land to Muslim journalist

ಮನೆಯಲ್ಲಿ ನಾಯಿ ಸಾಕುವುದು ಮಾಮೂಲು. ಹಾಗೆಯೇ ಆ ನಾಯಿಗೆ ಒಂದು ಮುದ್ದಾದ ನಾಮಕರಣ ಕೂಡ ಮಾಡಲಾಗುತ್ತದೆ. ಆ ನಾಯಿ ಕೂಡ ಆ ಹೆಸರನ್ನು ಕರೆದ ತಕ್ಷಣ ಎಲ್ಲಿದ್ದರೂ ಓಡೋಡಿ ಯಜಮಾನನ ಬರುತ್ತದೆ. ಹೀಗಿರುವಾಗ ಇಲ್ಲೊಂದು ಕಡೆ ನಾಯಿಗೆ ಹೆಸರು ಇಟ್ಟದ್ದೇ ತಪ್ಪಾಯಿತೇನೋ ಎಂಬಂತಹ ಘಟನೆಯೊಂದು ನಡೆದಿದೆ.

ಹೌದು, ತನ್ನ ಮನೆಯ ನಾಯಿಗೆ ‘ಸೋನು’ ಎಂದು ಹೆಸರಿಟ್ಟಿದ್ದಕ್ಕೆ ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿದ ಘಟನೆ ಗುಜರಾತ್ ನಲ್ಲಿ ನಡೆದಿದೆ. ನೀತಾಬೆನ್ ಸರ್ವಯ್ಯ (35) ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪ್ರಸ್ತುತ ಭಾವನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯ ನೆರೆಹೊರೆಯವರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ನೀತಾಬೆನ್ ಸರ್ವಯ್ಯ ತನ್ನ ನಾಯಿಗೆ ‘ಸೋನು’ ಎಂದು ಹೆಸರಿಟ್ಟಿದ್ದಾರೆ. ಪ್ರಾಸಂಗಿಕವಾಗಿ, ‘ಸೋನು’ ಎಂಬುದು ನಿತಾಬೆನ್ ಸರ್ವಯ್ಯ ಅವರ ಪಕ್ಕದ ಮನೆಯಲ್ಲಿ ವಾಸಿಸುವ ಸುರಭಾಯ್ ಭಾರವಾಡ್ ಅವರ ಹೆಂಡತಿಯ ಹೆಸರೂ ಆಗಿದೆ. ಅದೇ ವಿಷಯ ಸುರಭಾಯಿ ಭಾರವಾಡರಿಗೆ ಇಷ್ಟವಾಗಲಿಲ್ಲ. ತಮ್ಮ ಪತ್ನಿಯ ಹೆಸರನ್ನು ನಾಯಿಗಿಟ್ಟ ಕಾರಣಕ್ಕೆ ಸುರಭಾಯ್ ತನ್ನ ಕೆಲವು ಸಹಚರರೊಂದಿಗೆ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ನೀತಾಬೆನ್ ಒಬ್ಬರೇ ಮನೆಯಲ್ಲಿದ್ದಾಗ, ಪಕ್ಕದ ಮನೆ
ಸುರಭಾಯ್ ಭಾರವಾಡ್ ಮತ್ತು ಅವರ 5 ಸಹಚರರು ಮನೆಗೆ ಪ್ರವೇಶಿಸಿದ್ದಾರೆ. ನಿತಾಬೆನ್ ಅವರನ್ನು ನಿಂದಿಸಿದ್ದಾರೆ ಮತ್ತು ನಾಯಿಗೆ ‘ಸೋನು’ ಎಂದು ಹೆಸರಿಟ್ಟಿದ್ದಕ್ಕಾಗಿ ವಾಗ್ವಾದ ನಡೆದಿದೆ. ನಿತಾಬೆನ್ ಅವರ ಮಾತನ್ನು ನಿರ್ಲಕ್ಷಿಸಿ ತನ್ನ ಅಡುಗೆ ಮನೆಗೆ ಹೋಗಿದ್ದಾರೆ. ಅವರನ್ನು ಹಿಂಬಾಲಿಸಿ ಬಲವಂತವಾಗಿ ಅಡುಗೆ ಕೋಣೆಗೆ ನುಗ್ಗಿ ನಿತಾಬೆನ್ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಸ್ವಲ್ಪ ಸಮಯದ ನಂತರ ನಿತಾಬೆನ್ ಅವರ ಪತಿ ಮನೆಗೆ ಬಂದಿದ್ದಾರೆ. ಬೆಂಕಿಯನ್ನು ಕಂಬಳಿಗಳ ಮೂಲಕ ನಂದಿಸಿದ್ದಾರೆ.

ಘಟನೆಯಲ್ಲಿ ನಿತಾಬೆನ್ ಅವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿಂದೆಯೂ ನೀರಿನ ವಿಚಾರವಾಗಿ ನಿತಾಬೆನ್ ಮತ್ತು ಆರೋಪಿಗಳ ನಡುವೆ ಹಲವು ಬಾರಿ ಜಗಳ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 6 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.