Home Interesting ಸಾಕು ನಾಯಿಗೆ ಸೀಮೆಎಣ್ಣೆ ಸುರಿದು ಸಜೀವವಾಗಿ ದಹನ ಮಾಡಿದ ಪಾಪಿ|ನೆರೆಹೊರೆಯವರ ಆರೋಪದ ಮೇರೆಗೆ ಪೊಲೀಸರಿಂದ ಪ್ರಕರಣ...

ಸಾಕು ನಾಯಿಗೆ ಸೀಮೆಎಣ್ಣೆ ಸುರಿದು ಸಜೀವವಾಗಿ ದಹನ ಮಾಡಿದ ಪಾಪಿ|ನೆರೆಹೊರೆಯವರ ಆರೋಪದ ಮೇರೆಗೆ ಪೊಲೀಸರಿಂದ ಪ್ರಕರಣ ದಾಖಲು

Hindu neighbor gifts plot of land

Hindu neighbour gifts land to Muslim journalist

ಮಾನವೀಯತೆಯೇ ಇಲ್ಲದಂತೆ ಸಾಕು ನಾಯಿಗೆ ಸೀಮೆಎಣ್ಣೆ ಸುರಿದು ಸಜೀವವಾಗಿ ದಹನ ಮಾಡಿದ ಕೇರಳದ ವ್ಯಕ್ತಿಯ ವಿರುದ್ಧ ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚೇಲಕ್ಕರದ ಚಕ್ಕನಪಾಡಿ ಮೂಲದ ಪುರುಷೋತ್ತಮನ್ (47)ಎಂಬುವವರು ಈ ಕೃತ್ಯ ಎಸಗಿದವರಾಗಿದ್ದು, ಇವರ ವಿರುದ್ಧ ಸಾಕು ನಾಯಿಯನ್ನು ಕೊಂದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ನಾಯಿಗೆ ಹಾಕಿದ್ದ ಕುತ್ತಿಗೆ ಪಟ್ಟಿಯನ್ನು ಆಗಾಗ್ಗೆ ತುಂಡರಿಸಿ ಹೊರಗೆ ಹೋಗುತ್ತಿರುವ ಬಗ್ಗೆ ದೂರು ನೀಡುತ್ತಿದ್ದರು.ಇದಲ್ಲದೆ ಸಾಕು ನಾಯಿ ಆತನಿಗೆಯೇ ಕಚ್ಚಿದ್ದು ಇದರಿಂದ ಕೆರಳಿ ನಾಯಿಗೆ ನಿರ್ದಯವಾಗಿ ಹೊಡೆದ ನಂತರ ಜೀವಂತವಾಗಿದ್ದ ಮೂಕಪ್ರಾಣಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ.

ಬೆಂಕಿ ಹಚ್ಚಿದ್ದ ಬಳಿಕ ನೋವಿನಿಂದ ನರಳಿಕೊಂಡು ಅಸಹಾಯಕತೆಯಿಂದ ಓಡುತ್ತಿರುವ ನಾಯಿಯನ್ನು ಕಂಡು ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ನಾಯಿಯನ್ನು ಮನೆ ಆವರಣದಲ್ಲೇ ಹೂತು ಹಾಕಲಾಗಿದ್ದು,ಇತನ ವಿರುದ್ಧ
ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.