Home News UP: ಶೀತ ಎಂದು ಆಸ್ಪತ್ರೆಗೆ ಬಂದ ಬಾಲಕನಿಗೆ ಸಿಗರೇಟ್ ಸೇದಿಸಿದ ವೈದ್ಯ!!

UP: ಶೀತ ಎಂದು ಆಸ್ಪತ್ರೆಗೆ ಬಂದ ಬಾಲಕನಿಗೆ ಸಿಗರೇಟ್ ಸೇದಿಸಿದ ವೈದ್ಯ!!

Hindu neighbor gifts plot of land

Hindu neighbour gifts land to Muslim journalist

UP: ಶೀತ ಎಂದು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದ ಬಾಲಕನಿಗೆ ವೈದ್ಯನೊಬ್ಬ ಸಿಗರೇಟ್ ಸೇರಿಸಿದ ಘಟನೆ ಬೆಳಕಿಗೆ ಬಂದಿದೆ.

ಹೌದು, ಲೆ ಉತ್ತರ ಪ್ರದೇಶದ ಜಲೌನ್‌ನಲ್ಲಿ ಸರ್ಕಾರಿ ವೈದ್ಯರೊಬ್ಬರು ತಮ್ಮ ಬಳಿಗೆ ಶೀತಾ ಎಂದು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದ ಬಾಲಕನಿಗೆ ಸಿಗರೇಟ್ ಸೇದಲು ಹೇಳಿಕೊಡತ್ತಿದ್ದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸುರೇಶ್ ಚಂದ್ರ ಎಂಬ ವೈದ್ಯರು ಸುಮಾರು ಐದು ವರ್ಷ ವಯಸ್ಸಿನ ಬಾಲಕನ ಬಾಯಿಯಲ್ಲಿ ಸಿಗರೇಟ್ ಇಡುತ್ತಿರುವುದು ಹರಿದಾಡುತ್ತಿರುವ ವಿಡಿಯೊದಲ್ಲಿ ಕಂಡುಬಂದಿದೆ. ಲೈಟರ್ ಮೂಲಕ ಸಿಗರೇಟನ್ನು ಹೊತ್ತಿಸಿದ ವೈದ್ಯ, ಹೊಗೆಯನ್ನು ಒಳಗೆಳೆದುಕೊಳ್ಳುವಂತೆ ಪ್ರೇರೇಪಿಸುತ್ತಿರುವುದು ಕಂಡುಬಂದಿದೆ.

ಅಲ್ಲದೆ ಬಾಲಕ ಉಸಿರು ಎಳೆದುಕೊಳ್ಳಲು ವಿಫಲವಾದಾಗ ಅವನ ಬಾಯಿಯಿಂದ ಸಿಗರೇಟನ್ನು ಹೊರತೆಗೆದ ವೈದ್ಯ, ಹೇಗೆ ಧೂಮಪಾನ ಮಾಡಬೇಕೆಂದು ಪ್ರದರ್ಶಿಸುತ್ತಾನೆ. ಬಳಿಕ, ಡಾ. ಚಂದ್ರ ಮತ್ತೆ ಸಿಗರೇಟನ್ನು ಹುಡುಗನ ಬಾಯಿಯಲ್ಲಿ ಇರಿಸಿ, ಅದನ್ನು ಲೈಟರ್ ಮೂಲಕ ಹೊತ್ತಿಸುತ್ತಾನೆ. ಉಸಿರು ಎಳೆದುಕೊಳ್ಖಲು ಹೇಳುತ್ತಾನೆ. ಬಾಲಕ ಅದನ್ನು ಮಾಡಲು ಸಾಧ್ಯವಾಗದಾಗ, ಇಂದಿನ ತರಬೇತಿ ಇಷ್ಟೇ, ಈಗ ಹೋಗಿ ನಾಳೆ ಮತ್ತೆ ಬಾ ಮತ್ತಷ್ಟು ಕಲಿಸುತ್ತೇನೆ ಎಂದು ವೈದ್ಯ ಹೇಳುತ್ತಾನೆ.

ಈ ಸಂಬಂಧ ಮುಖ್ಯ ವೈದ್ಯಾಧಿಕಾರಿ (ಸಿಎಂಒ) ನರೇಂದ್ರ ದೇವ್ ಶರ್ಮಾ ಅವರ ದೂರಿನ ಮೆರೆಗೆ ಕುಥೌಂಡ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 125 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ ಬ್ರಹ್ಮ ಪ್ರಕಾಶ್ ತಿವಾರಿ ತಿಳಿಸಿದ್ದಾರೆ.