Home News Ration Card: ಅರ್ಹತೆಯೇ ಇಲ್ಲದೆ BPL ಕಾರ್ಡ್ ಹೊಂದಿದ್ದೀರಾ? ಮನೆ ಮನೆಗೆ ಬರುತ್ತಾರೆ ಅಧಿಕಾರಿಗಳು.....

Ration Card: ಅರ್ಹತೆಯೇ ಇಲ್ಲದೆ BPL ಕಾರ್ಡ್ ಹೊಂದಿದ್ದೀರಾ? ಮನೆ ಮನೆಗೆ ಬರುತ್ತಾರೆ ಅಧಿಕಾರಿಗಳು.. ಹುಷಾರ್!!

Hindu neighbor gifts plot of land

Hindu neighbour gifts land to Muslim journalist

Ration Card : ರಾಜ್ಯದಲ್ಲಿ ಅನರ್ಹರಾಗಿದ್ದರು ಕೂಡ ಬಿಪಿಎಲ್ ಕಾರ್ಡ್ಗಳನ್ನು ಅಕ್ರಮವಾಗಿ ಹೊಂದಿರುವವರ ಸಂಖ್ಯೆ ಹೆಚ್ಚಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡರು ಕೂಡ ಇದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಂಥವರಿಗೆ ರುಚಿಮುಟ್ಟಿಸಲು ಮುಂದಾಗಿರುವ ಸರ್ಕಾರ ಇದೀಗ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನರ್ಹರ ಪತ್ತೆಗೆ ಮುಂದಾಗಿದೆ. ಹೀಗಾಗಿ ನೀವು ಅರ್ಹತೆ ಇಲ್ಲದೆ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಜಾಗೃತರಾಗಿರಿ. ಅದನ್ನು ತಕ್ಷಣ ಹಿಂದಿರುಗಿಸಿ ಮುಂದಾಗುವ ಸಮಸ್ಯೆಯಿಂದ ಬಚಾವ್ ಆಗಿ.

ಹೌದು ಬೆಂಗಳೂರಿನಲ್ಲಿ ಸದ್ಯ ವಿಧಾನಸಭಾ ಅಧಿವೇಶನ ನಡೆಯುತ್ತಿದ್ದು ಇದರಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಅವರು ಅನರ್ಹ ಬಿಪಿಎಲ್‌ ಫಲಾನುಭವಿಗಳನ್ನು ಪತ್ತೆ ಹಚ್ಚಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಿತಿ ರಚಿಸಿ, ಮನೆ ಮನೆಗೆ ಭೇಟಿ ನೀಡಿ, ಖುದ್ದಾಗಿ ಪರಿಶೀಲಿಸಲು ಉದ್ದೇಶಿಸಲಾಗಿದೆ ತಿಳಿಸಿದ್ದಾರೆ.

ಅಲ್ಲದೆ ಬಿಪಿಎಲ್‌ ಕಾರ್ಡ್‌ ಹೊಂದಿರುವವರ ಪೈಕಿ ಸುಮಾರು 20 ಲಕ್ಷ ಅನರ್ಹರಿದ್ದಾರೆ. ಇವರೆಲ್ಲರೂ ಎಪಿಎಲ್‌ ಕಾರ್ಡ್‌ ಪಡೆಯಬೇಕಿತ್ತು. ಈ ಹಿಂದೆ ಅನರ್ಹ ಬಿಪಿಎಲ್‌ ಪಡಿತರ ಚೀಟಿದಾರರನ್ನು ಪತ್ತೆ ಹಚ್ಚಲು ಪರಿಷ್ಕರಣೆಗೆ ಮುಂದಾದಾಗ ತೀವ್ರ ವಿರೋಧ ವ್ಯಕ್ತವಾಯಿತು. ಹೀಗಾಗಿ, ಈಗ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒ, ಗ್ರಾಮ ಲೆಕ್ಕಿಗ ಸೇರಿದಂತೆ ಮುಂತಾದವರನ್ನು ಒಳಗೊಂಡ ಸಮಿತಿ ರಚಿಸಿ, ಈ ಸಮಿತಿ ಮೂಲಕ ಖುದ್ದಾಗಿ ಪರಿಶೀಲಿಸಲು ನಿರ್ಧರಿಸಲಾಗಿದೆ ಎಂದರು.