Home latest ಇನ್ಮುಂದೆ ವಿಮಾನ ಪ್ರಯಾಣಿಕರಿಗಿಲ್ಲ ನೋ ಟೆನ್ಶನ್ | ಈ ಆಪ್ ಇದ್ರೆ ಸಾಕು ಬೋರ್ಡಿಂಗ್ ಪಾಸ್...

ಇನ್ಮುಂದೆ ವಿಮಾನ ಪ್ರಯಾಣಿಕರಿಗಿಲ್ಲ ನೋ ಟೆನ್ಶನ್ | ಈ ಆಪ್ ಇದ್ರೆ ಸಾಕು ಬೋರ್ಡಿಂಗ್ ಪಾಸ್ ಇಲ್ಲದೆಯೂ ಪ್ರಯಾಣಿಸಬಹುದು

Hindu neighbor gifts plot of land

Hindu neighbour gifts land to Muslim journalist

ವಿಮಾನಗಳಲ್ಲಿ ಪ್ರಯಾಣಿಸಬೇಕು ಅಂದ್ರೆ ಪ್ರಯಾಣಿಕರು ಹಲವು ಸಂಕಷ್ಟಗಳನ್ನು ಎದುರಿಸಬೇಕಾಗಿದ್ದು, ಜನ ಜಂಗುಳಿಯ ನಡುವೆ ಹಲವು ಅಡೆತಡೆಗಳನ್ನು ಸ್ವೀಕರಿಸಬೇಕಾಗಿತ್ತು. ಆದ್ರೆ, ಇನ್ಮುಂದೆ ಯಾವುದೇ ಟೆನ್ಷನ್ ಇಲ್ಲಿದೆ ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ.

ಹೌದು. ಇಂತಹ ಒಂದು ಸುಲಭ ಪ್ರಯಾಣಕ್ಕೆ ಕಾರಣವಾಗಿರುವುದು ಡಿಜಿಯಾತ್ರಾ. ಇದರ ಸಹಾಯದ ಮೂಲಕ ಮುಖ ಗುರುತಿಸುವಿಕೆಯ ವ್ಯವಸ್ಥೆಯನ್ನು ಆಧರಿಸಿ ಪ್ರಯಾಣಿಕರ ಪ್ರವೇಶವನ್ನು ಡಿಜಿಯಾತ್ರಾ ಅನುಮತಿಸುತ್ತದೆ. ಇದರೊಂದಿಗೆ ವಿಮಾನ ನಿಲ್ದಾಣಗಳಲ್ಲಿ ಬೋರ್ಡಿಂಗ್‌ ಪಾಸ್‌ ಹಾಗೂ ಗುರುತಿನ ಪುರಾವೆಗೆ ಮುಕ್ತಿ ಸಿಕ್ಕಂತಾಗಿದೆ.

ಡಿಜಿಯಾತ್ರಾದೊಂದಿಗೆ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕಾಗದರಹಿತ ಪ್ರವೇಶವಾಗಿರುತ್ತದೆ. ಮತ್ತು ಭದ್ರತಾ ತಪಾಸಣೆ ಸೇರಿದಂತೆ ವಿವಿಧ ಚೆಕ್ಕಿಂಗ್ ಬೋರ್ಡ್​ಗಳಲ್ಲಿ ಮುಖ ಗುರುತಿಸುವಿಕೆಯ ವ್ಯವಸ್ಥೆಯನ್ನು ಆಧರಿಸಿ ಪ್ರಯಾಣಿಕರ ಡೇಟಾವನ್ನು ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಲು ಸಹಾಯಕವಾಗಿದೆ. ಇದರಿಂದ ಪ್ರಯಾಣಿಕರು ಬೋರ್ಡಿಂಗ್ ಪಾಸ್ ಅಥವಾ ಸೆಕ್ಯೂರಿಟಿ ಚೆಕ್ಕಿಂಗ್​ಗಾಗಿ ಗಂಟೆಗಟ್ಟಲೇ ಕ್ಯೂನಲ್ಲಿ ನಿಲ್ಲುವ ತಾಪತ್ರಯ ಇರುವುದಿಲ್ಲ. ಅಂದರೆ ಈ ಆಯಪ್ ಮೂಲಕ ವಿಮಾನ ನಿಲ್ದಾಣದ ಪ್ರವೇಶ, ಭದ್ರತಾ ತಪಾಸಣೆ, ಏರ್‌ಪ್ಲೇನ್ ಬೋರ್ಡಿಂಗ್ ಮುಂತಾದ ಎಲ್ಲಾ ಚೆಕ್‌ಪಾಯಿಂಟ್‌ಗಳು ಮುಖ ಗುರುತಿಸುವಿಕೆ ತಂತ್ರಜ್ಞಾನದ ಆಧಾರದ ಮೇಲೆ ಪ್ರಯಾಣಿಕರ ನಮೂದುಗಳನ್ನು ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸುತ್ತವೆ.

ಡಿಜಿಯಾತ್ರವನ್ನು ಬಳಸುವ ವಿಧಾನ :
*ಬಯೋಮೆಟ್ರಿಕ್ ನೋಂದಣಿ
*ಪ್ಲೇ ಸ್ಟೋರ್ ಅಥವಾ ಐಒಎಸ್​ನಿಂದ ಡಿಜಿಯಾತ್ರಾ ಆಪ್ ಡೌನ್ ಲೋಡ್ ಮಾಡಿ
*ನಿಮ್ಮ ಫೋನ್ ಸಂಖ್ಯೆ ಮತ್ತು ಒಟಿಪಿ ಬಳಸಿ ನೋಂದಣಿ ಮಾಡಿ
*ಡಿಜಿ ಲಾಕರ್ ಬಳಸಿ ಆಧಾರ್ ಮಾಹಿತಿ ನೀಡಿ
*ಡಿಜಿಲಾಕರ್ ನೋಂದಣಿ ಆಗಿರದಿದ್ದರೆ ನೋಂದಣಿ ಮಾಡಿಕೊಳ್ಳಿ
*ಸೆಲ್ಫಿ ಕ್ಲಿಕ್ಕಿಸಿಕೊಳ್ಳಿ. ಸೆಲ್ಫಿಯ ಮೌಲ್ಯೀಕರಣವನ್ನು ಆಧಾರ್ ಮತ್ತು ಇನ್ನಿತರ ಮಾಹಿತಿಗಳಿಂದ ಮಾಡಲಾಗುತ್ತದೆ
*ಸ್ಕ್ಯಾನ್ ಬೋರ್ಡಿಂಗ್ ಪಾಸ್ (ಪೂರ್ವಾಪೇಕ್ಷಿತ ಚೆಕ್-ಇನ್) ಸ್ಕ್ಯಾನಿಂಗ್ ಉದ್ದೇಶಗಳಿಗಾಗಿ ಫೋನ್ ಹೊರತುಪಡಿಸಿ
*ಬೇರೆ ಸಾಧನದಲ್ಲಿ ಭೌತಿಕ ಬೋರ್ಡಿಂಗ್ ಪಾಸ್ ಅಥವಾ ಬೋರ್ಡಿಂಗ್ ಪಾಸ್ QR ಕೋಡ್ / ಬಾರ್ ಕೋಡ್ ಹೊಂದಿರಬೇಕು
*ವಿಮಾನ ನಿಲ್ದಾಣದಲ್ಲಿ ಈ ಮಾಹಿತಿ ಮತ್ತು ಬೋರ್ಡಿಂಗ್ ಪಾಸ್ ಮಾಹಿತಿ ಹಂಚಿಕೊಳ್ಳಿ

ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಕಿಯೋಸ್ಕ್​ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಅವುಗಳ ಮೂಲಕ ಬಯೋಮೆಟ್ರಿಕ್ ಸೆಲ್ಫ್ ಬೋರ್ಡಿಂಗ್ ತಂತ್ರಜ್ಞಾನ ಕಾರ್ಯ ನಿರ್ವಹಿಸಲಿದೆ. ಪ್ರಯಾಣಿಕರು ಮೊದಲು ದ್ವಾರದ ಬಳಿ ಇರುವ ಕಿಯೋಸ್ಕ್ ಯಂತ್ರದಲ್ಲಿ ದಾಖಲೆಗಳ ಮಾಹಿತಿ ನಮೂದಿಸಬೇಕು. ಮುಖ ಹಾಗೂ ಕಣ್ಣಿನ ಗುರುತನ್ನು ಯಂತ್ರದಲ್ಲಿ ದಾಖಲಿಸಬೇಕು. ನಂತರ ನಿಲ್ದಾಣದ ಒಳಗೆ ಇರುವ ಕಿಯೋಸ್ಕ್​ ಯಂತ್ರಗಳಲ್ಲಿ ಮುಖವನ್ನಷ್ಟೇ ತೋರಿಸಿ, ಸರಾಗವಾಗಿ ಮುಂದೆ ಹೋಗಬಹುದು. ನಿಲ್ದಾಣದಿಂದ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರು ಒಂದು ಬಾರಿ ನೋಂದಣಿ ಮಾಡುವುದು ಕಡ್ಡಾಯ. ಅದಾದ ನಂತರ ಜೀವನ ಪರ್ಯಂತ ಬೋರ್ಡಿಂಗ್ ಪಾಸ್ ಇಲ್ಲದೇ ನಿಲ್ದಾಣದಲ್ಲಿ ಓಡಾಡಬಹುದು. ಆದರೆ ಈ ನೂತನ ತಂತ್ರಜ್ಞಾನದ ಸೌಲಭ್ಯ ದೇಶೀಯ ವಿಮಾನಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮಾತ್ರ ಸಿಗಲಿದೆ ಹಾಗೂ ವಿದೇಶಿ ಪ್ರಜೆಗಳಿಗೆ ಈ ಸೌಲಭ್ಯ ಅನ್ವಯವಾಗುವುದಿಲ್ಲ.