Home latest ಧರ್ಮಸ್ಥಳ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ : ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳದ ನೌಕರರು,ವರ್ತಕರಿಂದ...

ಧರ್ಮಸ್ಥಳ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ : ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳದ ನೌಕರರು,ವರ್ತಕರಿಂದ ವಿಶೇಷ ಪ್ರಾರ್ಥನೆ

Dharmastala Sowjanya murder case

Hindu neighbor gifts plot of land

Hindu neighbour gifts land to Muslim journalist

Dharmastala Sowjanya murder case: ಬೆಳ್ತಂಗಡಿ : ಧರ್ಮಸ್ಥಳ ನೇತ್ರಾವತಿಯ ಮಣ್ಣಸಂಕ ಬಳಿ 11 ವರ್ಷಗಳ ಹಿಂದೆ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ(Dharmastala Sowjanya murder case) ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ದುರುದ್ದೇಶದಿಂದ ಧರ್ಮಸ್ಥಳ ಕ್ಷೇತ್ರ, ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹೆಸರಿಗೆ ಮಸಿಬಳಿಯಲು ಯತ್ನಿಸುತ್ತಿರುವವರಿಗೂ ಶಿಕ್ಷೆ ಕೊಡಬೇಕೆಂದು ಧರ್ಮಸ್ಥಳದ ಗ್ರಾಮಸ್ಥರು, ವರ್ತಕರು, ನೌಕರ ವೃಂದ ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ, ಕ್ಷೇತ್ರದ ಅಣ್ಣಪ್ಪಸ್ವಾಮಿ ಹಾಗೂ ಹರ್ಪಾಡಿಯ ಕನ್ಯಾಕುಮಾರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮಂಜುನಾಥ ಸ್ವಾಮಿಯ ದೇವಳದ ಮುಂಭಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ ಭಕ್ತರು ಮಂಜುನಾಥ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದರು.

ನಂತರ ಅಣ್ಣಪ್ಪ ಸ್ವಾಮಿಯ ಮುಂದೆ ಪ್ರಾರ್ಥಿಸಿ ತೆಂಗಿನಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಿದರು.ಇಲ್ಲಿಂದ ಮುಂದೆ ಹರ್ಪಾಡಿ ಕನ್ಯಾಕುಮಾರಿಯ ಸನ್ನಿಧಾನದಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು

ಇದನ್ನೂ ಓದಿ: ಸೌಜನ್ಯ ಹತ್ಯೆ ಘಟನೆಯನ್ನು ಸಹಿಸುವುದಿಲ್ಲ : ಕೃತ್ಯದ ಹಿಂದೆ ಎಷ್ಟೇ ಪ್ರಭಾವಿಗಳಿದ್ದರೂ ಕಾನೂನಾತ್ಮಕ ಶಿಕ್ಷೆಯಾಗಲಿ – ತಾಲೂಕು ಭಜನಾ ಪರಿಷತ್ ಆಗ್ರಹ