Home Interesting ಇಡೀ ವಿಶ್ವದಲ್ಲಿಯೇ ಪ್ರಪ್ರಥಮ ಬಾರಿಗೆ ಶವವನ್ನು ನೂರು ವರ್ಷಗಳವರೆಗೂ ಸಂರಕ್ಷಿಸುವಲ್ಲಿ ಯಶಸ್ವಿಯಾದ ವೈದ್ಯಕೀಯ ಲೋಕ!

ಇಡೀ ವಿಶ್ವದಲ್ಲಿಯೇ ಪ್ರಪ್ರಥಮ ಬಾರಿಗೆ ಶವವನ್ನು ನೂರು ವರ್ಷಗಳವರೆಗೂ ಸಂರಕ್ಷಿಸುವಲ್ಲಿ ಯಶಸ್ವಿಯಾದ ವೈದ್ಯಕೀಯ ಲೋಕ!

Hindu neighbor gifts plot of land

Hindu neighbour gifts land to Muslim journalist

ನಮ್ಮ ಜಗತ್ತು ಎಷ್ಟು ಮುಂದುವರಿದಿದೆ ಅಂದರೆ ಯಾವುದೇ ಕೆಲಸಕ್ಕೂ ಸಾಧ್ಯವಿಲ್ಲ ಎಂಬ ಮಾತು ಹೇಳಲು ಅಸಾಧ್ಯ ಎಂಬುವಷ್ಟರ ಮಟ್ಟಿಗೆ. ಇಂದಿನ ಟೆಕ್ನಾಲಜಿ ಯುಗದಲ್ಲಿ ಯಾವುದೇ ಕಷ್ಟಕರವಾದ ಕೆಲಸವನ್ನು ಥಟ್ಟನೆ ಮಾಡಿ ಮುಗಿಸಬಹುದು. ಅದರಲ್ಲೂ ವೈದ್ಯಕೀಯ ಕ್ಷೇತ್ರದಲ್ಲಿ ಒಂದೊಂದೇ ಸಾಧನೆಗಳು ಮಾಡುತ್ತಲೇ ಇದ್ದು, ಪ್ರತಿಯೊಂದು ಸಂಶೋಧನೆಗಳಲ್ಲಿ ಯಶಸ್ಸು ಕಾಣುತ್ತಿದೆ. ಇದೀಗ ಪ್ರಪಂಚದ ಯಾವುದೇ ದೇಶದಲ್ಲಿ ಕಂಡು ಹಿಡಿಯದಂತಹ ಒಂದು ದೊಡ್ಡ ಮಹಾಕಾರ್ಯವನ್ನೇ ಬೆಂಗಳೂರಿನ ತಜ್ಞರೊಬ್ಬರು ಮಾಡಿದ್ದಾರೆ.

ಹೌದು. ವೈದ್ಯಕೀಯ ಲೋಕ ಸಾಕಷ್ಟು ಅಚ್ಚರಿಯ ಪ್ರಯೋಗಗಳಿಗೆ ಸಾಕ್ಷಿಯಾಗುತ್ತಲೇ ಇದ್ದು,ಅಂದು ಹಂದಿಯ ಕಿಡ್ನಿಯನ್ನು ಮಾನವನಿಗೆ ಕಸಿಗೊಳಿಸುವ ಮೂಲಕ ಯಶಸ್ವಿಗೊಂಡಿತ್ತು.ಇದೀಗ ಇಡೀ ವಿಶ್ವದಲ್ಲಿಯೇ ಪ್ರಪ್ರಥಮ ಬಾರಿಗೆ ಶವವನ್ನ ಕೊಳೆಯಲು ಬಿಡದೆ ವಾಸನೆ ಬಾರದೆ ಸಂರಕ್ಷಣೆ ಮಾಡಿಡುವ ಸಂಶೋಧನೆ ಮಾಡಿ ಯಶಸ್ಸು ಕಂಡಿದೆ.

ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಅತ್ತಿಬೆಲೆಯ ಆಕ್ಸ್‌ಫರ್ಡ್ ಮೆಡಿಕಲ್ ಕಾಲೇಜಿನ ಫೋರೆನ್ಸಿಕ್ ತಜ್ಞ ಡಾ.ದಿನೇಶ್ ರಾವ್ ಈ ಹೊಸ ತಂತ್ರಜ್ಞಾನವನ್ನ ಕಂಡು ಹಿಡಿದಿದ್ದಾರೆ. ಸತ್ತ ಮೇಲೂ ಮನುಷ್ಯನ ದೇಹವನ್ನ ನೂರಾರು ವರ್ಷಗಳ ಕಾಲ ಹಾಗೆ ಇಡಬಹುದಾದ ಒಂದು ಸಂಶೋಧನೆ ಮಾಡುವಲ್ಲಿ ಡಾ.ದಿನೇಶ್ ರಾವ್ ಯಶಸ್ಸಿಯಾಗಿದ್ದಾರೆ. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಈ ರೀತಿಯ ಪ್ರಯೋಗ ಮಾಡಿದ್ದರು ಸಹ ಆ ಎಲ್ಲಾ ಪ್ರಯೋಗಗಳಿಗಿಂತ ಶವ ಸಂರಕ್ಷಣೆಯಲ್ಲಿ ವಿಶ್ವದ ವಿಶಿಷ್ಟ ತಂತ್ರವಾಗಿದ್ದು, ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.

ಇದೀಗ ತಜ್ಞರು ಒಂದು ಶವದ ಫೋಟೋ ವೈರಲ್ ಮಾಡಿದ್ದು,ಸಹಜ‌ ಮನುಷ್ಯರ ರೀತಿ ವೈಟ್ ಅಂಡ್ ವೈಟ್ ಡ್ರೆಸ್ ನಲ್ಲಿ ಕಾಲ್ಮೇಲೆ ಕಾಲು ಹಾಕಿಕೊಂಡು ಕುಳಿತಿರೋ ವ್ಯಕ್ತಿ, ಇವರ ಜೊತೆ ಮತ್ತಿಬ್ಬರು ವ್ಯಕ್ತಿಗಳು ಕುಳಿತು ಏನೋ ಡಿಸ್ಕರ್ಸ್ ಮಾಡುತ್ತಿರುವ ರೀತಿಯಲ್ಲೇ ಟೇಬಲ್ ಮೇಲೊಂದು ಪುಟ್ಟ ಮಗು.ಈ ಎಲ್ಲಾ ದೃಶ್ಯಗಳನ್ನ ಒಮ್ಮೆಲೇ ನೋಡಿದ್ರೆ ನಿಜಕ್ಕೂ ಇವರು ಜೀವಂತವಾಗಿರುವ ವ್ಯಕ್ತಿಗಳು ಎಂದು ಎನಿಸುತ್ತದೆ, ಆದ್ರೆ ಇದು ನಿಜಕ್ಕೂ ಅಚ್ಚರಿಯೇ ಸರಿ.

ಮುಂಬಲ್ಮಿಂಗ್ ಹೆಸರಿನ ನೂತನ ತಂತ್ರ‍ಜ್ನಾನವನ್ನು 2003 ರಿಂದ ನಿತಂತರವಾಗಿ ಸತ್ತ ಪ್ರಾಣಿ, ಪಕ್ಷಿ, ಹಾವು, ಕಪ್ಪೆಗಳ ಮೇಲೆ ಪ್ರಯೋಗ ಮಾಡುತ್ತಾ ಬರಲಾಗಿದೆ. ಸಣ್ಣ ಮಕ್ಕಳಿದ್ದಾಗ ಸತ್ತವರನ್ನು ಹೂಳುವಾಗ, ಬೆಂಕಿಯಲ್ಲಿ ಹಾಕಿದಾಗ ಮನುಷ್ಯನಲ್ಲಿಯೂ ಈ ಪ್ರಯೋಗವನ್ನು ಮಾಡಬೇಕು ಎಂದು ಡಾ.ದಿನೇಶ್ ಸಂಶೋಧನೆ ಮಾಡಲು ಪ್ರಾರಂಭಿಸಿದರು. 18 ಬಗೆಯ ವಿವಿಧ ರಾಸಾಯನಿಕ ಬಳಸಿ, ವ್ಯಕ್ತಿ ಸತ್ತಾಗ ಅವರ ಶವದ ಮೇಲೆ ಈ ರಾಸಾನಿಕವನ್ನು ಪ್ರಯೋಗ ಮಾಡಿ 2018 ರಲ್ಲಿ ಮನುಷ್ಯನ ಮೇಲೆ ಪ್ರಯೋಗ ಮಾಡಿದಾಗ ಮುಂಬಲ್ಮಿಂಗ್ ಹೆಸರಿನ ಸಂಶೋಧನೆ ಯಶಸ್ವಿಯಾಯಿತು. ಬಳಿಕ 2019 ರಲ್ಲಿ ಹುಟ್ಟಿದ ಮಗುವಿನ ಮೇಲೆಯೂ ಪ್ರಯೋಗ ಮಾಡಲಾಗಿತ್ತು, ಸದ್ಯ ಮೂರು ಜನ ವ್ಯಕ್ತಿಗಳ ಶವ ಹಾಗೂ ಒಂದು ಮಗುವಿನ ಶವವನ್ನು ಆಕ್ಸ್ ಪರ್ಡ್ ಕಾಲೇಜಿನಲ್ಲಿ ಇಡಲಾಗಿದ್ದು, ನೂರು ವರ್ಷವಾದರೂ ಈ ಶವಗಳು ಸತ್ತರು ಸಹ ನಮ್ಮ ಜೊತೆಯೇ ಇರುತ್ತವೆ ಎಂದರು.

ಇಂತಹ ಆವಿಷ್ಕಾರವನ್ನು ಕಂಡು ಹಿಡಿಯುವ ಮೂಲಕ ಪ್ರಪಂಚದಲ್ಲೇ ಮೊದಲ ಬಾರಿಗೆ ಇಂತಹ ವಿಭಿನ್ನವಾಗಿ ಪ್ರಯೋಗವನ್ನು ಮಾಡಿರುವುದು ನಮ್ಮ ಕಾಲೇಜಿಗೆ ಸಂದ ಗೌರವವಾಗಿದೆ. ನನ್ನ ತಾಯಿಗೆ ಮಗಳು ಡಾಕ್ಟರ್ ಆಗಬೇಕೇನ್ನುವ ಆಸೆ ಇತ್ತು. ಆದರೆ ಕಳೆದ ವರ್ಷ ಅವರು ಮೃತ ಪಟ್ಟಿದ್ದು, ಈ ತಂತ್ರಜ್ಞಾನದ ಬಗ್ಗೆ ಗೊತ್ತಿದ್ದರೆ ನನ್ನ ತಾಯಿಯನ್ನು ಕಣ್ಣ ಮುಂದೆ ಇಟ್ಟುಕೊಳ್ಳುತ್ತಿದ್ದೆ ಎಂದು ವೈದ್ಯಕೀಯ ವಿದ್ಯಾರ್ಥಿನಿ ಕಣ್ಣೀರು ಹಾಕಿದ್ದಾರೆ.

ಒಟ್ಟಿನಲ್ಲಿ ಫೋರೆನ್ಸಿಕ್ ತಜ್ಞ ದಿನೇಶ್ ರಾವ್ ಅವರ ಈ ಹೊಸ ತಂತ್ರಜ್ಞಾನ ವೈದ್ಯಕೀಯ ಲೋಕಕ್ಕೆ ಅಚ್ಚರಿ ಮೂಡಿಸಿದ್ದು ಮುಂದಿನ ದಿನಗಳಲ್ಲಿ ಇದು ಹೇಗೆ ಪ್ರಯೋಜನ ಆಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.