Home latest ಟ್ರಾಫಿಕ್ ನಲ್ಲಿ ಡ್ಯಾನ್ಸ್ ಮಾಡಿದ ಹುಡುಗ

ಟ್ರಾಫಿಕ್ ನಲ್ಲಿ ಡ್ಯಾನ್ಸ್ ಮಾಡಿದ ಹುಡುಗ

Hindu neighbor gifts plot of land

Hindu neighbour gifts land to Muslim journalist

ರೀಲ್ಸ್ ನ ಜಗವಾಗಿದೆ ಇಂದಿನ ಕಾಲ. ಕೂತಲ್ಲಿ ನಿಂತಲ್ಲಿ ಎಲ್ಲಾ ಕಡೆ ರೀಲ್ಸ್ ಮಾಡುವ ಜನರು ಸೆಲೆಬ್ರಿಟಿಗಳಾಗುತ್ತಾರೆ. ಇದಕ್ಕೆ ಮಾರು ಹೋದ ಜನರು ಇಲ್ವಾ ಎಂದು ಕೇಳಲು ಯಾರು ಇಲ್ಲ. ಇದರಿಂದ ಫೇಮಸ್ ಆಗಿ ಸೆಲೆಬ್ರಿಟಿ ಸ್ಟಾರ್ ಗಳು ಆಗಿದ್ದ ಉದಾಹರಣೆಗಳು ನಿಮಗೂ ಗೊತ್ತು.

ಆದರೆ ರಿಯಲ್ ಅತಿಯಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಯಾಕೆಂದರೆ ರೀಲ್ಸ್ ಮಾಡಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡಂತಹ ಅದೆಷ್ಟು ಉದಾಹರಣೆಗಳೇ ಇವೆ. ಫೇಮಸ್ ಆಗಲು ಅನಾಹುತವನ್ನು ಎಳೆದುಕೊಳ್ಳುವ ಜನರಿದ್ದಾರೆ.

ಇದೀಗ ಅಂತದ್ದೇ ಒಂದು ಹುಚ್ಚುತನವನ್ನು ಇಲ್ಲೊಬ್ಬ ಹುಡುಗ ಮಾಡಿದ್ದಾನೆ. ಟ್ರಾಫಿಕ್ ಸಿಗ್ನಲ್ ಅಲ್ಲಿ ಡ್ಯಾನ್ಸ್ ಅನ್ನು ಮಾಡೋ ಮೂಲಕ ಎಲ್ಲರನ್ನು ನಿಬ್ಬೆರಗನ್ನಾಗಿ ಮಾಡಿದ್ದಾನೆ. ಎಲ್ಲರೂ ಅವರವರ ಬ್ಯುಸಿಯಲ್ಲಿ ಇರುತ್ತಾರೆ ಟ್ರಾಫಿಕ್ ಸಿಗ್ನಲ್ ಅಲ್ಲಿ ಯಾವಾಗ ಹಸಿರು ಬಣ್ಣವನ್ನು ತೋರಿಸುತ್ತಾರೋ ಎಂಬುದು ಚಾಲಕರು ಕಾಯುತ್ತಿರುತ್ತಾರೆ. ಅಂತಹ ಸಮಯದಲ್ಲಿ ಜೀಬ್ರಾ ಪಟ್ಟಿಯ ಮೇಲೆ ಇಡಬಹುದ ಹೆಲ್ಮೆಟ್ ಹಾಕಿಕೊಂಡು ಡ್ಯಾನ್ಸ್ ಮಾಡಿದ್ದಾನೆ.

ತಿರುಚಿತ್ರಂಬಲಂ ಸಿನಿಮಾದ ಟ್ರೆಂಡಲ್ಲಿ ಇರುವಂತಹ ಸಾಂಗ್ ಪರಕ್ ಪರಕ್. ಈ ಹಾಡಿಗೆ ಯಾರು ನೃತ್ಯ ಮಾಡಿಲ್ಲ ಅಂತ ಪ್ರಶ್ನೆ ಕೇಳಿದ್ರೆ ಬೆರಳೆಣಿಕೆಯಷ್ಟು ಜನ ಸಿಗಬಹುದು. ಯಾಕೆಂದರೆ ಎಲ್ಲಿ ನೋಡಿದರೂ ಈ ಹಾಡಿಗೆ ನೃತ್ಯವನ್ನು ಮಾಡಿರುವವರು ಸಿಗುತ್ತಾರೆ. ಇದೀಗ ಟ್ರೆಂಡ್ ನಲ್ಲಿ ಇರುವಂತಹ ಹುಡುಗ ಕೂಡ ಇದೇ ಹಾಡಿಗೆ ನೃತ್ಯವನ್ನು ಮಾಡಿದ್ದಾನೆ.

ಟ್ರೆಂಡ್ ಅತಿಯಾಗಬಾರದು, ರೀಲ್ಸ್ ಕೂಡ ಅತಿಯಾಗಬಾರದು. ಪ್ರತಿಯೊಂದು ಇತಿಮಿತಿಯಲ್ಲಿ ಇರಬೇಕು.