Home latest ಶ್ರದ್ಧಾಳನ್ನು 35 ತುಂಡುಗಳನ್ನಷ್ಟೆ ಮಾಡಿದ್ದು, ನಿನ್ನನ್ನು 70 ತುಂಡು ಮಾಡ್ತೇನೆ – ಹಿಂದೂ ಮಹಿಳೆಗೆ ವಂಚಿಸಿ...

ಶ್ರದ್ಧಾಳನ್ನು 35 ತುಂಡುಗಳನ್ನಷ್ಟೆ ಮಾಡಿದ್ದು, ನಿನ್ನನ್ನು 70 ತುಂಡು ಮಾಡ್ತೇನೆ – ಹಿಂದೂ ಮಹಿಳೆಗೆ ವಂಚಿಸಿ ಸುಖಿಸಿ ಬೆದರಿಕೆ ಹಾಕಿದ ಅರ್ಷದ್ !

Hindu neighbor gifts plot of land

Hindu neighbour gifts land to Muslim journalist

ಮತ್ತೆ ವಂಚನೆಯ, ಲವ್ ಸೆಕ್ಸ್ ದೋಖಾ ನಡೆಸಿ ಹಿಂದೂ ಮಹಿಳೆಗೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ದೇಶದಾದ್ಯಂತ ಗದ್ದಲ ಮೂಡಿಸಿದ ಶ್ರದ್ಧಾ ವಾಕರ್ ಭೀಕರ ಹತ್ಯೆ ಪ್ರಕರಣದಲ್ಲಿ ಶ್ರದ್ಧಾಳ ಪ್ರಿಯಕರ ಅಫ್ತಾಬ್ ಆಕೆಯನ್ನು 35 ಪೀಸ್ ಗಳಾಗಿ ತುಂಡು ಮಾಡಿದ್ದು ಎಲ್ಲರಿಗೂ ತಿಳಿದಿರುವುದೇ. ಇದೀಗ ಆ ಪ್ರಕರಣವನ್ನೇ ದಾಳವಾಗಿಟ್ಟುಕೊಂಡು ಅರ್ಷದ್ ಎಂಬಾತ ತನ್ನ ಪ್ರೇಯಸಿಗೆ ಬೆದರಿಕೆ ಹಾಕಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಹಿಂದೂ ಮಹಿಳೆಯೊಬ್ಬರು ತನ್ನ ಜೊತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಅರ್ಷದ್ ಸಲೀಂ ಮಲಿಕ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಆತ ತನಗೆ ಕಿರುಕುಳ ನೀಡುತ್ತಿದ್ದಾನೆ. ಅಷ್ಟೇ ಅಲ್ಲದೆ, ನನ್ನನ್ನು 70 ತುಂಡುಗಳಾಗಿ ಪೀಸ್ ಮಾಡುತ್ತೇನೆಂದು ಬೆದರಿಕೆ ಒಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳೆ ನೀಡಿದ ದೂರಿನ ಪ್ರಕಾರ, ಆಕೆ ಈ ಮೊದಲು ಒಬ್ಬ ವ್ಯಕ್ತಿಯನ್ನು ಮದುವೆ ಆಗಿದ್ದರು. ಅವರಿಬ್ಬರಿಗೆ ಒಂದು ಮಗು ಕೂಡ ಇತ್ತು. ಆದರೆ ದುರಾದೃಷ್ಟವಶಾತ್ 2019 ರಲ್ಲಿ ಆಕೆಯ ಗಂಡ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು. ನಂತರದ ದಿನಗಳಲ್ಲಿ ಆಕೆಗೆ ಹರ್ಷಲ್ ಮಾಲಿ ಎಂಬಾತನ ಪರಿಚಯವಾಯಿತು. ಬಳಿಕ ಜುಲೈ 2021 ರಿಂದ ಅವರಿಬ್ಬರೂ ಒಟ್ಟಿಗೆ ವಾಸಿಸಲು ನಿರ್ಧರಿಸಿದರು.

ಹಾಗಾಗಿ ಲಿವ್-ಇನ್ ಸಂಬಂಧಕ್ಕಾಗಿ ಅಫಿಡವಿಟ್ ತಯಾರಿಸಲು ಜುಲೈ 2021 ರಲ್ಲಿ ಅಮಲ್ನೇರ್ಗೆ ಹೋದಾಗ ಆತನ ಅಸಲಿ ಬಣ್ಣ ಬಿಟ್ಟುಕೊಂಡಿದೆ. ಅಲ್ಲಿ ಆ ಹಿಂದೂ ಮಹಿಳೆಗೆ ಆತನ ನಿಜ ಬಣ್ಣ ತಿಳಿದಿದೆ. ಆತನ ಹೆಸರು ಹರ್ಷಲ್ ಮಾಲಿ ಅಲ್ಲ, ಅರ್ಷದ್ ಸಲೀಂ ಮಲಿಕ್ ಎಂದು ಅವಳಿಗೆ ತಿಳಿದಾಗ ಸಮಯ ಮೀರಿತ್ತು. ಆಕೆ ಆತನ ಜತೆ ಎಲ್ಲವನ್ನೂ ಹಂಚಿಕೊಂಡು ಆಗಿತ್ತು. ಈ ಮಧ್ಯೆ ಅವರು ಉಸ್ಮಾನಾಬಾದ್‌ನಲ್ಲಿರುವ ಫ್ಲ್ಯಾಟ್‌ಗೆ ಸ್ಥಳಾಂತರಗೊಂಡರು.

ಜೊತೆಗೆ ವಾಸಿಸಲು ಆರಂಭಿಸಿದಾಗಿನಿಂದಲೂ ಪ್ರಿಯಕರ ಅರ್ಷದ್ ಆಕೆಗೆ ಕಿರುಕುಳ ನೀಡುತ್ತಿದ್ದ ಎಂದು ಮಹಿಳೆ ದೂರಿದ್ದಾಳೆ. ಧುಲೆಯ ಲಾಲಿಂಗ್ ಗ್ರಾಮದ ಕಾಡಿಗೆ ತನ್ನನ್ನು ಕರೆದೊಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿ ಅದನ್ನು ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಾನೆ. ನಂತರ ಅರ್ಷದ್ ನನ್ನ ಧರ್ಮವನ್ನು ಬಲವಂತವಾಗಿ ಪರಿವರ್ತಿಸಿದ್ದಲ್ಲದೆ ಮಗುವಿನ ಧರ್ಮವನ್ನು ಕೂಡ ಪರಿವರ್ತಿಸಲು ಪ್ರಯತ್ನಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಈಗ ಆಕೆ ಹರ್ಷದ್ ನ ಮಗುವಿಗೆ ಮಗುವಿಗೆ ಜನ್ಮ ನೀಡಿದ್ದಾಳೆ.

ಅಷ್ಟೇ ಅಲ್ಲದೆ, ಆತನ ಬೇಡಿಕೆಯನ್ನು ವಿರೋಧಿಸಿದ್ದಕ್ಕಾಗಿ ಅರ್ಷದ್ ಆಕೆಯ ಚರ್ಮವನ್ನು ಬಿಸಿ ಸೈಲೆನ್ಸರ್‌ನಿಂದ ಸುಟ್ಟುಹಾಕಿದ್ದ. ಆತ ಶ್ರದ್ಧಾ ವಾಕರ್ ಪ್ರಕರಣವನ್ನು ಬಳಸಿಕೊಂಡು “ಶ್ರದ್ಧಾಳನ್ನು ಆಕೆಯ ಪ್ರಿಯಕರ 35 ತುಂಡುಗಳಾಗಿ ಕತ್ತರಿಸಿದ ಹಾಗೆ ನಾನು ನಿನ್ನನ್ನು 70 ತುಂಡುಗಳಾಗಿ ಕತ್ತರಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದ. ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.