Home latest ತಂಗಿಯ ಪ್ರೇಮ ವಿವಾಹದ ಬಗ್ಗೆ ಹಲವು ಬಾರಿ ಗೇಲಿ । ಸ್ನೇಹಿತನನ್ನು ಚಾಕುವಿನಿಂದ 30 ಬಾರಿ...

ತಂಗಿಯ ಪ್ರೇಮ ವಿವಾಹದ ಬಗ್ಗೆ ಹಲವು ಬಾರಿ ಗೇಲಿ । ಸ್ನೇಹಿತನನ್ನು ಚಾಕುವಿನಿಂದ 30 ಬಾರಿ ಇರಿದು ಕೊಂದ ಗೆಳೆಯ

Hindu neighbor gifts plot of land

Hindu neighbour gifts land to Muslim journalist

ತನ್ನ ತಂಗಿಯ ಪ್ರೇಮ ವಿವಾಹದ ಬಗ್ಗೆ ಹಲವು ಬಾರಿ ವ್ಯಂಗ್ಯ ಮಾಡುತ್ತಿದ್ದ ಸ್ನೇಹಿತನನ್ನು 30 ಬಾರಿ ಚಾಕುವಿನಿಂದ ಇರಿದು ಕೊಲ್ಲಲಾಗಿದೆ.

ಹೀಗೆ ಸ್ನೇಹಿತನನ್ನೇ ಹತ್ಯೆ ಮಾಡಿದ ಘಟನೆ ದೆಹಲಿಯ ಜಹಾಂಗೀರ್‌ಪುರದಲ್ಲಿ ನಡೆದಿದೆ. ಚಿರಾಗ್ ನ ತಂಗಿ ಪ್ರೇಮಿಸಿ ಮದುವೆಯಾಗಿದ್ದಳು. ಆಗ ರಾಹುಲ್ ಎಂಬಾತ ಚಿರಾಗ್ ತಂಗಿಯ ಪ್ರೇಮ ವಿವಾಹದ ಬಗ್ಗೆ ಸದಾ ಗೇಲಿ ಮಾಡುತ್ತಿದ್ದ. ಹೀಗೆ ತಂಗಿಯ ಪ್ರೇಮ ವಿವಾಹವನ್ನು ಹಲವು ಬಾರಿ ಆಡಿಕೊಂಡು ವ್ಯಂಗ್ಯ ಮಾಡಿದ್ದಕ್ಕಾಗಿ ಯುವತಿಯ ಸಹೋದರ ಚಿರಾಗ್, ತನ್ನ ಸ್ನೇಹಿತ ರಾಹುಲ್ (30) ಎಂಬಾತನನ್ನು 30 ಬಾರಿ ಇರಿದು ತಿವಿದು ಕೊಂದಿರುವ ಘಟನೆ ನಡೆದಿದೆ.

ದೆಹಲಿಯ ಜಹಾಂಗೀರ್‌ಪುರದಲ್ಲಿ ವಾಸವಿದ್ದ ಚಿರಾಗ್ ತಂಗಿ ಕೆಲ ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ರಾಹುಲ್ ಕೂಡ ಇದರಲ್ಲಿ ಭಾಗಿಯಾಗಿದ್ದನು. ಆದರೆ ರಾಹುಲ್ ಆಗಾಗ್ಗೆ ತನ್ನ ತಂಗಿಯ ಪ್ರೇಮ ವಿವಾಹದ ಬಗ್ಗೆ ಹೀಯಾಳಿಸುತ್ತಿದ್ದ. ಈ ವಿಚಾರದಲ್ಲಿ ಇಬ್ಬರ ನಡುವೆ ಸಾಕಷ್ಟು ಬಾರಿ ವಾಗ್ವಾದ ನಡೆದಿತ್ತು. ಮೊನ್ನೆ ಅದು ತೀರಾ ವಿಕೋಪಕ್ಕೆ ತಿರುಗಿದೆ. ಇಬ್ಬರ ಮಧ್ಯೆ ಜಗಳ ನಡೆದಿದೆ. ಈ ವೇಳೆ ಚಿರಾಗ್ ನು ರಾಹುಲ್ ನನ್ನ 30 ಬಾರಿ ಚಾಕುವಿನಿಂದ ಇರಿದಿದ್ದ. ಅಷ್ಟರಲ್ಲಿ ಮಧ್ಯ ಪ್ರವೇಶಿಸಿದ ಗೆಳೆಯರು ರಾಹುಲ್‌ನನ್ನು ಆಸ್ಪತ್ರೆಗೆ ಒಯ್ದಿದ್ದಾರೆ. ಆತನನ್ನು ಗಾಯಗೊಂಡ ಸ್ಥಿತಿಯಲ್ಲಿ ಬಿಜೆಆರ್‌ಎಂ ಆಸ್ಪತ್ರೆಗೆ ಕರೆದೊಯ್ದರು, ಅಷ್ಟರಲ್ಲಾಗಲೇ ರಾಹುಲ್ ಮೃತಪಟ್ಟಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿರುವ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ರಾಹುಲ್ ಸೇರಿ ಉಳಿದ ನಾಲ್ವರು ಅಪ್ರಾಪ್ತರನ್ನು ಬಂಧಿಸಿದ್ದಾರೆ.