Home News Uttar pradesh: ಕಾಯಿಲೆ ಗುಣಪಡಿಸಿಕೊಳ್ಳಲು ನವಜಾತ ಶಿಶುವನ್ನು ಬಲಿ ಕೊಟ್ಟ ದಂಪತಿ

Uttar pradesh: ಕಾಯಿಲೆ ಗುಣಪಡಿಸಿಕೊಳ್ಳಲು ನವಜಾತ ಶಿಶುವನ್ನು ಬಲಿ ಕೊಟ್ಟ ದಂಪತಿ

Father Killed Child
Image source: Economic times

Hindu neighbor gifts plot of land

Hindu neighbour gifts land to Muslim journalist

Crime: ಮಹಿಳೆಯೊಬ್ಬಳು ಗಂಡನ ಜತೆ ಸೇರಿ ತನ್ನ ನವಜಾತ ಶಿಶುವನ್ನು ಬಲಿಕೊಟ್ಟಿರುವ ಘಟನೆ ಉತ್ತರ ಪ್ರದೇಶದ (Uttar pradesh) ಮುಜಾಫರ್‌ನಗರ ಜಿಲ್ಲೆಯಲ್ಲಿ ನಡೆದಿದೆ.

ಹೌದು, ಮಮತಾ ಎಂಬಾಕೆ ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ರೋಗವನ್ನು ಗುಣಪಡಿಸಲು ಮಗುವನ್ನು ಕೊಲ್ಲುವುದೊಂದೇ ದಾರಿ ಎನ್ನುವ ಮಾತ್ರಿಕನ ಮಾತು ಕೇಳಿ ದಂಪತಿಗಳು ಈ ನಿರ್ಧಾರ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.

ಭೋಪಾ ಪ್ರದೇಶದ ಬೆಲ್ಡಾ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಮಗು ಕಾಣೆಯಾಗಿರುವುದನ್ನು ಕಂಡು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ವಿಚಾರಣೆ ವೇಳೆ ಮಮತಾ ಮತ್ತು ಆಕೆಯ ಪತಿ ಗೋಪಾಲ್ ಕಶ್ಯಪ್ ಅವರು ತಮ್ಮ ಮಗಳನ್ನು ಕೊಂದು ಆಕೆಯ ಶವವನ್ನು ಕಾಡಿನಲ್ಲಿ ಎಲ್ಲೋ ಬಚ್ಚಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ.

ಇದೀಗ ಮೃತದೇಹವನ್ನು ಹೊರತೆಗೆಯಲು ಮತ್ತು ಮಂತ್ರವಾದಿ ಹರೇಂದ್ರನನ್ನು ಹಿಡಿಯಲು ಪ್ರಯತ್ನಗಳು ನಡೆಯುತ್ತಿದ್ದು, ಈ ಬಗ್ಗೆ (Crime) ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.