Home latest CNG ದರ ದುಬಾರಿ | ಸಂಕಷ್ಟಕ್ಕೀಡಾದ ಕಾರು ಮತ್ತು ಆಟೋ ಮಾಲೀಕರು

CNG ದರ ದುಬಾರಿ | ಸಂಕಷ್ಟಕ್ಕೀಡಾದ ಕಾರು ಮತ್ತು ಆಟೋ ಮಾಲೀಕರು

Hindu neighbor gifts plot of land

Hindu neighbour gifts land to Muslim journalist

ವಾಹನ ಚಾಲಕರು ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಾಗಿದ್ದ ಸಂದರ್ಭದಲ್ಲಿ ಕಾರು ಮತ್ತು ಆಟೋ ಮಾಲೀಕರು ಸಿಎನ್ ಜಿ( CNG)ಬಳಕೆ ಕಡೆ ಹೆಚ್ಚು ವಾಲಿದ್ದರು. ಆದರೆ ಇದೀಗ ಸಿಎನ್ ಜಿ ದರನೂ ದುಬಾರಿಯಾಗಿರುವ ಕಾರಣ ವಾಹನ ಮಾಲೀಕರು ನಿಜಕ್ಕೂ ಸಂಕಷ್ಟಕ್ಕೀಡಾಗಿದ್ದಾರೆ.

ಹಾಗೆ ನೋಡೋಕೆ ಹೋದರೆ, 2021, ಜನವರಿಯಲ್ಲಿ ಸಿಎನ್‌ಜಿ ಬೆಲೆ ಕೆ.ಜಿಗೆ 49.5 ರೂ. ಇತ್ತು. ಬೆಂಗಳೂರಿನಲ್ಲಿ 86 ರೂ.ಗೆ ಏರಿಕೆಯಾಗಿದೆ. ಸಾರಿಗೆ ಇಲಾಖೆ ದಾಖಲೆಗಳ ಪ್ರಕಾರ ರಾಜ್ಯದಲ್ಲಿ 11,766 ಸಿಎನ್‌ಜಿ ವಾಹನಗಳಿವೆ. 22,669 ಪೆಟ್ರೋಲ್ ಮತ್ತು ಸಿಎನ್‌ಜಿ ಎರಡನ್ನೂ ಬಳಸುವ ವಾಹನಗಳಿವೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 101.94 ರೂ. ಇದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 87.89 ರೂ. ಇದೆ.

ಗೇಲ್ ಗ್ಯಾಸ್ ಸಂಸ್ಥೆಯು ಕಳೆದ ವರ್ಷ, ಆಟೋ ಚಾಲಕರಿಗೆ 14 ಸಾವಿರ ರೂ.ಗಳಿಂದ 25 ಸಾವಿರ ರೂ.ವರೆಗಿನ ಪ್ರೀಪೇಯ್ಡ್ ಇಂಧನ ಕಾರ್ಡ್‌ ಕೊಡುತ್ತಿತ್ತು. ಹಾಗಾಗಿ ಚಾಲಕರು ಉಚಿತವಾಗಿ ಸಿಎನ್‌ಜಿ ತುಂಬಬಹುದಿತ್ತು. ಆದರೆ ಇದನ್ನು ನಿಲ್ಲಿಸಲಾಗಿದೆ. ಆಟೋ ಚಾಲಕರು 30,000 ರೂ. ತೆತ್ತು ಸಿಎನ್‌ಜಿ ಕಿಟ್‌ ಅಳವಡಿಸಿಕೊಂಡಿದ್ದರು. ಈಗ ಸಿಎನ್‌ಜಿ ಬೆಲೆ ಹೆಚ್ಚಿರುವುದು ಚಾಲಕರಿಗೆ ಹೊರೆಯಾಗುತ್ತಿದೆ, ಎಲೆಕ್ಟ್ರಿಕ್ ಆಟೋಗಳಿಗೆ ಹೋಲಿಕೆ ಮಾಡಿದರೆ, ಸಿಎನ್‌ಜಿ ಮಳೆಗಾಲದ ಸಮಯದಲ್ಲೂ ಉತ್ತಮ. ಆದರೆ ಫಿಲ್ಲಿಂಗ್ ಸ್ಟೇಷನ್‌ಗಳ ಕೊರತೆ ಸಮಸ್ಯೆ ಸೃಷ್ಟಿಸುತ್ತಿದೆ,” ಎಂದು ಆದರ್ಶ ಆಟೋ ಡ್ರೈವರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಸಿ.ಸಂಪತ್ ಹೇಳುತ್ತಾರೆ.

ದೇಶದ ಅತಿ ಕಲುಷಿತ 10 ನಗರಗಳಲ್ಲಿ ಬೆಂಗಳೂರು ಕೂಡಾ ಸೇರಿದೆ. ಹಾಗಾಗಿ ಹೆಚ್ಚಿದ ವಾಯುಮಾಲಿನ್ಯ ತಡೆಗಟ್ಟಲು ಎಲೆಕ್ಟ್ರಿಕ್, ಸಿಎನ್‌ಜಿ ವಾಹನ ಬಳಕೆ ಉತ್ತಮ. ಇದರ ಜೊತೆಗೆ ನಗರಕ್ಕೆ ಪರಿಸರ ಸ್ನೇಹಿ ವಾಹನಗಳ ಅಗತ್ಯ ಖಂಡಿತ ಇದೆ. ಹೆಚ್ಚು ಪೆಟ್ರೋಲ್ ಕುಡಿದು ಹೆಚ್ಚು ಹೊಗೆ ಬಿಡುವ ವಾಹನಗಳಿಗಿಂತ ಹೆಚ್ಚು ಮೈಲೇಜ್ ನೀಡುವ ಸಿಎನ್‌ಜಿ ಅವುಗಳಿಗೆ ಪರ್ಯಾಯ ಮಾರ್ಗ ಎಂದೇ ಹೇಳಬಹುದು. ಆದರೆ ಸಿಎನ್ ಜಿ ದರ ಏರಿಕೆಯು ಈ ಪ್ರಕ್ರಿಯೆಗೆ ಹೊಡೆತ ನೀಡಿದೆ. ಒಂದು ವೇಳೆ ದರ ಕಡಿಮೆ ಇದ್ದಲ್ಲಿ, ಇನ್ನಷ್ಟು ಚಾಲಕರು ಸಿಎನ್‌ಜಿ ಬಳಸಿ, ಪರಿಸರ ಮಾಲಿನ್ಯವೂ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಬಹುದು.