Home Interesting Viral Video | ವರನ ಹೆಸರು ಯೋಗಿ, ಅಳಿಯನಿಗೆ ಮದುವೆ ದಿನ ಮಾವ ಕೊಟ್ರು ಬುಲ್ಡೋಜರ್...

Viral Video | ವರನ ಹೆಸರು ಯೋಗಿ, ಅಳಿಯನಿಗೆ ಮದುವೆ ದಿನ ಮಾವ ಕೊಟ್ರು ಬುಲ್ಡೋಜರ್ ಗಿಫ್ಟ್ !

Hindu neighbor gifts plot of land

Hindu neighbour gifts land to Muslim journalist

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ ಕಾರಣದಿಂದ ಮದುಮಗನೊಬ್ಬ ಬಹುತ್ ಖುಷ್ ಆಗಿದ್ದಾನೆ. ಯಾಕೆಂದ್ರೆ ಆತನಿಗೆ ಆತನ ಮಾವ ಮದುವೆ ಸಂದರ್ಭದಲ್ಲಿ ಬುಲ್ಡೋಜರ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ.

ಉತ್ತರಪ್ರದೇಶದಲ್ಲಿ ಯಾರು ಸಮಾಜಘಾತುಕ ಚಟುವಟಿಕೆಯಲ್ಲಿ ಭಾಗಿಯಾಗುತ್ತಾರೋ, ಅವರ ಮನೆಗೆ ಬುಲ್ಡೋಜರ್ ಕಳುಹಿಸಿ ಮನೆಯನ್ನೇ ನೆಲಸಮಗೊಳಿಸುತ್ತಿದ್ದರು. ಯೋಗಿ ಆದಿತ್ಯನಾಥ್ ಅವರ ಈ ನಡೆ ದೇಶದಾದ್ಯಂತ ಸದ್ದು ಮಾಡಿತ್ತು. ಆದರೆ ಇಲ್ಲಿ ಪರಿಸ್ಥಿತಿ ಭಿನ್ನ. ಮನೆ ಒಡೆಯುವ ಬದಲು, ಮನೆ ಬೆಳಗಲು ಬರುತ್ತಿರುವ ಪತ್ನಿ ಜೊತೆಗೆ ಬುಲ್ಡೋಜರ್ ಅನ್ನು ಮನೆಗೆ ತಂದಿದ್ದಾಳೆ.

ವರನಿಗೆ ಚಿನ್ನ, ಸೈಟು ಕಾರು, ಮನೆ ಹೀಗೆ ಗಿಫ್ಟ್ ನೀಡಿರುವುದು ಕೇಳಿದ್ದೇವೆ. ಇದ್ಯಾಕೆ ಬುಲ್ಲೋಜರ್ ಗಿಫ್ಟ್ ನೀಡಿದ್ರು ಅಂತ ನೀವು ಯೋಚಿಸುತ್ತಿದ್ದರೆ ಅದಕ್ಕೆ ಉತ್ತರ ಯೋಗಿ ! ಅಲ್ಲಿ ಮದುವೆ ಆಗುತ್ತಿರುವ ಹುಡುಗನ ಹೆಸರು ಯೋಗೇಂದ್ರ ಅಂತ. ಈತನನ್ನು ಎಲ್ಲರೂ ಪ್ರೀತಿಯಿಂದ ಕರೆಯುವುದು ಯೋಗಿ ಎಂದು. ಇದೀಗ ಈ ತನ್ನ ಯೋಗಿ ಎಂಬ ಹೆಸರೇ ಅದೃಷ್ಟ ಖುಲಾಯಿಸಿವಂತೆ ಮಾಡಿದೆ. ಲಕ್ಷಾಂತರ ರೂಪಾಯಿಗಳ ಹೊಸ ಬುಲ್ಡೋಜರ್ ಮನೆ ಮುಂದೆ ಬಂದು ನಿಂತಿದೆ.

ಡಿಸೆಂಬರ್ 15ರಂದು ಹಮೀರ್‌ಪುರ್ ಜಿಲ್ಲೆಯಲ್ಲಿ ಯೋಗಿ ಹಾಗೂ ನೇಹಾ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ವಧುವಿನ ತಂದೆ ನಿವೃತ್ತ ಸೈನಿಕ ಪರಶುರಾಮ್ ತಮ್ಮ ಅಳಿಯನಿಗಾಗಿ ಬುಲ್ಡೋಜರ್‌ನ್ನು ಮದುವೆ ಮಂಟಪಕ್ಕೆ ತಂದು ಉಡುಗೊರೆಯಾಗಿ ನೀಡಿದ್ದಾರೆ.

ಇದೀಗ ಬುಲ್ಡೋಜರನ್ನು ಉಡುಗೊರೆಯಾಗಿ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ಜನರು ಅಳಿಯನಿಗೆ ವರದಕ್ಷಿಣೆಯಾಗಿ ಮಾವ ಬುಲ್ಡೋಜರ್ ನೀಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾjರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮದುವೆ ಗಂಡು ಯೋಗಿ, ನನ್ನ ಪತ್ನಿ ಯುಪಿಎಸ್‌ಸಿ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದಾಳೆ. ಅವಳ ಓದಿಗೆ ಸಹಾಯವಾಗುವಂತಹ ಕೆಲಸಕ್ಕೆ ಮತ್ತು ಪುಸ್ತಕ ಖರೀದಿಸಲು ಬುಲ್ಡೋಜರ್ ಬಳಕೆಯಿಂದ ಬರುವ ಹಣ ಖರ್ಚು ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾನೆ.