Home News Black Friday Sale: ನಥಿಂಗ್ ಫೋನ್ (1) ಕೇವಲ ಅತೀ ಕಡಿಮೆ ದರದಲ್ಲಿ ಖರೀದಿಸಲು ಈ...

Black Friday Sale: ನಥಿಂಗ್ ಫೋನ್ (1) ಕೇವಲ ಅತೀ ಕಡಿಮೆ ದರದಲ್ಲಿ ಖರೀದಿಸಲು ಈ ಟ್ರಿಕ್ ಉಪಯೋಗಿಸಿ!

Hindu neighbor gifts plot of land

Hindu neighbour gifts land to Muslim journalist

ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಅಲ್ಲದೆ ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇರುತ್ತವೆ ಮತ್ತು ಹೆಚ್ಚುತ್ತಲೇ ಇರುತ್ತವೆ. ಈ ನಡುವೆ ಕಂಪನಿಗಳು ತಾನು ಹೆಚ್ಚು ನಾನು ಹೆಚ್ಚು ಎಂದು ಹಲವಾರು ಆಫರ್ಗಳನ್ನು ತರುತ್ತಲೇ ಇದೆ. ಅದರಲ್ಲೂ ಪ್ಲಿಪ್ ಕಾರ್ಟ್ ಹೆಚ್ಚಿನ ಗ್ರಾಹಕ ರನ್ನು ಹೊಂದಿದ್ದು ಉತ್ತಮ ಸೇವೆಯನ್ನು ಜನರಿಗೆ ಒದಗಿಸುತ್ತಿದೆ.

ಈಗಾಗಲೇ ನಿಮಗೆ ಗೊತ್ತಿರುವ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಬ್ಲಾಕ್ ಫ್ರೈಡೇ ಸೇಲ್ ನಡೆಯುತ್ತಿದೆ. ನವೆಂಬರ್ 30 ವರೆಗೆ ನಡೆಯುತ್ತಿರುವ ಈ ಮೇಳದಲ್ಲಿ ಆಕರ್ಷಕ ಸ್ಮಾರ್ಟ್​ಫೋನ್​ಗಳು ಬಂಪರ್ ಡಿಸ್ಕೌಂಟ್​ ದರದಲ್ಲಿ ಮಾರಾಟ ಆಗುತ್ತಿದೆ.

ನೀವು ಮಧ್ಯಮ ಬೆಲೆಗೆ ಒಂದು ಅತ್ಯುತ್ತಮ ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಗಳುಳ್ಳ ಫೋನನ್ನ ಹುಡುಕುತ್ತಿದ್ದರೆ ಇದಕ್ಕಿಂತ ಉತ್ತಮ ಆಯ್ಕೆ ಬೇರೆ ಸಿಗುವುದಿಲ್ಲ. ಈ ಆಫರ್ ನವೆಂಬರ್ 30ರ ವರೆಗೆ ಮಾತ್ರ ಇರಲಿದೆ.

ಹೌದು ವಿಭಿನ್ನ ವಿನ್ಯಾಸದ ಮೂಲಕ ಮಾರುಕಟ್ಟೆಗೆ ಬರಲಿರುವ ನಥಿಂಗ್ ಕಂಪನಿಯ ನಥಿಂಗ್ ಫೋನ್ (1) ಭರ್ಜರಿ ರಿಯಾಯಿತಿಯಲ್ಲಿ ಸೇಲ್ ಕಾಣುತ್ತಿದೆ.
ಭಾರತದಲ್ಲಿ ನಥಿಂಗ್ ಫೋನ್ (1) 8GB RAM + 128GB ಸ್ಟೋರೇಜ್ ಆಯ್ಕೆಯ ಮೂಲಬೆಲೆ 33,999ರೂ.. ಅಂತೆಯೆ 8GB RAM + 256GB ಸ್ಟೋರೇಜ್ ಆಯ್ಕೆಗೆ 36,999ರೂ., 12GB RAM + 256GB ಸ್ಟೋರೇಜ್ ಆಯ್ಕೆಗೆ 39,999ರೂ. ಇದೆ. ಆದರೀಗ ಫ್ಲಿಪ್​ಕಾರ್ಟ್​ನಲ್ಲಿ ಕಡಿಮೆ ಬೆಲೆಗೆ ನಿಮ್ಮದಾಗಿಸಬಹುದು.

ಬ್ಲಾಕ್ ಫ್ರೈಡೇ ಸೇಲ್​ನಲ್ಲಿ ಈ ಫೋನಿನ 8GB RAM + 128GB ಸ್ಟೋರೇಜ್ ಆಯ್ಕೆಯ ಫೋನ್ 27,499 ರೂ. ಗೆ ಮಾರಾಟ ಮಾಡುತ್ತಿದೆ. ಈ ಮೂಲಕ ಶೇ. 17 ರಷ್ಟು ಡಿಸ್ಕೌಂಟ್ ಪಡೆದುಕೊಂಂಡಿದೆ. 10500 ರೂ. ರಿಯಾಯಿತಿಯಲ್ಲಿ ಪಡೆಯಬಹುದು. ಇದರ ಜೊತೆಗೆ ಒಂದಿಷ್ಟು ಟ್ರಿಕ್ ಉಪಯೋಗಿಸಿ ಕೇವಲ 7999 ರೂ. ಗೆ ಈ ಫೋನನ್ನು ನಿಮ್ಮದಾಗಿಸಬಹುದು.

ಅದಲ್ಲದೆ ಫೆಡರಲ್ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಡ್ ಕಾರ್ಡ್ ಮೂಲಕ ಖರೀದಿಸಿದರೆ 1500 ರೂ. ಕಡಿಮೆ ಆಗುತ್ತಿದೆ. ಇಎಮ್​ಐ ಟ್ರಾನ್ಸಾಕ್ಷನ್​ನಲ್ಲಿ 200 ರೂ. ವರೆಗೆ ಇತರೆ ಡಿಸ್ಕೌಂಟ್ ಪಡೆಯಬಹುದು. ಇವುಗಳ ಜೊತೆಗೆ 17500 ರೂ. ವರೆಗೆ ಎಕ್ಸ್​ಚೇಂಕ್ ಆಫರ್ ನೀಡಲಾಗಿದೆ. ನಿಮ್ಮಲ್ಲಿರುವ ಮೊಬೈಲ್ ಉತ್ತಮ ಕಂಡಿಷನ್​ನಲ್ಲಿದ್ದರೆ ಅದು ಉತ್ತಮ ಬೆಲೆಗೆ ಸೇಲ್ ಆಗಬಹುದು. ಹೀಗಾದಾಗ ನಥಿಂಗ್ ಫೊನ್ 1 ಅನ್ನು 7999 ರೂ. ಗೆ ನಿಮ್ಮದಾಗಿಸಬಹುದು.

ನಥಿಂಗ್ ಫೋನ್ 1 ವಿಶೇಷತೆ :

  • ಇದು 6.55 ಇಂಚಿನ ಫುಲ್‌ ಹೆಚ್‌ ಡಿ ಪ್ಲಸ್‌ ಡಿಸ್‌ ಪ್ಲೇ ಹೊಂದಿದೆ. ಈ ಡಿಸ್‌ ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದ್ದು, 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ನೀಡಲಾಗಿದೆ.
  • ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ ಡ್ರಾಗನ್ 778G+ SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ.
  • ನಥಿಂಗ್ ಫೋನ್ (1) ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮೊದಲನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದೆ. ಇದು OIS ಜೊತೆಗೆ EIS ಇಮೇಜ್ ಸ್ಟೆಬಿಲೈಸೇಶನ್‌ ನೊಂದಿಗೆ ಬರುತ್ತದೆ.
  • ನಥಿಂಗ್ ಫೋನ್ (1) ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮೊದಲನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದೆ. ಇದು OIS ಜೊತೆಗೆ EIS ಇಮೇಜ್ ಸ್ಟೆಬಿಲೈಸೇಶನ್‌ ನೊಂದಿಗೆ ಬರುತ್ತದೆ.
  • ಈ ಫೋನ್ ​ನಲ್ಲಿರುವ ಎರಡನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸ್ಯಾಮ್‌ ಸಂಗ್‌ JN1 ಸೆನ್ಸಾರ್‌ ಹೊಂದಿದೆ. ಇದು EIS ಇಮೇಜ್ ಸ್ಟೆಬಿಲೈಸೇಶನ್, 114-ಡಿಗ್ರಿ ಫೀಲ್ಡ್ ಆಫ್ ವ್ಯೂ ಮತ್ತು ಮ್ಯಾಕ್ರೋ ಮೋಡ್‌ ಅನ್ನು ಒಳಗೊಂಡಿದೆ.
  • 16 ಮೆಗಾ ಪಿಕ್ಸೆಲ್ ಸೋನಿ IMX471 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
  • 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೈರ್ಡ್ ಚಾರ್ಜಿಂಗ್, 15W Qi ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್‌ ಬೆಂಬಲಿಸಲಿದೆ.
  • ಆದರೆ, ನಥಿಂಗ್‌ ಫೋನ್‌ (1) ನೊಂದಿಗೆ ಚಾರ್ಜರ್‌ ನೀಡಲಾಗಿಲ್ಲ ಕೇವಲ ಟೈಪ್‌ ಸಿ ಚಾರ್ಜಿಂಗ್ ಕೇಬಲ್‌ ಲಭ್ಯ ಮಾಡಿದೆ.

ಸದ್ಯ ನವೆಂಬರ್ 30 ವರೆಗೆ ನಡೆಯುತ್ತಿರುವ ಈ ಮೇಳದಲ್ಲಿ ಆಕರ್ಷಕ ಸ್ಮಾರ್ಟ್​ಫೋನ್​ಗಳು ಬಂಪರ್ ಡಿಸ್ಕೌಂಟ್​ ದರದಲ್ಲಿ ನೀವು ಕೊಂಡುಕೊಳ್ಳಬಹುದಾಗಿದೆ.