Home News ಪುತ್ತೂರಿನ ಬಸ್ಬನಿಲ್ದಾಣದ ಬಳಿ ತಲೆ ಎತ್ತಲಿದೆ ಬೃಹತ್ ಪಿಡಬ್ಲ್ಯುಡಿ ಕಾಂಪ್ಲೆಕ್ಸ್: ಶಾಸಕ ಅಶೋಕ್ ರೈ ಮನವಿಗೆ...

ಪುತ್ತೂರಿನ ಬಸ್ಬನಿಲ್ದಾಣದ ಬಳಿ ತಲೆ ಎತ್ತಲಿದೆ ಬೃಹತ್ ಪಿಡಬ್ಲ್ಯುಡಿ ಕಾಂಪ್ಲೆಕ್ಸ್: ಶಾಸಕ ಅಶೋಕ್ ರೈ ಮನವಿಗೆ ಸೈ ಎಂದ ಸಚಿವ ಜಾರಕಿಹೊಳಿ

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: ಸಂದರ್ಭ ಸಿಕ್ಕಾಗಲೆಲ್ಲಾ ಪುತ್ತೂರು ಕ್ಷೇತ್ರದ ಅಭಿವೃದ್ದಿಗೆ ಕಾಳಜಿ ವಹಿಸುತ್ತಿರುವ ಶಾಸಕ ಅಶೋಕ್ ರೈ ಅವರ ಅಭಿವೃದ್ದಿ ಕಾರ್ಯಕ್ಕೆ ಮತ್ತೊಂದು ಕೊಡುಗೆ ಸೇರಿಕೊಂಡಿದೆ. ಪುತ್ತೂರಿನ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ಬೃಹತ್ ಕಮರ್ಷಿಯಲ್ ಕಾಂಪ್ಲೆಕ್ಸ್ಬತಲೆ ಎತ್ತಲಿದೆ, ಶಾಸಕರ ಕನಸಿನ ಯೋಜನೆಗೆ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿಯವರು ಸೈ ಎಂದಿದ್ದಾರೆ.

ಮಂಗಳೂರಿನ‌ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ಲೋಕೋಪಯೋಗಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿದ ಶಾಸಕ ಅಶೋಕ್ ರೈ ಅವರು‌ ಪುತ್ತೂರು ಬಸ್ ನಿಲ್ದಾಣದ ಬಳಿ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗವಿದ್ದು ಅದು ಬಹಳ ವರ್ಷದಿಂದ ಹಾಗೇ ಉಳಿದುಕೊಂಡಿದೆ. ಇದರಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣವಾದಲ್ಲಿ ಇಲಾಖೆಗೂ ಹಣಕಾಸಿನ ನೆರವು ಆಗಲಿದ್ದು ,ಸರಕಾರಕ್ಕೂ ಪ್ರಯೋಜನವಿದೆ.‌

ಬಸ್ ನಿಲ್ದಾಣಕ್ಕೆ ತಾಗಿಕೊಂಡೇ ಇರುವ ಕಾರಣ ಇದು ನಿರ್ಮಾಣವಾದಲ್ಲಿ ಬಹಳ ಉಪಯುಕ್ತವಾಗಲಿದೆ ಎಂದು ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳುವಂತೆ ಇಲಾಖೆ ಇಂಜಿನಿಯರ್ ಗೆ ಸಚಿವರು ಸೂಚನೆ ನೀಡಿದರು. ಕಾಂಪ್ಲೆಕ್ಸ್ ನಿರ್ಮಾಣದೊಂದಿಗೆ ಪುತ್ತೂರಿಗೆ ಮತ್ತೊಂದು ಹಿರಿಮೆ ಹೆಚ್ಚಿಸಿದಂತಾಗಿದೆ.