Home latest ಬೆಳ್ತಂಗಡಿ:ಬೆಂಗಳೂರಿಗೆ ಕೆಲಸಕ್ಕೆಂದು ತೆರಳಿದ್ದ ಕಳೆಂಜದ ಯುವಕ ನಾಪತ್ತೆ

ಬೆಳ್ತಂಗಡಿ:ಬೆಂಗಳೂರಿಗೆ ಕೆಲಸಕ್ಕೆಂದು ತೆರಳಿದ್ದ ಕಳೆಂಜದ ಯುವಕ ನಾಪತ್ತೆ

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ : ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕೆಂದು ತೆರಳಿದ್ದ ಯುವಕ ನಾಪತ್ತೆಯಾಗಿದ್ದು,ತಂದೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಫೆ.9 ರಂದು ದೂರು ನೀಡಿರುವ ಘಟನೆ ನಡೆದಿದೆ.

ನಾಪತ್ತೆಯಾದವರು ಕಳೆಂಜ ಗ್ರಾಮದ ಕೊತ್ತೋಡಿ ನಿವಾಸಿ ಸೇಸಪ್ಪ ಗೌಡ ಮತ್ತು ನೇತ್ರಾವತಿ ದಂಪತಿ ಪುತ್ರನಾದ ಸುಧಾಕರ.ಕೆ(28.ವ)ಎಂದು ತಿಳಿದುಬಂದಿದೆ.

ಸುಧಾಕರ್ ಎಂಬುವವರು ಅತ್ತ ಕೆಲಸಕ್ಕೂ ಹೋಗದೆ ಇತ್ತ ಮರಳಿ ಮನೆಗೂ ಬಾರದೆ ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು,ಈ ಬಗ್ಗೆ ನಾಪತ್ತೆಯಾದ ಯುವಕನ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸುಧಾಕರ ಕೆ ಎಂಬವರು ಜ.13 ರಂದು ಬೆಂಗಳೂರಿನ BOSCH ಕಂಪೆನಿಯಲ್ಲಿ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದರು. ಆ ಬಳಿಕ ಮನೆಯವರೊಂದಿಗೆ ಸಂಪರ್ಕವನ್ನು ಕಳೆದುಕೊಂಡಿದ್ದರು. ಬೆಂಗಳೂರಿನಲ್ಲಿ ಕೆಲಸ
ಮಾಡಿಕೊಂಡಿರಬಹುದೆಂದು ತಿಳಿದಿದ್ದ ಮನೆಯವರು, ತಮ್ಮ ಮಗನ ಮೊಬೈಲಿಗೆ ಕರೆಮಾಡಿದ್ದ ಸಂದರ್ಭದಲ್ಲಿ ಫೋನ್ ಸ್ವಿಚ್ ಆಫ್ ಬರುತ್ತಿದ್ದುದನ್ನು ಕಂಡು ಅನುಮಾನಗೊಂಡು ಮಗನ ಸ್ನೇಹಿತರಿಗೆ ಕರೆ
ಮಾಡಿ ಈ ವಿಚಾರ ತಿಳಿಸಿದ್ದರು. ಈ ಸಂದರ್ಭ ಸ್ನೇಹಿತರು ಆತ ಕೆಲಸಕ್ಕೆ ಬಂದಿಲ್ಲವೆಂದು ತಿಳಿಸಿದ್ದಾರೆ.

ಕಾಣೆಯಾದ ಯುವಕ ಸುಧಾಕರ್ ರವರು 5ಅಡಿ 4 ಇಂಚು ಎತ್ತರ,ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಬಿಳಿ ಬಣ್ಣದ ಟಿ ಶರ್ಟ್ , ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಇವರು ಕನ್ನಡ, ತುಳು,ಇಂಗ್ಲಿಷ್ ಭಾಷೆಯನ್ನು ಬಲ್ಲವರಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಾಹಿತಿ ನೀಡುವಂತೆ ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸು ಉಪನಿರೀಕ್ಷಕರು ತಿಳಿಸಿದ್ದಾರೆ.

od 08256-277253, Dist control:0824-2220500, E
Mail ID: dharmasthalamaq@ksp.gov.on 3.3