Home Interesting ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿಯ ಹರಿಕಾರ ಹರೀಶ್ ಪೂಂಜಾರಿಗೆ ಶಾಸಕನ ಪಟ್ಟ ಸಿಕ್ಕಿ ಇಂದಿಗೆ 4 ವರ್ಷ...

ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿಯ ಹರಿಕಾರ ಹರೀಶ್ ಪೂಂಜಾರಿಗೆ ಶಾಸಕನ ಪಟ್ಟ ಸಿಕ್ಕಿ ಇಂದಿಗೆ 4 ವರ್ಷ !! | ಈ ಸಂಭ್ರಮದ ವಿಜಯೋತ್ಸವದಲ್ಲಿ ಇಂದು ನೀವು ಪಾಲ್ಗೊಳ್ಳಿ, ನಿಮ್ಮವರನ್ನೂ ಕರೆತನ್ನಿ

Hindu neighbor gifts plot of land

Hindu neighbour gifts land to Muslim journalist

ವಿಧಾನ ಸಭೆಯ ಚುನಾವಣೆಯಲ್ಲಿ ಗೆದ್ದು ಬೆಳ್ತಂಗಡಿಯ ಹೆಮ್ಮೆಯ ಶಾಸಕರಾಗಿ ಆಯ್ಕೆ ಆದ ನಮ್ಮೆಲ್ಲಾ ಪ್ರೀತಿಯ ಹರೀಶ್ ಪೂಂಜಾ, ಶಾಸಕ ಸ್ಥಾನವನ್ನು ಅಲಂಕರಿಸಿ ಇಂದಿಗೆ 4 ವರ್ಷಗಳು ಸಂದುತ್ತದೆ.

ಈ ಹಿನ್ನೆಲೆಯಲ್ಲಿ ಇಂದು ವಿಜೃಂಭಣೆಯ ವಿಜಯೋತ್ಸವ ನಡೆಯಲಿದ್ದು, ಅಭಿವೃದ್ಧಿಯ ಹರಿಕಾರ ಹೆಮ್ಮೆಯ ಶಾಸಕ ಹರೀಶ್ ಪೂಂಜಾ ರ ಎಲ್ಲಾ ಅಭಿಮಾನಿ ಬಳಗ ಒಟ್ಟಾಗಿ ಈ ಸಂಭ್ರಮದ ವಿಜಯೋತ್ಸವದಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿಸಿದ್ದಾರೆ.

ತನ್ನ ನಾಲ್ಕು ವರ್ಷದ ಯಶಸ್ವಿಯುತ ಕಾರ್ಯದ ಕುರಿತು ಮಾತನಾಡಿದ ಹರೀಶ್ ಪೂಂಜಾ “ನಾಲ್ಕು ವರ್ಷಗಳ ಹಿಂದೆ ನಮ್ಮ ಕಾರ್ಯಕರ್ತರು ಬೃಹತ್ ವಿಜಯವೊಂದನ್ನು ಸಾಧಿಸಿ ಬೆಳ್ತಂಗಡಿ ತಾಲೂಕಿನ ಬಂಧುಗಳ ಪ್ರತಿನಿಧಿಯಾಗುವ ಭಾಗ್ಯವನ್ನು ನನಗೆ ಕರುಣಿಸಿದಿರಿ. ಅಂದು ಶಾಸಕನಾಗುವ ಸಂದರ್ಭದಲ್ಲಿ ನನ್ನ ಜೊತೆ ನಿಂತ ಅಪಾರ ಸಂಖ್ಯೆಯ ಕಾರ್ಯಕರ್ತ ಬಂಧುಗಳು,ಹಿರಿಯರು,ಮಾತೆಯರು ಹಾಗೂ ತಾಲೂಕಿನ ಎಲ್ಲಾ ಮತದಾರ ಭಾಂದವರು ಈ ನಾಲ್ಕು ವರ್ಷಗಳಲ್ಲೂ ನಾನು ನವ ಬೆಳ್ತಂಗಡಿಯ ಕನಸನ್ನು ಸಾಕಾರಗೊಳಿಸಲು ಶಕ್ತಿಮೀರಿ ಶ್ರಮವಹಿಸಿದಾಗ ತಾವೆಲ್ಲರೂ ನನ್ನ ಸುಖ ಕಷ್ಟಗಳಲ್ಲಿ ಮನೆಯವರಾಗಿ ನಿಂತು ಹರಸಿ ಹಾರೈಸಿದ್ದೀರಿ. ತಮಗೆಲ್ಲರಿಗೂ ನಾನು ಚಿರಋಣಿ. ನಿಮ್ಮೆಲ್ಲರ ಸಲಹೆ, ಸಹಕಾರ, ಮಾರ್ಗದರ್ಶನ ಇದೆ ರೀತಿ ಸದಾ ನನ್ನ ಮೇಲಿರಲಿ” ಎಂದಿದ್ದಾರೆ.

ದಿನಾಂಕ 15.05.2022 ರಂದು 2.00ಗಂಟೆಗೆ ಸರಿಯಾಗಿ ಬೆಳ್ತಂಗಡಿ ಜೂನಿಯರ್ ಕಾಲೇಜು ಹತ್ತಿರದ ಕುತ್ಯಾರು ದೇವಸ್ಥಾನ ಬಳಿಯಿಂದ ಬೈಕ್ ರಾಲಿ , ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನ ಬಳಿಯಿರುವ ಶಾರದಾ ಮಂಟಪ ತನಕ ನಡೆಯಲಿದೆ. ಸಾವಿರಾರು ಸಂಖ್ಯೆಯಲ್ಲಿ ಎಲ್ಲರೂ ಬರಬೇಕಾಗಿ ವಿನಂತಿಸಿದ್ದಾರೆ.

ರಾಲಿ ಗೆ ಬರುವಾಗ ಬಿಜೆಪಿ ಧ್ವಜ ಇರಲಿ ಎಂಬ ಮಾತನ್ನು ಬಿಜೆಪಿ ಕಾರ್ಯಕರ್ತರು ತಿಳಿಸಿದ್ದಾರೆ. ಕುತ್ಯಾರು ಸೋಮನಾಥೇಶ್ವರ ದೇವರ ಪ್ರಸಾದ ಅಂದು ಸಿಕ್ಕಿದೆ, ಇಂದು ಅಲ್ಲಿಂದ ಪ್ರಸಾದ ತೆಗೆದುಕೊಂಡು ಪ್ರಾರಂಭವಾಗಿ ಉಜಿರೆಯ ಹರಿ ಹರ ದೇವಸ್ಥಾನ ಜನಾರ್ದನ ಸ್ವಾಮಿ ದೇವಸ್ಥಾನ ದೇವರ ಪ್ರಸಾದ ಸ್ವೀಕರಿಸುವ ತನಕ ಈ ವಿಜಯೋತ್ಸವ ನಡೆಯಲಿದೆ.