

Dharmasthala: ಧರ್ಮಸ್ಥಳ ಬುರುಡೆ, ಧರ್ಮಸ್ಥಳ ಹೂತಿಟ್ಟ ಶವ, ಧರ್ಮಸ್ಥಳ ಪ್ರದೇಶದಲ್ಲಿ ನಡೆದ ಹೆಣ್ಣುಮಕ್ಕಳು, ವಿದ್ಯಾರ್ಥಿನಿಯರ ಅತ್ಯಾಚಾರ ಕೊಲೆ ಹೀಗೆ ಹಲವಾರು ಹೆಸರುಗಳಿಂದ ಕರೆಸಿಕೊಳ್ಳುತ್ತಿರುವ ಪ್ರಕರಣವನ್ನು ಸರ್ಕಾರ SIT ತನಿಖೆಗೆ ವಹಿಸಿದೆ. ಈ ಪ್ರಕಾರ ಅತ್ಯಂತ ದೊಡ್ಡ ಪ್ರಭಾವಿಗಳು ಇದ್ದಾರೆ ಎನ್ನಲಾಗುವ ಈ ಪ್ರಕರಣವನ್ನು ಸರ್ಕಾರ ಕೂಡಾ ಗಂಭೀರವಾಗಿ ಪರಿಗಣಿಸಿದೆ ಎನ್ನಬಹುದು. ಕಾರಣ ಏನೇ ಇರಲಿ: ಸಾರ್ವಜನಿಕರ ಒತ್ತಡ, ಸೋಷಿಯಲ್ ಮೀಡಿಯಾ ಎತ್ತಿಕೊಟ್ಟ ಪ್ರಚಾರ ಮತ್ತು ಈ ಬೇಡಿಕೆಗೆ ವಕೀಲ ವರ್ಗದಿಂದ ಮತ್ತು ಮಾಜೀ ನ್ಯಾಯಾಧೀಶರುಗಳು ಇಟ್ಟ ಬೇಡಿಕೆ ಯಶಸ್ವಿಯಾಗಿದೆ: ಎಸ್ಐಟಿ ತನಿಖೆ ಘೋಷಣೆ ಆಗಿಯೇ ಹೋಗಿದೆ. ಇದು ಒಳ್ಳೆಯ ಬೆಳವಣಿಗೆಯೇ. SIT ತಂಡ ಮಂಗಳೂರಿಗೆ ಬಂದು ನಂತರ ಬೆಳ್ತಂಗಡಿಗೆ ಇಳಿದು 12 ಗಂಟೆಗಳು ಕಳೆದೇ ಹೋಗಿದೆ. ಹಳೆಯ ಧೂಳು ತುಂಬಿದ ಕಡತಗಳು ಟೇಬಲ್ಲಿನ ಮೇಲೆ ಒಟ್ಟಾಗುತ್ತಿವೆ. ತನಿಖೆ ಇನ್ನೇನು ಶುರುವಾಗಲಿದೆ. ಆದರೆ ತನಿಖೆ ನೇರ ಶುರುಮಾಡುವ ಮುನ್ನ ಒಂದಿಷ್ಟು ಪೂರ್ವ ತಯಾರಿ ಅಗತ್ಯ, SIT ತಂಡ ಏನೇನು ತಯಾರಿ ಮಾಡಿಕೊಳ್ಳಬಹುದು ಅನ್ನೋದರ ಪಟ್ಟಿ ಇಲ್ಲಿದೆ.
ಈ ಪ್ರಕರಣದ ಹಿಂದೆ ಇರಬಹುದಾದ ಪ್ರಭಾವಿಗಳ ಕೈ ಅಂತಾರಾಷ್ಟ್ರೀಯ ಮಟ್ಟಕ್ಕೂ ವ್ಯಾಪಿಸಿದೆ. ಈ ಪ್ರಭಾವದ ಹಿನ್ನೆಲೆಯಲ್ಲಿ ತನಿಖೆಯ ವಿಧಾನವನ್ನು ಬದಲಿಸಿಕೊಂಡು, ಮುಂಜಾಗ್ರತೆ ಕ್ರಮಗಳನ್ನು ಇಟ್ಟುಕೊಂಡು ಮುಂದೆ ಹೋಗಬೇಕಾದ ಅನಿವಾರ್ಯತೆಯಿದೆ. ಇದೆಲ್ಲಾ ನಮ್ಮ ಅನುಭವಿ SIT ಮುಖ್ಯಸ್ಥ ಪ್ರಣವ್ ಮೊಹಂತಿ ಅವರಿಗೆ ಗೊತ್ತಿಲ್ಲದೆ ಇಲ್ಲದ್ದಲ್ಲ. ಅವರು ನಮ್ಮೆಲ್ಲರಿಗಿಂತ ಬುದ್ದಿವಂತರು, ಚಾಣಕ್ಷರು. ಹಾಗಿದ್ದರೂ ಕರೆದು ಕೂಗಿ ಹೇಳೋದು ನಮ್ಮ ಮಾಧ್ಯಮದ ಕೆಲಸ.
SIT ಮಾಡಬೇಕಾದ ಮುಜಾಗೃತೆ ಏನೇನು?
1. ಸಾಕ್ಷಿನಾಶ ಆಗ್ತಿದೆ ಅಂತ ಬಹು ದೊಡ್ಡ ಆರೋಪ ಇದೆ. ಪ್ಲಾಸ್ಟಿಕ್ ತ್ರಾಜ್ಯ ಕ್ಲೀನ್ ಮಾಡುವ ನೆಪದಲ್ಲಿ ಧರ್ಮಸ್ಥಳದ ಕಾಡಿನಲ್ಲಿ ಮೂಳೆ ಹುಡುಕಾಟ ನಡೆದಿದೆ ಅಂತ ದೂರಿದೆ. ಮೊತ್ತ ಮೊದಲಿಗೆ, ಈಗಾಗಲೇ ಸಾಕ್ಷನಾಶ ಮಾಡಿದವರನ್ನು ಮತ್ತು ಅವರಿಗೆ ಕೆಲಸ ವಹಿಸಿದವರನ್ನು ಬಂಧಿಸಬೇಕು
2. ಎಲ್ಲೆಲ್ಲಿ ಹವಾಲ ಹಣ ಓಡಾಡುತ್ತಿದೆಯೋ ಅದನ್ನು ಮೊದಲು ನಿಲ್ಲಿಸುವ ಕ್ರಮ ಆಗಬೇಕು. ಹಣವೇ ಎಲ್ಲಾ
3. ಯಾರ ಮೇಲೆ ದೂರುಗಳಿದ್ದಾವೋ, ಯಾರನ್ನೂ ಆಪಾದಿತರು ಅಂತ ಈಗಾಗಲೇ ಸಮಾಜ ಗುರುತಿಸಿದೆಯೋ ಅವರ ಬ್ಯಾಂಕ್ ಅಕೌಂಟ್ಗಳನ್ನು ತಕ್ಷಣ ಬ್ಲಾಕ್ ಮಾಡಬೇಕು
4. ಯಾವುದೇ ಅಕ್ರಮ ಹಣಗಳು ಟ್ರಾಸ್ಫರ್ ಆಗದಂತೆ ನಿಗಾ ವಹಿಸಬೇಕು. ಹಣದ ಹರಿವು ನಿಲ್ಲಿಸಿದರೆ, ಅಲ್ಲಿಗೆ ಸಾಕ್ಷಿ ನಾಶ ಕೂಡಾ ನಿಂತ ಹಾಗಾಗುತ್ತದೆ
5. ಧರ್ಮಸ್ಥಳಕ್ಕೆ ಸಂಬಂಧ ಪಟ್ಟಂತೆ ಸಾಕ್ಷಿ ನೀಡಲು ತಯಾರಿರುವವರಿಗೆ ಬೇಕಾದ ಸೆಕ್ಯೂರ್ ವ್ಯವಸ್ಥೆಯನ್ನು ಎಸ್ಐಟಿ ಕಲ್ಪಿಸಬೇಕು
6. ಶೀಘ್ರದಲ್ಲಿ ಸಂತ್ರಸ್ತರಿಗೆ ಸಹಾಯವಾಣಿ ತೆರೆಯಬೇಕು
7. ಧರ್ಮಸ್ಥಳದ ಕೆಲಸಗಾರರನ್ನು ವಿಶೇಷ ತನಿಖೆಗೆ ಒಳಪಡಿಸಬೇಕು, ಅವರಿಂದ ಧರ್ಮಸ್ಥಳದ ರಹಸ್ಯ ಮಾಹಿತಿಗಳನ್ನು ಕಲೆ ಹಾಕಬೇಕು
8. ಧರ್ಮಸ್ಥಳದ ಕೆಲಸಗಾರರ ಮೊಬೈಲ್ ಫೋನ್ ಅನ್ನು ಟ್ಯಾಪ್ ಮಾಡಲಾಗಿದೆ ಎಂಬ ಸುದ್ದಿ ಹರಡುತ್ತಾ ಇದೆ. ಈ ಬಗ್ಗೆ SIT ತನಿಖೆ ನಡೆಸಬೇಕು
8. ಧರ್ಮಸ್ಥಳದ ಸುತ್ತಮುತ್ತ ಸೀಜ್ ಮಾಡಬೇಕು, ಅಲ್ಲಿಗೆ ಬರುವ ಪಬ್ಲಿಕ್’ನ್ನು ತಡೆ ಹಿಡಿಯಬೇಕು ಅಥವಾ ನಿಯಂತ್ರಿಸಬೇಕು
9.ರಾತ್ರಿಯ ಹೊತ್ತಲ್ಲಿ ಸಾಕ್ಷ ನಾಶ ಸಂಭವ ಇರುವ ಕಾರಣದಿಂದ ರಾತ್ರಿ ಅಗತ್ಯ ಸೆಕ್ಷನ್ ಜಾರಿಗೊಳಿಸಬೇಕು
10.ಧರ್ಮಸ್ಥಳದಲ್ಲಿ ನಡೆದಂತಹಾ ಕ್ರೈಂ ಕುರಿತು ಯಾರಾದರೂ ದೂರು ನೀಡಲು ಮುಂದೆ ಬಂದಲ್ಲಿ ಅವರಿಗೆ ಸೂಕ್ತ ವ್ಯವಸ್ಥೆಯನ್ನು ಒದಗಿಸಬೇಕು
11. ಧರ್ಮಸ್ಥಳ ಗ್ರಾಮ ಪಂಚಾಯತ್ ಕೆಲ ದಿನಗಳಿಂದ ತಾವು ಅನಾಥ ಶವಗಳನ್ನು ಹೂತು ಹಾಕಿದ್ದೇವೆ ಅಂತಿದೆ. SIT ಮೊದಲಿಗೆ ಗ್ರಾಮ ಪಂಚಾಯತ್ ಹೂತು ಹಾಕಿದ ಶವಗಳ ಪಟ್ಟಿ ಕೇಳಿ ಮ್ಯಾಪ್ ಸಿದ್ದ ಪಡಿಸಿಕೊಳ್ಳಬೇಕು. ಇಲ್ಲದಿದ್ದರೆ, ಮುಂದಕ್ಕೆ ಭೀಮನು ಹೂತ ಶವ ಹೊರಕ್ಕೆ ತೆಗೆದರೆ, ಅದನ್ನೂ ಅಲ್ಲಿನ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸಿಬ್ಬಂದಿಗಳು, ಇವು ಅನಾಥ ಶವ ಅನ್ನುವ ಸಾಧ್ಯತೆ ಇದೆ
12. ಅರಣ್ಯ ಇಲಾಖೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಅನುಮಾನ ಇದ್ದವರನ್ನು ರಜೆ ಮೇಲೆ ಕಳುಹಿಸಿ, ವಿಶ್ವಾಸಿ ಪೊಲೀಸರನ್ನು ಮಾತ್ರ ಅರಣ್ಯ ಪ್ರದೇಶಕ್ಕೆ ತೆರಳುವ ಸಂದರ್ಭ ಬಳಸಿಕೊಳ್ಳಿ. ಕಾಡಿನಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಎಚ್ಚರಿಕೆ ಕೊಟ್ಟು ಅನೌನ್ಸ್ ಮಾಡಬೇಕು
13. ಯಾವುದೇ ಕಾರಣಕ್ಕೂ, ಲೋಕಲ್ ಪೊಲೀಸ್ ಕಡೆಯಿಂದ ಸಣ್ಣ ಪಿಯೋನ್ ಸಹಾಯವನ್ನೂ ಕೇಳಬೇಡಿ. ಧರ್ಮಸ್ಥಳ, ಬೆಳ್ತಂಗಡಿ ಪೊಲೀಸರಿಂದ ನಿಷ್ಪಕ್ಷಪಾತ ದಕ್ಷತೆಯನ್ನು ಯಾವತ್ತಿಗೂ ನಿರೀಕ್ಷಿಸಬೇಡಿ. ಯಾಕೆಂದರೆ ಸಾಕಷ್ಟು ಬಾರಿ ನಾವು ಈ ವಿಷಯ ನೋಡಿ ಬಿಟ್ಟಿದ್ದೇವೆ. ಇತ್ತೀಚಿಗೆ ಕೂಡ ಅನಾಮಿಕ ತಾನು ಕೂತ ಶವಗಳನ್ನು ತೋರಿಸುತ್ತೇನೆ ಎಂದು ಮುಂದೆ ಬಂದರೂ ಕ್ರಮ ಕೈಗೊಳ್ಳದ ದಕ್ಷಿಣ ಕನ್ನಡದ ಪೊಲೀಸರನ್ನು, ಪೋಲಿಸ್ ಮುಖ್ಯ ಅಧಿಕಾರಿಗಳನ್ನು ನಾವು ಕಂಡಿದ್ದೇವೆ. ದೂರು ಕೊಟ್ಟ ಸಾಕ್ಷಿದಾರನಿಗೆ ಮಂಪರು ಪರೀಕ್ಷೆ ಬಗ್ಗೆ ಮಾತಾಡಿದ್ದಾರೆ ನಮ್ಮ ದಕ್ಷಿಣ ಕನ್ನಡದ ಪೊಲೀಸರು, ಅಂದರೆ ಊಹಿಸಿಕೊಳ್ಳಿ, ಯಾವ ಮಟ್ಟಿಗೆ ಒತ್ತಡಗಳು ಅವರ ಮೇಲೂ ಇದ್ದಿರಬಹುದು ಎಂದು?!
14. ಶವಗಳ ಅಗೆಯುವ ಕೆಲಸ ಮಾಧ್ಯಮಗಳ ಕ್ಯಾಮರಾ ಬೆಳಕಿನಲ್ಲಿ ನಡೆಯಬೇಕು. ಹೈಡ್ ಆಂಡ್ ಸೀಕ್ ಆಟ ಸಾಕಿನ್ನು. ಕಣ್ಣಾಮುಚ್ಚಾಲೆ ಆಟ ನೋಡಿ ನೋಡಿ ಸಾಕಾಗಿದೆ
15. ಪಾರ್ಥಿವ ಶರೀರದ ಎಸ್ಕ್ಯೂಮ್ ಮಾಡಿದ ಬಾಡಿಗಳನ್ನು ಅತ್ಯಂತ ಭದ್ರವಾಗಿ ಇಟ್ಟುಕೊಳ್ಳುವುದು ಭಾರಿ ಅಗತ್ಯ. ಅಲ್ಲಿ ಬೇರೊಂದು ಡೆಡ್ ಬಾಡಿಯ ಬದಲಾವಣೆ ಆಗಲ್ಲ ಅನ್ನೋದು ಗ್ಯಾರಂಟಿ ಇಲ್ಲ
16. ಎಫ್ ಎಸ್ ಎಲ್ ಗಳಿಗೆ ಸ್ಯಾಂಪಲ್ ಕಳಿಸುವ ಸಂದರ್ಭ ತೀರಾ ಎಚ್ಚರಿಕೆ ಅಗತ್ಯ. ಸ್ಯಾಂಪಲ್ ತೆಗೆಯುವ ವೈದ್ಯರು ಅವರ ದಕ್ಷತೆ ಪಾರದರ್ಶಕತೆ, ಸ್ಯಾಂಪಲ್ ಪ್ಯಾಕ್ ಮತ್ತು ಸೀಲ್ ಮಾಡುವ ವ್ಯಕ್ತಿ, ಅದನ್ನು ಕೊರಿಯರ್ ಮೂಲಕ ಎಫ್ ಎಸ್ ಎಲ್ ಲ್ಯಾಬ್ ಗಳಿಗೆ ಕಳಿಸುವ ಲಾಜಿಸ್ಟಿಕ್ ವಿಧಾನ ಕೂಡಾ ಭಾರೀ ಭದ್ರತೆಯಲ್ಲಿ, ಹದ್ದಿನ ಕಣ್ಣಿನಲ್ಲಿ ನಡೆಯಬೇಕು. ಒಂದೇ ಒಂದು ಲೂಪ್ ಹೋಲ್ ಇದ್ರೂ ಅದರ ಮೂಲಕ ಪ್ರಭಾವಿಗಳು ಭ್ರಷ್ಟ ವ್ಯವಸ್ಥೆಗೆ ದಾರಿ ಮಾಡಿಕೊಡುವ ನಿಚ್ಚಳ ಸಾಧ್ಯತೆಗಳಿವೆ. ಒಂದು ರೀತಿಯಲ್ಲಿ ಮತಯಂತ್ರ ಮ್ಯಾನೇಜ್ ಮಾಡ್ತೇವಲ್ಲ ಆ ಮಟ್ಟಿಗಿನ ಭದ್ರತೆ ತೀರಾ ಅಗತ್ಯ. ಕೆಲ ಇಂಜಿನಿಯರ್ ಗಳು ಮತ್ತು ಕೆಲವು ವಿಜ್ಞಾನಿಗಳು ಶವ ಅಗೆಯುವ ಸಂದರ್ಭ ಸಾಕ್ಷ್ಯ ನಾಶ ಆಗದಂತೆ ಸಹಾಯ ಮಾಡಬಲ್ಲೆವು ಎಂದು ಮುಂದೆ. ಬಂದಿದ್ದು, ಅವರ ಸಹಾಯ ಪಡೆದುಕೊಳ್ಳಬಹುದು
17. FSL ಲಾಬ್ ಗಳಿಗೆ ಕಳಿಸುವ ಸ್ಯಾಂಪಲ್ ಗಳನ್ನು ಕೂಡಾ ಗೌಪ್ಯತೆಯಲ್ಲಿ ಇಟ್ಟು ಅನಾಲಿಸಿಸ್ ಮಾಡಬೇಕಿದೆ.
18. ಆಲ್ಟರ್ ನೆಟ್ ಸ್ಯಾಂಪಲ್ ಗಳನ್ನು ವಿದೇಶದ ಲ್ಯಾಬ್ ಗಳಲ್ಲಿ ಸೆಕೆಂಡ್ ಒಪೀನಿಯನ್ ಗೆ ಕಳಿಸಿ, ರಿಪೋರ್ಟ್ ತಾಳೆ ಹಾಕಬೇಕಾದ ಪರಿಸ್ಥಿತಿ ಇವತ್ತು ನಿರ್ಮಾಣ ಆಗಿದೆ. ಸೆಕೆಂಡ್ ಥರ್ಡ್ ಒಪೀನಿಯನ್ ಅಗತ್ಯ. ನಂಬಬೇಡಿ, ಯಾರನ್ನೂ ನಂಬಬೇಡಿ
ಒಟ್ಟಾರೆ ನೂರಾರು ಮಹಿಳೆಯರ ಶವಗಳು ಸಿಕ್ಕಿ, ಅವುಗಳ ಆತ್ಮಕ್ಕೆ ಒಂದು ಚಿರಶಾಂತಿ ನೀಡಲು ಅಪರಾಧಿಗಳಿಗೆ ಶಿಕ್ಷೆ ಆಗಲೇ ಬೇಕು, ಅದೇ ಎಲ್ಲರ ಬೇಡಿಕೆ.
SIT ಮುಖ್ಯಸ್ಥ ಪ್ರಣವ್ ಮೊಹಂತಿ ಸಾಹೇಬರೇ, ಯಾರನ್ನೂ ನಂಬದoತೆ ಆಗಿರುವ ಸಂದರ್ಭ ಇದು. ಇಂಥ ಹೊತ್ತಲ್ಲಿ ನಿಮ್ಮ ಮೇಲೆ ಅತೀವ ನಂಬಿಕೆ ಇಟ್ಟು ನಿಮ್ಮನ್ನು ದೇವರ ಸ್ಥಾನದಲ್ಲಿಟ್ಟು ನಿಮ್ಮ ನೇತೃತ್ವದಲ್ಲಿ ತನಿಖೆ ಆಗಬೇಕು ಅಂದಿದ್ದರು ಹೋರಾಟಗಾರರು. ಇದು ವಿಶ್ವದ ಇತಿಹಾಸದಲ್ಲಿ ರೆಕಾರ್ಡ್ ಆಗುವಂತಹ ಒಂದು ಪ್ರಕರಣ. ನೂರಾರು ನರಮೇಧದ ಪ್ರಕರಣ. ಅದರ ತನಿಖೆ ಮಾಡುವ ಜವಾಬ್ದಾರಿ ಮತ್ತು ಸುವರ್ಣ ಅವಕಾಶ ನಿಮ್ಮ ತಂಡದ್ದಾಗಿದೆ. ನಿಮ್ಮ ಮತ್ತು ಸರ್ಕಾರದ ಮೇಲೆ ಜನರಿಗೆ ಅತೀವ ನಿರೀಕ್ಷೆಯಿದೆ. ಪೂರ್ತಿ ನಂಬಿಕೆಯಿಂದ, ನಿಮಗೆ ಮತ್ತು ನಿಮ್ಮ ತಂಡಕ್ಕೊಂದು ಬಿಗ್ ವೆಲ್ಕಮ್ ಸಲ್ಯೂಟ್ !
*ಉದಯಕುಮಾರ್, ಸಂಪಾದಕರು, ಹೊಸ ಕನ್ನಡ ಪತ್ರಿಕಾ ಸಮೂಹ













