Home latest ಬಂಟ್ವಾಳ:ಸಹಕಾರಿ ಸಂಘದ ಬ್ಯಾಂಕ್ ದರೋಡೆಗೆ ಯತ್ನ |ಪಿಕ್ಕಾಸು ಬಳಸಿ ಬೀಗ ಮುರಿದು ಒಳ ನುಗ್ಗಿ ಬರೀಗೈಯಲ್ಲಿ...

ಬಂಟ್ವಾಳ:ಸಹಕಾರಿ ಸಂಘದ ಬ್ಯಾಂಕ್ ದರೋಡೆಗೆ ಯತ್ನ |ಪಿಕ್ಕಾಸು ಬಳಸಿ ಬೀಗ ಮುರಿದು ಒಳ ನುಗ್ಗಿ ಬರೀಗೈಯಲ್ಲಿ ವಾಪಸ್ ಆದ ಕಳ್ಳರು

Hindu neighbor gifts plot of land

Hindu neighbour gifts land to Muslim journalist

ಬಂಟ್ವಾಳ:ಸಹಕಾರಿ ಬ್ಯಾಂಕ್ ನೊಳಗೆ ಕಳ್ಳರು ನುಗ್ಗಿ ಬರಿಗೈಯಲ್ಲಿ ವಾಪಾಸು ಆಗಿರುವ ಘಟನೆ ಇಂದು ಸಿದ್ದಕಟ್ಟೆಯಲ್ಲಿ ನಡೆದಿದೆ.

ಸಿದ್ಧಕಟ್ಟೆ ವ್ಯವಸಾಯ ಸಹಕಾರಿ ಸಂಘದ ಬ್ಯಾಂಕಿನ
ಶಟರ್’ಅನ್ನು ಪಿಕ್ಕಾಸು ಬಳಸಿ ಬೀಗ ಮುರಿದು ಬ್ಯಾಂಕ್ ಒಳಗೆ ನುಗ್ಗಿದ್ದಾರೆ. ಬಳಿಕ ಬ್ಯಾಂಕ್ ಗೊದ್ರೇಜ್ ಬಾಕ್ಸ್ ಹಾಗೂ ಕ್ಯಾಶ್ ಕೌಂಟರ್‌’ಅನ್ನು ಜಾಲಾಡಿದ್ದಾರೆ.ಆದರೆ ಸೇಫ್ ಲಾಕರ್‌ನೊಂದಿಗೆ ಭದ್ರತೆಯ ಬ್ಯಾಂಕ್ ಆಗಿರುವುದರಿಂದ ಕಳ್ಳರಿಗೆ ಕಳ್ಳತನ
ಮಾಡಲು ಸಾಧ್ಯವಾಗಿಲ್ಲ.

ಬೆಳಗ್ಗೆ ಬ್ಯಾಂಕಿನ ಸಮೀಪದ ಅಂಗಡಿಯವರು ನೋಡಿದಾಗ ಬ್ಯಾಂಕಿನ ಶಟರ್ ಮುರಿದ ಬಗ್ಗೆ ಗಮನಕ್ಕೆ ಬಂದಿದ್ದು ಬಂಟ್ವಾಳ ಪೊಲೀಸರಿಗೆ ಮಾಹಿತಿ
ನೀಡಲಾಗಿದೆ.ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು, ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ಪೆಕ್ಟರ್ ಟಿ.ಡಿ ನಾಗರಾಜ್, ಎಸ್ಎಐ.ಹರೀಶ್,ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಎಸ್.ಐ ಸಂಜೀವ, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.