

ತಾಯಿಯು ನಿದ್ದೆಯಲ್ಲಿದ್ದ ವೇಳೆ ಪಕ್ಕದಲ್ಲಿ ಮಲಗಿದ್ದ ಏಳು ತಿಂಗಳ ಮಗುವನ್ನು ವ್ಯಕ್ತಿಯೊಬ್ಬರು ಅಪಹರಿಸಿಕೊಂಡು ಹೋಗಿರೋ ಆಘಾತಕಾರಿ ಘಟನೆ ನಡೆದಿದೆ.
ಇಂತಹದೊಂದು ಘಟನೆ ಮಥುರಾ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ ನಡೆದಿದ್ದು, ತಾಯಿಯೂ ತನ್ನ ಏಳು ತಿಂಗಳ ಮಗುವನ್ನು ಪಕ್ಕದಲ್ಲಿ ಮಲಗಿಸಿಕೊಂಡು ನಿದ್ದೆಗೆ ಜಾರಿದ್ದರು. ಈ ವೇಳೆ ಅನುಮಾನಸ್ಪದ ವ್ಯಕ್ತಿಯೊಬ್ಬ ಸುತ್ತ ಮುತ್ತ ನೋಡುತ್ತಾ ತಾಯಿಯ ಪಕ್ಕ ಮಲಗಿದ್ದ ಮಗುವನ್ನು ಕದ್ದು ಓಡಿ ಹೋಗಿದ್ದಾನೆ.
ಘಟನೆಯ ವೀಡಿಯೋ ರೈಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗಿದೆ. ಪೊಲೀಸರು ಮಗುವಿನ ಪತ್ತೆಗೆ ತಂಡವನ್ನು ರಚಿಸಿ, ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.













