Home News ಸದ್ದಿಲ್ಲದೆ ಹೊಸದಾಗಿ 4G ಡೇಟಾ ವೋಚರ್ ಪರಿಚಯಿಸಿದ ಏರ್ಟೆಲ್ | ಹೀಗಿದೆ ನೋಡಿ ಅಗ್ಗದ ಪ್ಲಾನ್

ಸದ್ದಿಲ್ಲದೆ ಹೊಸದಾಗಿ 4G ಡೇಟಾ ವೋಚರ್ ಪರಿಚಯಿಸಿದ ಏರ್ಟೆಲ್ | ಹೀಗಿದೆ ನೋಡಿ ಅಗ್ಗದ ಪ್ಲಾನ್

Hindu neighbor gifts plot of land

Hindu neighbour gifts land to Muslim journalist

ಟೆಕ್ನಾಲಜಿ ಜಗತ್ತಿನಲ್ಲಿ ಅತೀ ಹೆಚ್ಚು ಕೇಳಿಬರುತ್ತಿರುವ ಪದವೆಂದರೆ ಏರ್ಟೆಲ್. ಅತೀ ವೇಗ ಓಡುತ್ತಿರುವ ಈ ನೆಟವರ್ಕ್ ಪ್ರಪಂಚದಲ್ಲಿ ಭಾರಿ ಸಂಚಲನವನ್ನೇ ಮೂಡಿಸುತ್ತಿದೆ. ಏರ್ಟೆಲ್ ಹೊಸ ಹೊಸ ಯೋಜನೆಗಳನ್ನು ರೂಪಿಸುವುದರ ಮೂಲಕ ಗ್ರಾಹಕರಿಗೆ ಹತ್ತಿರವಾಗುತ್ತಲೇ ಬಂದಿದೆ.

ಸಾಮಾನ್ಯವಾಗಿ ಇಂಟರ್ನೆಟ್ ಬಳಕೆದಾರರು ಕಡಿಮೆ ಬೆಲೆಗೆ ಹೆಚ್ಚು ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಮಾಡುತ್ತಾರೆ. ದುಡ್ಡು ಸೇವ್ ಮಾಡೋದ್ರ ಜೊತೆಗೆ ಒಳ್ಳೆ ಎಂಟರ್ಟೈನ್ಮೆಂಟ್ ಪಡೆಯುತ್ತಾರೆ. ಬಜೆಟ್ ಪ್ರಿಯರಿಗೆಂದೇ ಇದೀಗ ಏರ್ಟೆಲ್ ಟೆಲಿಕಾಂ ಕಂಪನಿಗಳು ಕಡಿಮೆ ಬೆಲೆಗೆ ಆಕರ್ಷಕವಾದ ಪ್ರಿಪೇಯ್ಡ್ ಯೋಜನೆಗಳನ್ನು ಕೂಡ ನೀಡಿದೆ. ಕಡಿಮೆ ವ್ಯಾಲಿಡಿಟಿ ಅಥವಾ ಕಡಿಮೆ ಡೇಟಾದೊಂದಿಗೆ, ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಗಳನ್ನು ಬಯಸುವವರಿಗೆ ಏರ್‌ಟೆಲ್ ಈಗಾಗಲೇ ವಿವಿಧ ಯೋಜನೆಗಳನ್ನು ಪರಿಚಯಿಸಿದೆ. ಇತ್ತೀಚಿಗೆಷ್ಟೆ ನೂತನವಾಗಿ 199ರೂ. ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿರುವ ಏರ್‌ಟೆಲ್, ಇದೀಗ ಸದ್ದಿಲ್ಲದೆ ಹೊಸದಾಗಿ 4G ಡೇಟಾ ವೋಚರ್ ಅನ್ನು ಬಿಡುಗಡೆ ಆಗಿದ್ದು, ಅದುವೇ ಏರ್‌ಟೆಲ್‌ನ 65ರೂ. ಡೇಟಾ ವೋಚರ್ ಆಗಿದೆ.

ಹೌದು, ಏರ್‌ಟೆಲ್‌ ಟೆಲಿಕಾಂ 65ರೂ. ಪ್ಲಾನ್ ಕೇವಲ 4G ಡೇಟಾ ವೋಚರ್ ಆಗಿದ್ದು, ಈ ಯೋಜನೆಯಲ್ಲಿ ಯಾವುದೇ ವ್ಯಾಲಿಡಿಟಿ ಪ್ರಯೋಜನ ಲಭ್ಯವಾಗಲಿದೆ. ಹೆಚ್ಚುವರಿ ಡೇಟಾ ಅಗತ್ಯ ಇರುವ ಗ್ರಾಹಕರಿಗೆ ಈ ಡೇಟಾ ವೋಚರ್ ಪ್ರಯೋಜನ ಎನಿಸಲಿದೆ. ಏರ್‌ಟೆಲ್‌ 65ರೂ. ಯೋಜನೆಯು ನೂತನ ಡೇಟಾ ವೋಚರ್ ಆಗಿದ್ದು, ದೈನಂದಿನ ಡೇಟಾಗಿಂತ ಹೆಚ್ಚುವರಿ ಡೇಟಾ ಅಗತ್ಯ ಇರುವ ಗ್ರಾಹಕರಿಗೆ ಇದು ಸೂಕ್ತ ಎನಿಸುತ್ತದೆ. ಇನ್ನು ಈ ಡೇಟಾ ವೋಚರ್ ಬಳಕೆದಾರರಿಗೆ 4 GB ಡೇಟಾವನ್ನು ಲಭ್ಯ ಮಾಡುತ್ತದೆ. ಇನ್ನು ಈ ವೋಚರ್ ಮೂಲ ಯೋಜನೆಯ ವ್ಯಾಲಿಡಿಟಿಯನ್ನು ಪಡೆದಿದೆ.

ಏರ್‌ಟೆಲ್‌ 19ರೂ. ಡೇಟಾ ವೋಚರ್:
ಏರ್‌ಟೆಲ್‌ 19ರೂ. ಯೋಜನೆಯು ಆರಂಭಿಕ 4G ಡೇಟಾ ವೋಚರ್ ಆಗಿದೆ. ದೈನಂದಿನ ಡೇಟಾ ಗಿಂತ ಹೆಚ್ಚುವರಿ ಡೇಟಾ ಅಗತ್ಯ ಇರುವ ಗ್ರಾಹಕರಿಗೆ ಇದು ಸೂಕ್ತ ಎನಿಸುತ್ತದೆ. ಇನ್ನು ಈ ಡೇಟಾ ವೋಚರ್ ಬಳಕೆದಾರರಿಗೆ 1GB ಡೇಟಾವನ್ನು ನೀಡುತ್ತದೆ ಮತ್ತು ಅದರ ವ್ಯಾಲಿಡಿಟಿಯು ಕೇವಲ ಒಂದು ದಿನ ಮಾತ್ರ. ಆದ್ದರಿಂದ ನೀವು ಒಂದು ದಿನದಲ್ಲಿ ಸಂಪೂರ್ಣ 1GB ಡೇಟಾವನ್ನು ಬಳಸದಿದ್ದರೆ, ಅದರ ಅವಧಿ ಮುಗಿಯುತ್ತದೆ. ಜಿಯೋ ಟೆಲಿಕಾಂನ ಆರಂಭಿಕ ಡೇಟಾ ವೋಚರ್‌ 15ರೂ. ಆಗಿದ್ದು, 1GB ಡೇಟಾ ಪ್ರಯೋಜನ ನೀಡುತ್ತದೆ. ಜಿಯೋ ಟೆಲಿಕಾಂನ ಡೇಟಾ ವೋಚರ್‌ಗೆ ಹೋಲಿಸಿದರೆ, ಏರ್‌ಟೆಲ್‌ ದುಬಾರಿ ಎನಿಸುತ್ತದೆ.

ಏರ್‌ಟೆಲ್‌ ಟೆಲಿಕಾಂನ 449ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್‌ ಇಲ್ಲದೇ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 2.5 GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್ ವಿಡಿಯೊ ME ಲಭ್ಯ. ಹಾಗೂ ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.

ಏರ್‌ಟೆಲ್‌ ಟೆಲಿಕಾಂನ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್‌ ಇಲ್ಲದೇ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಲಭ್ಯ. ಹಾಗೂ ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.

ಏರ್‌ಟೆಲ್‌ನ ಜನಪ್ರಿಯ ಪ್ರೀಪೇಡ್‌ ಪ್ಯಾನ್‌ಗಳಲ್ಲಿ ಒಂದಾಗಿರುವ 699ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್‌ ಇಲ್ಲದೇ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್ ಸದಸ್ಯತ್ವ, ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.