Home latest ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದ್ದಲ್ಲಿ ನಿರ್ಲಕ್ಷ್ಯ ವಹಿಸಬೇಡಿ: ಎಡಿಜಿಪಿ ಅಲೋಕ್ ಕುಮಾರ್ ಖಡಕ್‌ ಎಚ್ಚರಿಕೆ

ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದ್ದಲ್ಲಿ ನಿರ್ಲಕ್ಷ್ಯ ವಹಿಸಬೇಡಿ: ಎಡಿಜಿಪಿ ಅಲೋಕ್ ಕುಮಾರ್ ಖಡಕ್‌ ಎಚ್ಚರಿಕೆ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು : ಒಂದೊಮ್ಮೆ ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದ್ದಲ್ಲಿ ನಿರ್ಲಕ್ಷ್ಯ ವಹಿಸಬೇಡಿ. ಬಾಂಬ್ ಬ್ಲಾಸ್ಟ್ ಪ್ರಕರಣ ನಿಮಗೊಂದು ನಿದರ್ಶನ ಆಗಲಿ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶಾರಿಕ್ ಬಳಿ ಇದ್ದಿದ್ದು ಪ್ರೇಮ್‌ರಾಜ್ ಎನ್ನುವವರ ಆಧಾರ್‌ಕಾರ್ಡ್. ಪ್ರೇಮ್‌ರಾಜ್ ತನ್ನ ಆಧಾರ್‌ಕಾರ್ಡ್ ಕಳೆದುಕೊಂಡಿದ್ದರು. ಈ ಪ್ರಕರಣದಲ್ಲಿ ಪ್ರೇಮ್‌ರಾಜ್ ಆರೋಪಿ ಆಗುವ ಸಾಧ್ಯತೆ ಇತ್ತು. ಆದರೆ ಎಡಿಜಿಪಿ ಅಲೋಕ್ ಕುಮಾರ್ ಪ್ರೇಮ್‌ರಾಜ್ ಜತೆ ಮಾತುಕತೆ ನಡೆಸಿದ್ದರು. ಹೀಗಾಗಿ ಸತ್ಯ ವಿಚಾರ ಬಹಿರಂಗೊಂಡ ಹಿನ್ನಲೆ ಯಾವುದೇ ಕೇಸ್ ಆಗಿಲ್ಲ ಎಂದಿದ್ದಾರೆ.

ಒಂದೊಮ್ಮೆ ಸಮರ್ಪಕ ಮಾಹಿತಿ ಸಿಗದೇ ಇದ್ದಿದ್ದಲ್ಲಿ ಪ್ರೇಮ್ ರಾಜ್ ಅವರು ಸಮರ್ಪಕ ಮಾಹಿತಿ ನೀಡದೇ ಇದ್ದಿದ್ದರೇ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇತ್ತು ಎಂದಿದ್ದಾರೆ. ಹೀಗಾಗಿ ಆಧಾರ್‌ಕಾರ್ಡ್ ಕಳೆದುಕೊಂಡವರಿಗೆ ಎಡಿಜಿಪಿ ಅಲೋಕ್ ಮನವಿ ಮಾಡಿದ್ದಾರೆ. ಆಧಾರ್ ಕಳೆದುಕೊಂಡವರು ಒಂದು ಕೇಸ್ ದಾಖಲಿಸಿ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.