Home News Bantwala: ಕಾರು ಡಿಕ್ಕಿಯಾಗಿ ಪಾದಚಾರಿ ಯುವತಿ ಮೃತ್ಯು! ಗಾಂಜಾ ನಶೆಯಿಂದ ಅಪಘಾತ?

Bantwala: ಕಾರು ಡಿಕ್ಕಿಯಾಗಿ ಪಾದಚಾರಿ ಯುವತಿ ಮೃತ್ಯು! ಗಾಂಜಾ ನಶೆಯಿಂದ ಅಪಘಾತ?

Bantwala

Hindu neighbor gifts plot of land

Hindu neighbour gifts land to Muslim journalist

Bantwala: ಪಾದಚಾರಿ ಯುವತಿಯೋರ್ವಳಿಗೆ ಕಾರು ಡಿಕ್ಕಿ ಹೊಡದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿಯೋರ್ವಳು ಮಧ್ಯರಾತ್ರಿ ವೇಳೆ ಮೃತಪಟ್ಟ ಘಟನೆಯೊಂದು ನಡೆದಿದೆ.

ಬಿಸಿರೋಡಿನ ಕೈಕಂಬ ಸಮೀಪದ ಪಚ್ಚನಡ್ಕ ಎಂಬಲ್ಲಿ ಈ ಅಪಘಾತ ನಡೆದಿತ್ತು. ರಾತ್ರಿ ಎಂಟು ಗಂಟೆಗೆ ಈ ಅಪಘಾತ ನಡೆದಿತ್ತು. ಚೈತ್ರ (22) ಮೃತಪಟ್ಟ ಯುವತಿ.

ಮೃತ ಚೈತ್ರ ಅವರು ಸಂಜೆ ಕೆಲಸದಿಂದ ಬಸ್‌ನಿಂದ ಇಳಿದು ತಾಯಿ ಜೊತೆ ಮನೆಯ ಕಡೆ ತೆರಳುತ್ತಿದ್ದ ಸಂದರ್ಭ ಈ ಅಪಘಾತ ಸಂಭವಿಸಿದೆ. ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಈಕೆ ಸ್ನೇಹಿತೆಯೋರ್ವಳ ರೋಸ್‌ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಾರಣಕ್ಕಾಗಿ ಕೆಲಸಕ್ಕೆ ರಜೆ ಪಡೆದು ಸಂಜೆ ವೇಳೆ ಮನೆಯಿಂದ ತಾಯಿ ಜೊತೆ ನಡೆದುಕೊಂಡು ಹೋಗುತ್ತಿದ್ದಳು ಎಂದು ಸಂಬಂಧಿಕರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನು ಓದಿ: Kalladka Prabhakar Bhat: ಕಲ್ಲಡ್ಕ ಪ್ರಭಾಕರ್ ಭಟ್‌ರನ್ನು ಬಂಧಿಸಲ್ಲವೆಂದ ಸರ್ಕಾರ!!

ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದಿದ್ದ ಸ್ವಿಫ್ಟ್‌ ಕಾರು ಚೈತ್ರಗೆ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡಿದ್ದು, ಟ್ರಾಫಿಕ್‌ ಎ.ಎಸ್‌.ಐ ಸುರೇಶ್‌ ಪಡಾರ್‌ ಹಾಗೂ ಹೆಚ್‌.ಸಿ ರಮೇಶ್‌ ಖಾಸಗಿ ವಾಹನದಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಿದ್ದರು.

ಚಿಂತಾಜನಕ ಸ್ಥಿತಿಯಲ್ಲಿದ್ದ ಈಕೆಯನ್ನು ತುರ್ತು ನಿಗಾ ಘಟಕದಲ್ಲಿ ಇಡಲಾಗಿತ್ತು. ಆದರೆ ಮಧ್ಯರಾತ್ರಿ 1 ಗಂಟೆಗೆ ಈಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಕಾರು ಚಾಲಕ ಹಾಗೂ ಆತನ ಜೊತೆಯಿದ್‌ ಮೂವರು ಸಹ ಪ್ರಯಾಣಿಕರು ಪರಾರಿಯಾಗಿದ್ದು, ಮಲ್ಲೂರು ಕಡೆ ಹೋಗುವವರು ಎಂದು ವರದಿಯಾಗಿದೆ. ಮೆಲ್ಕಾರ್‌ ಟ್ರಾಫಿಕ್‌ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಚೈತ್ರಾಳಿಗೆ ನಿಶ್ಚಿತಾರ್ಥ ನಡೆದು ಮಾ.3 ರಂದು ಕೊಡ್ಯಡ್ಕದ ಯುವಕನ ಜೊತೆ ಮದುವೆ ನಿಗದಿಯಾಗಿತ್ತು. ಮದುವೆ ಮನೆ ಸೇರಬೇಕಾಗಿದ್ದ ಯುವತಿ ಇದೀಗ ಮಸಣ ಸೇರಿದ್ದಾಳೆ. ಖ್ಯಾತ ಮೇಕಪ್‌ ಆರ್ಟಿಸ್ಟ್‌ ದಿ.ಭಾಸ್ಕರ್‌ ಆಚಾರ್ಯ ಅವರ ಮಗಳು ಚೈತ್ರ. ಈಕೆ ಮಂಗಳೂರಿನ ಪ್ರತಿಷ್ಠಿ ಬಟ್ಟೆ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ನಿನ್ನೆ ರಜೆ ಪಡೆದುಕೊಂಡಿದ್ದು, ಸ್ನೇಹಿತೆಯ ರೋಸ್‌ ಕಾರ್ಯಕ್ರಮದಲ್ಲಿ ಭಾಗವಹಿಸುವ ಉದ್ದೇಶದಿಂದ ತಾಯಿ ಜೊತೆ ಅವಳ ಮನೆಗೆ ಹೋಗುವಾಗ ಈ ಅಪಘಾತ ಸಂಭವಿಸಿದೆ.

ಗಾಂಜಾ ಸೇವನೆ ಮಾಡಿ ಕಾರು ಓಡಿಸುತ್ತಿದ್ದುದೇ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಈ ಕುರಿತು ಪೊಲೀಸರಿಗೆ ಸಂಬಂಧಿಕರು ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ.