Home News Aadhaar Card: ಆಧಾರ್ ಕಾರ್ಡ್ ಕಳೆದು ಹೋದ್ರೆ ಟೆನ್ಶನ್ ಬಿಡಿ – ಜಸ್ಟ್ ಹೀಗ್...

Aadhaar Card: ಆಧಾರ್ ಕಾರ್ಡ್ ಕಳೆದು ಹೋದ್ರೆ ಟೆನ್ಶನ್ ಬಿಡಿ – ಜಸ್ಟ್ ಹೀಗ್ ಮಾಡಿ ಹೊಸದು ಪಡೆಯಿರಿ !!

Aadhaar Card

Hindu neighbor gifts plot of land

Hindu neighbour gifts land to Muslim journalist

Aadhaar Card: ಭಾರತದಲ್ಲಿ ಆಧಾರ್ ಕಾರ್ಡ್ (Aadhaar Card) ಪ್ರಮುಖ ಗುರುತು ದಾಖಲೆಯಾಗಿದ್ದು, ಕೇಂದ್ರ ಸರ್ಕಾರದಿಂದ 12 ಅಂಕಿಗಳ ವಿಶಿಷ್ಟ ಗುರತಿನ ಸಂಖ್ಯೆಯ, ವಿಶಿಷ್ಟ ಗುರುತಿನ ಪ್ರಾಧಿಕಾರ ದೊಂದಿಗೆ (ಯುಐಡಿಎಐ) ಭಾರತದ ಜನರಿಗೆ ನೀಡುವ ದಾಖಲೆಯಾಗಿದೆ.

ಭಾರತೀಯರಿಗೆ ಆಧಾರ್ ಕಾರ್ಡ್ ಪ್ರತಿ ಕೆಲಸಕ್ಕೂ ತುಂಬಾ ಅಗತ್ಯವಾದ ದಾಖಲೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಆಧಾರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆಧಾರ್ ಕಳೆದುಹೋದರೆ ಭಯವಾಗುವುದು ಸಹಜವೇ. ಆದ್ರೆ ನಿಮ್ಮ ಆಧಾರ್ ಕಳೆದು ಹೋಗಿದ್ದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ ಆಧಾರ್ ಅನ್ನು ಸುಲಭವಾಗಿ ಪಡೆಯಬಹುದು.

ಯುಐಡಿಎಐಯ ಟೋಲ್ ಫ್ರೀ ಸಂಖ್ಯೆಗೆ ಸಂಖ್ಯೆ 1947 ಗೆ ಕರೆ ಮಾಡುವ ಮೂಲಕ ಈ ಬಗ್ಗೆ ದೂರು ನೀಡಿ. ಇದರಿಂದ ನಿಮ್ಮ ಆಧಾರ್ ಅನ್ನು ಬೇರೆಯವರು ದುರ್ಬಳಕೆ ಮಾಡಿಕೊಳ್ಳದಂತೆ ತಡೆಯಬಹುದು.

ಟೋಲ್ ಫ್ರೀ ಸಂಖ್ಯೆಗೆ ದೂರು ನೀಡಿದ ನಂತರ ನೀವು ಎಲ್ಲಾ ಅಧಿಕೃತ ಉದ್ದೇಶಗಳಿಗಾಗಿ ಬಳಸಬಹುದಾದ ನಿಮ್ಮ ಆಧಾರ್ ಕಾರ್ಡ್‌ನ PVC ನಕಲನ್ನು ಆರ್ಡರ್ ಮಾಡಲು ಸರಳ ಹಂತಗಳನ್ನು ಅನುಸರಿಸಿ. ನೀವು ಹೇಗೆ ಅರ್ಜಿ ಸಲ್ಲಿಸಬಹುದು ಎಂಬುದು ಇಲ್ಲಿದೆ ಮಾಹಿತಿ.

ಆಧಾರ್ ಕಳೆದುಹೋದ ಸಂದರ್ಭದಲ್ಲಿ, ಮೊದಲು https://uidai.gov.in/ ಗೆ ಭೇಟಿ ನೀಡಿ. ಇಲ್ಲಿ ನನ್ನ ಆಧಾರ್ (my aadhaar) ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ನಂತರದ ಪರದೆಯ ಮೇಲೆ ಕಾಣಿಸಿಕೊಳ್ಳುವ ಆರ್ಡರ್ ಆಧಾರ್ ಪಿವಿಸಿ ಕಾರ್ಡ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಆರ್ಡರ್ ಮಾಡಿ ಎಂಬ ಆಯ್ಕೆಯನ್ನು ಆರಿಸಿ. ನಿಗದಿತ ಜಾಗದಲ್ಲಿ ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾವನ್ನು ನಮೂದಿಸಿ. ಮುಂದುವರೆಯಿರಿ ಆಯ್ಕೆಯನ್ನು ಆರಿಸಿ. ಮುಂದಿನ ಪರದೆಯಲ್ಲಿ ನಿಮ್ಮ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಬಳಿಕ ಸೇವ್ ಮಾಡಿ. ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಓ‌ಟಿ‌ಪಿ ಕಳುಹಿಸಲಾಗುತ್ತದೆ, ಅದನ್ನು ನಿಗದಿತ ಜಾಗದಲ್ಲಿ ನಮೂದಿಸಿ. ಮೇಲಿನ ಹಂತಗಳು ಪೂರ್ಣಗೊಂಡ ನಂತರ ಹೊಸ ಪಿವಿಸಿ ಆಧಾರ್ ಕಾರ್ಡ್ ಗಾಗಿ 50 ರೂ. ಶುಲ್ಕವನ್ನು ಪಾವತಿಸಿ. ನೀವು ಈ PVC ಆಧಾರ್ ಕಾರ್ಡ್ ಅನ್ನು 15 ದಿನಗಳಲ್ಲಿ ಪಡೆಯುತ್ತೀರಿ. ಪಾವತಿ ಪೂರ್ಣಗೊಂಡ ನಂತರ ದೃಢೀಕರಣ ಸಂದೇಶ ಕಾಣಿಸಿಕೊಳ್ಳುತ್ತದೆ. ಇದರೊಂದಿಗೆ ನೀವು ಒಂದು ಐಡಿ ಸಂಖ್ಯೆಯನ್ನು ಪಡೆಯುತ್ತೀರಿ. ಈ ಐಡಿ ಸಂಖ್ಯೆಯನ್ನು ಬಳಸಿ ನಿಮ್ಮ ಆಧಾರ್ ಸ್ಥಿತಿಯನ್ನು ಪರಿಶೀಲಿಸಬಹುದು.

 

ಇದನ್ನು ಓದಿ: BHEL ಸೂಪರ್ವೈಸರ್ ಟ್ರೈನಿ ಹುದ್ದೆಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸಲು ನವೆಂಬರ್ 25 ಕಡೆಯ ದಿನ! ಇಂದೇ ಅರ್ಜಿ ಸಲ್ಲಿಸಿ!