BHEL ಸೂಪರ್ವೈಸರ್ ಟ್ರೈನಿ ಹುದ್ದೆಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸಲು ನವೆಂಬರ್ 25 ಕಡೆಯ ದಿನ! ಇಂದೇ ಅರ್ಜಿ ಸಲ್ಲಿಸಿ!!

Job news BHEL supervisor trainee recruitment 2023 latest updates

BHEL Recruitment 2023: ಭಾರತ್ ಹೆವಿ ಇಲೆಕ್ಟ್ರಿಕಲ್ ಲಿಮಿಟೆಡ್‌ (BHEL) ನಲ್ಲಿ ಖಾಲಿ ಮೆಕ್ಯಾನಿಕಲ್ / ಸಿವಿಲ್ / ಹೆಚ್‌ಆರ್‌ ವಿಭಾಗದ ಸೂಪರ್‌ವೈಸರ್‌ ಹುದ್ದೆಗಳನ್ನು ತರಬೇತಿದಾರರಾಗಿ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನ ಮಾಡಲಾಗಿದ್ದು, ಆಸಕ್ತರು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ನೇಮಕಾತಿ ಪ್ರಾಧಿಕಾರ : ಭಾರತ್ ಹೆವಿ ಇಲೆಕ್ಟ್ರಿಕಲ್ ಲಿಮಿಟೆಡ್‌
ಹುದ್ದೆಗಳ ಹೆಸರು : ಸೂಪರ್‌ವೈಸರ್ ಟ್ರೈನಿ
ಹುದ್ದೆಗಳ ಸಂಖ್ಯೆ : 75

ಸೂಪರ್‌ವೈಸರ್ ಟ್ರೈನಿ ಹುದ್ದೆಗೆ ಅರ್ಜಿ ಸಲ್ಲಿಸಲು 25-10-2023 ಆರಂಭಿಕ ದಿನವಾಗಿದ್ದು, 25-11-2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಭಾರತ್ ಹೆವಿ ಇಲೆಕ್ಟ್ರಿಕಲ್ಸ್‌ ಲಿಮಿಟೆಡ್ನ ಅಧಿಕೃತ ವೆಬ್‌ಸೈಟ್‌ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
https://bhel.com/
BHEL Recruitment 2023 Notification

ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ:
# ಬಿಹೆಚ್‌ಇಎಲ್‌ ಕರಿಯರ್ ವೆಬ್‌ಪೇಜ್‌ಗೆ ಭೇಟಿ ನೀಡಿ.
#ಓಪನ್ ಆದ ಪೇಜ್‌ನಲ್ಲಿ ‘Apply Online >> Candidate Login’ ಎಂಬಲ್ಲಿ ಕ್ಲಿಕ್ ಮಾಡಿಕೊಳ್ಳಿ.
# ಹೆಸರು, ಮೊಬೈಲ್ ನಂಬರ್, ಇ-ಮೇಲ್‌ ವಿಳಾಸ ನೀಡಿ ರಿಜಿಸ್ಟ್ರೇಷನ್‌ ಪಡೆದು ಮತ್ತೆ ಲಾಗಿನ್‌ ಆಗುವ ಮೂಲಕ ವಿದ್ಯಾರ್ಹತೆ, ಕೇಳಲಾದ ಇತರೆ ಮಾಹಿತಿ ನೀಡಿ ಅರ್ಜಿ ಸಲ್ಲಿಸಬಹುದು.

ಅರ್ಹತಾ ಮಾನದಂಡಗಳು:
* ವಿದ್ಯಾರ್ಹತೆ ಗಮನಿಸಿದರೆ, ಈ ಹುದ್ದೆಗಳಿಗೆ ಅನುಗುಣವಾಗಿ ಮೆಕ್ಯಾನಿಕಲ್ ಇಂಜಿನಿಯರಿಂಗ್ / ಸಿವಿಲ್ ಇಂಜಿನಿಯರಿಂಗ್ / ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಷನ್‌ನಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
* ಕನಿಷ್ಠ ಶೇಕಡ.65 ಅಂಕಗಳೊಂದಿಗೆ ಉತ್ತೀರ್ಣ ರಾಗಿರಬೇಕು. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳು ಕನಿಷ್ಠ ಶೇಕಡ.60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
* ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಗರಿಷ್ಠ ವಯೋಮಿತಿ 27 ವರ್ಷ ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗುತ್ತವೆ.

ಅರ್ಜಿ ಶುಲ್ಕ :
ಸಾಮಾನ್ಯ / ಆರ್ಥಿಕವಾಗಿ ಹಿಂದುಳಿದ / ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ: ರೂ.795 ಆಗಿದ್ದು,ಎಸ್‌ಸಿ / ಎಸ್‌ಟಿ / ಮಾಜಿ ಸೈನಿಕ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ:ರೂ.295 ಆಗಿರಲಿದೆ. ಅರ್ಜಿ ಶುಲ್ಕವನ್ನು ಇಂಟರ್‌ನೆಟ್‌ ಬ್ಯಾಂಕಿಂಗ್, ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಮೂಲಕ ಪಾವತಿ ಮಾಡಬಹುದು.

Leave A Reply

Your email address will not be published.