Home latest 3 ವರ್ಷದ ಕಂದನನ್ನು ಕತ್ತು ಹಿಸುಕಿ ಕೊಂದಳಾ ಕ್ರೂರಿ ತಾಯಿ | ಪ್ರಿಯಕರನ ಜೊತೆ ಸೇರಿ...

3 ವರ್ಷದ ಕಂದನನ್ನು ಕತ್ತು ಹಿಸುಕಿ ಕೊಂದಳಾ ಕ್ರೂರಿ ತಾಯಿ | ಪ್ರಿಯಕರನ ಜೊತೆ ಸೇರಿ ಮಾಡಿದಳು ಘೋರ ಕೃತ್ಯ

Hindu neighbor gifts plot of land

Hindu neighbour gifts land to Muslim journalist

ತಾಯಿ ಎಂದರೆ ಅದೊಂದು ಮಮತೆಯ ಆಗರ. ಆಕೆಯ ಪ್ರೀತಿಗೆ ಯಾವುದೂ ಸಮವಲ್ಲ. ತನಗೇನಾದರೂ ಪರವಾಗಿಲ್ಲ, ತನ್ನ ಮಕ್ಕಳಿಗೆ ಏನೂ ತೊಂದರೆಯಾಗಬಾರದು ಎಂದು ಮರುಗುವ ಜೀವ ಅದು. ಕೆಟ್ಟ ಮಕ್ಕಳಿರಬಹದು, ಆದರೆ ಕೆಟ್ಟ ತಾಯಿ ಇಲ್ಲ ಎಂಬ ಆಡುನುಡಿಯೇ ಇದೆ. ಆದರೆ ಇದಕ್ಕೆ ವಿರುದ್ಧವೆಂಬಂತೆ ಇಲ್ಲೊಬ್ಬಳು ಕ್ರೂರಿ ತಾಯಿ ಮಾಡಿದ ಕೆಲಸವೇನ್ನು ಕೇಳಿದ್ರೆ ನಿಮಗೂ ಸಿಟ್ಟು ಕುದಿಯುತ್ತದೆ. ಈಕೆ ಮಾಡಿದ್ದೇನು ಗೊತ್ತಾ?

ಪಾಪಿ ತಾಯಿಯೊಬ್ಬಳು ತನ್ನ ಮೂರು ವರ್ಷದ ಮಗಳನ್ನು ಕೊಂದು ಆಕೆಯ ಶವವನ್ನು ಚಲಿಸುತ್ತಿರುವ ರೈಲಿನಿಂದ ಎಸೆದ ಘಟನೆ ರಾಜಸ್ಥಾನ ದ ಶ್ರೀಗಂಗಾನಗರ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಗಳನ್ನು ಸುನೀತಾ ಮತ್ತು ಸನ್ನಿ ಅಲಿಯಾಸ್ ಮಾಲ್ಟಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಇದೀಗ ತಾಯಿ ಸುನಿತಾ ಹಾಗೂ ಸನ್ನಿ ಅಲಿಯಾಸ್ ಮಲ್ತಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕ್ರೂರಿ ತಾಯಿ ತನ್ನ ಪ್ರಿಯಕರನ ಜೊತೆ ಸೇರಿ ಈ ಕೃತ್ಯ ಎಸಗಿದ್ದಾಳೆ.

ಸೋಮವಾರ ಮತ್ತು ಮಂಗಳವಾರದ ಮಧ್ಯರಾತ್ರಿ ಮಹಿಳೆ ತನ್ನ ಮಗಳು ಕಿರಣ್‌ನನ್ನು ಕತ್ತು ಹಿಸುಕಿ ಸನ್ನಿ ಸಹಾಯದಿಂದ ಬೆಡ್‌ಶೀಟ್‌ನಲ್ಲಿ ದೇಹವನ್ನು ಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ದಂಪತಿ ಶ್ರೀಗಂಗಾನಗರ ರೈಲು ನಿಲ್ದಾಣಕ್ಕೆ ತೆರಳಿ ಬೆಳಗ್ಗೆ 6:10ಕ್ಕೆ ರೈಲು ಹತ್ತಿದ್ದಾರೆ. ರೈಲು ಫತುಹಿ ರೈಲ್ವೆ ನಿಲ್ದಾಣದ ಮೊದಲು ಕಾಲುವೆಯ ಮೇಲಿರುವ ಸೇತುವೆಯನ್ನು ತಲುಪಿದಾಗ, ಕಾಲುವೆಯಲ್ಲಿ ಎಸೆಯುವ ಪ್ರಯತ್ನದಲ್ಲಿ ಅವರು ಶವವನ್ನು ಚಲಿಸುವ ರೈಲಿನಿಂದ ಇಳಿಸಿದರು, ಆದರೆ ಅದು ರೈಲ್ವೆ ಹಳಿಗಳ ಬಳಿ ಬಿದ್ದಿದೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಶ್ರೀಗಂಗಾನಗರ ಎಸ್‍ಪಿ ಆನಂದ್ ಶರ್ಮಾ ತಿಳಿಸಿದ್ದಾರೆ.

ಐದು ಮಕ್ಕಳನ್ನು ಹೊಂದಿರುವ ಸುನೀತಾಳು ಸನ್ನಿ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳೊಂದಿಗೆ ಶಾಸ್ತ್ರಿ ನಗರದಲ್ಲಿ ವಾಸಿಸುತ್ತಿದ್ದು, . ಆಕೆಯ ಮೂವರು ಮಕ್ಕಳು ಪತಿಯೊಂದಿಗೆ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಗುರುತು ಪತ್ತೆ ಹಚ್ಚಿದ ಪೊಲೀಸರು ಸುನೀತಾಳನ್ನು ಪತ್ತೆ ಹಚ್ಚಿ ವಿಚಾರಣೆಗೆ ಒಳಪಡಿಸಿದರು. ವಿಚಾರಣೆ ವೇಳೆ ಆಕೆ ತನ್ನ ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದು, ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.