Home Interesting ಈ ಪಾರ್ಕಿನ ಪ್ರತೀ ಮರದಡಿ ನಡೆಯುತ್ತೆ ಜೋಡಿಗಳ ರೊಮ್ಯಾನ್ಸ್! ಕಣ್ಣು ಹಾಯ್ಸಿದಷ್ಟೂ ಕಪಲ್ಸೇ!!!

ಈ ಪಾರ್ಕಿನ ಪ್ರತೀ ಮರದಡಿ ನಡೆಯುತ್ತೆ ಜೋಡಿಗಳ ರೊಮ್ಯಾನ್ಸ್! ಕಣ್ಣು ಹಾಯ್ಸಿದಷ್ಟೂ ಕಪಲ್ಸೇ!!!

Hindu neighbor gifts plot of land

Hindu neighbour gifts land to Muslim journalist

ಅದೊಂದು ಪಾರ್ಕ್ ನಲ್ಲಿ ಗಿಡ ಮರಗಳಿಗಿಂತ ಹೆಚ್ಚು ಕಾಣೋದು ಅಲ್ಲಲ್ಲಿ ನಿಂತ ಎರಡು ಮನುಷ್ಯಾಕೃತಿಗಳು! ಅದೂ ಕೂಡ ಗಂಡು ಹೆಣ್ಣಿನ ಜೋಡಿಗಳು. ಒಂದೊಂದು ಮರದ ಬುಡದಲ್ಲಿ ನಿಂತು, ಮುಸುಕಾಕಿಕೊಂಡು ತಮ್ಮದೇ ಲೋಕದಲ್ಲಿರುವ ಇವರಿಗೆ ಇತ್ತ ಸಮಾಜದ ಪರಿಜ್ಞಾನವೇ ಇಲ್ಲ! ನಾಚಿಕೆ ಬಿಟ್ಟು ಇವರು ಮಾಡೋ ಕೆಲಸ ಕಂಡ್ರೆ ನೀವೂ ದಂಗಾಗಿ ಹೋಗ್ತೀರಾ!

ಸೋಷಿಯಲ್ ಮೀಡಿಯಾಗಳಲ್ಲಿ ಇಂದು ಪ್ರತಿದಿನ ಲಕ್ಷಾಂತರ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತದೆ. ಇವುಗಳಲ್ಲಿ ನಾನಾ ರೀತಿಯ ವಿಡಿಯೋಗಳಿದ್ದು, ಕೆಲವು ಮಾತ್ರ ಜನರ ಗಮನಸೆಳೆಯುತ್ತವೆ. ಇನ್ನು ಕೆಲವು ಫನ್ನಿಯಾಗಿದ್ದರೆ, ಮತ್ತೆ ಕೆಲವು ಭಾವನಾತ್ಮಕವಾಗಿರುತ್ತವೆ. ಆದರೆ ಕೆಲವು ವಿಡಿಯೋಗೂ ಊಹೆಗೂ ನಿಲುಕದಂತೆ ಇರುತ್ತವೆ. ಅವು ಜನರನ್ನು ಯೋಚನೆಗೆ ದೂಡುತ್ತವೆ. ಅಂತಹುದೇ ವಿಡಿಯೋ ಇದೀಗ ವೈರಲ್‌ ಆಗಿದ್ದು, ಎಲ್ಲರಿಗೂ ಆಶ್ಚರ್ಯ ಉಂಟು ಮಾಡುತ್ತಿದೆ.

ಹೌದು, ಇಲ್ಲಿ ಪ್ರತಿ ಮರದ ಹಿಂದೆ,ಮುಂದೆಲ್ಲ ಕಪಲ್ಸ್ ಗಳೇ ಕಪಲ್ಸ್ ಗಳು. ಎಲ್ಲಿ ನೋಡಿದರಲ್ಲಿ, ಕಣ್ಣು ಹಾಯಿಸಿದೆಡೆಯಲ್ಲೆಲ್ಲ ನಿಂತು ರೋಮ್ಯಾನ್ಸ್‌ ಮಾಡುತ್ತಿರುತ್ತಾರೆ. ಯಾರು ಬಂದ್ರು, ಯಾರು ಹೋದ್ರು ಅನ್ನೋ ಪರಿಜ್ಞಾನ ಕೂಡ ಇವರಲಿಲ್ಲ. ತಮ್ಮದೇ ಅಮಲಿನಲ್ಲಿ ಮುಳುಗಿಬಿಟ್ಟಿದ್ದಾರೆ. ಆದರೆ ಈ ಜಾಗ ಯಾವುದು, ಎಲ್ಲಿಯದ್ದು, ಯಾರು ಇವರೆಲ್ಲ ಅನ್ನೋದು ಮಾತ್ರ ತಿಳಿಯುವುದಿಲ್ಲ.

ಈ ವೈರಲ್ ವಿಡಿಯೋದಲ್ಲಿ, ಕೆಲವು ಜನರು ಈ ಸ್ಥಳಕ್ಕೆ ಭೇಟಿ ನೀಡಲು ಹೋಗಿರುವುದನ್ನು ನೀವು ನೋಡುತ್ತೀರಿ, ಆದರೆ ಅಲ್ಲಿಗೆ ತಲುಪಿದ ನಂತರ ಅವರಿಗೆ ಶಾಕ್‌ ಕಾದಿತ್ತು. ವಾಸ್ತವವಾಗಿ, ಪ್ರತಿ ಮರದ ಹಿಂದೆ ಒಂದೆರಡು ಜೋಡಿ ಅಂಟಿಕೊಂಡಿರುವುದನ್ನ ನೋಡಿದರು. ಪ್ರವಾಸಿಗರ ಹಾವಭಾವ ನೋಡಿದರೆ, ಆ ದೃಶ್ಯವನ್ನು ನೋಡಿ ಬಹಳ ಆಶ್ಚರ್ಯ ಪಡುತ್ತಾರೆ ಎಂದು ಗೊತ್ತಾಗುತ್ತದೆ. ಈ ವಿಡಿಯೋವೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

https://www.instagram.com/reel/CoAIYl4jN7c/?igshid=YmMyMTA2M2Y=

ಗೆಳೆಯ-ಗೆಳತಿಗೆ ಸಂಬಂಧಿಸಿದ ಈ ವಿಡಿಯೋವನ್ನು memes.bks ಹೆಸರಿನ ಖಾತೆಯಿಂದ Instagram ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ವಿಡಿಯೋ ನೋಡಿದವರೆಲ್ಲ ನಾನಾ ರೀತಿಯಲ್ಲಿ ಕಮೆಂಟಿಸುತ್ತಿದ್ದಾರೆ. ಕೆಲವರು ‘ಚಿಪ್ಕೋ ಚಳುವಳಿ ನಡೆಯುತ್ತಿದೆಯೇ?, ಅಪ್ಪಿಕೋ ಚಳುವಳಿ ಏನಾದರೂ ನಡೆಯುತ್ತಿರಬಹುದಾ? ಎಂದು ಪ್ರತಿಕ್ರಿಯಿಸುತ್ತಿದ್ದಾರೆ.