Home Karnataka State Politics Updates ಬಿಜೆಪಿ ನಾಯಕನೊಂದಿಗೆ ಓಡಿಹೋದ ಸಮಾಜವಾದಿ ಪಕ್ಷ ನಾಯಕನ ಮಗಳು! ಏನಿದು ಪಕ್ಷಗಳ ನಡುವಿನ ಪ್ರೇಮಕಹಾನಿ?

ಬಿಜೆಪಿ ನಾಯಕನೊಂದಿಗೆ ಓಡಿಹೋದ ಸಮಾಜವಾದಿ ಪಕ್ಷ ನಾಯಕನ ಮಗಳು! ಏನಿದು ಪಕ್ಷಗಳ ನಡುವಿನ ಪ್ರೇಮಕಹಾನಿ?

Hindu neighbor gifts plot of land

Hindu neighbour gifts land to Muslim journalist

47 ವರ್ಷದ ಬಿಜೆಪಿ ನಾಯಕರೊಬ್ಬರು ಸಮಾಜವಾದಿ ಪಕ್ಷದ ನಾಯಕರೊಬ್ಬರ 26 ವರ್ಷದ ಮಗಳೊಂದಿಗೆ ಪಲಾಯನ ಮಾಡಿರುವ ಘಟನೆ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ವರದಿಯಾಗಿದೆ. ಬಿಜೆಪಿ ನಾಯಕನನ್ನು ಆಶಿಶ್ ಶುಕ್ಲಾ ಎಂದು ಗುರುತಿಸಲಾಗಿದೆ. ಆತನಿಗೆ ಈಗಾಗಲೇ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಅವರಲ್ಲಿ ಮಗನಿಗೆ 21 ವರ್ಷವಾಗಿದ್ದು, ಮಗಳಿಗೆ 7 ವರ್ಷ ವಯಸ್ಸಾಗಿದೆ.

ಮೂಲಗಳ ಪ್ರಕಾರ, ಎಸ್‍ಪಿ ನಾಯಕನ ಮಗಳಿಗೆ ಕುಟುಂಬವು ಅವಳ ಇಚ್ಛೆಗೆ ವಿರುದ್ಧವಾಗಿ ಮದುವೆಯನ್ನು ನಿಗದಿಪಡಿಸಿತ್ತು. ಆದರೆ ಆಕೆ ಶುಕ್ಲಾ ಜೊತೆ ಸಂಬಂಧ ಹೊಂದಿದ್ದಳು. ಈ ಹಿನ್ನೆಲೆಯಲ್ಲಿ ಮದುವೆಯಿಂದ ತಪ್ಪಿಸಿಕೊಳ್ಳಲು ಶುಕ್ಲಾ ಜೊತೆ ಓಡಿಹೋಗಿದ್ದಾಳೆ. ಆಶಿಶ್ ಶುಕ್ಲಾ ಹಾಗೂ ಯುವತಿ ಕಾಣೆಯಾಗಿ ಒಂದು ವಾರ ಕಳೆದಿದೆ. ಈ ಕುರಿತು ಕೊಟ್ವಾಲಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಈಗಾಗಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಕುರಿತು ಬಿಜೆಪಿ ನಾಯಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇನ್ನು ಎದುರಾಳಿ ಪಕ್ಷದ ನಾಯಕನ ಮಗಳೊಂದಿಗೆ ಓಡಿ ಹೋಗಿರುವ ಘಟನೆ ಬೆಳಕಿಗೆ ಬರುತ್ತಿದ್ದ ಬಿಜೆಪಿ ಆತನನ್ನು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಆರೋಪದ ಮೇಲೆ ಉಚ್ಚಾಟಿಸಿದೆ ತಿಳಿದುಬಂದಿದೆ.

ಆಶಿಶ್ ಶುಕ್ಲಾ ಬಿಜಪಿಯ ನಗರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆದರೆ ಅವರು ಪಕ್ಷದ ನೀತಿಗೆ ವಿರುದ್ಧವಾದ ಕೆಲಸ ಮಾಡಿದ್ದಾರೆ. ಈ ನಡವಳಿಕೆಯಿಂದ ಆಶಿಶ್ ಅವರನ್ನು ತಕ್ಷಣೆವೇ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತೆಗೆದುಹಾಕಲಾಗಿದೆ ಮತ್ತು ಅವರ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಶುಕ್ಲಾ ಇನ್ನುಮುಂದೆ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಆಗಿಲ್ಲ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಸಂಪೂರ್ಣ ಅಧಿಕಾರವಿದೆ ಎಂದು ಬಿಜೆಪಿಯ ಹರ್ದೋಯ್ ಜಿಲ್ಲಾ ಮಾಧ್ಯಮ ಉಸ್ತುವಾರಿ ಗಂಗೇಶ್ ಪಾಠಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವಿವಾಹವಾಗಿ ವಯಸ್ಸಿಗೆ ಬಂದ ಮಗನಿದ್ದರು 26 ವರ್ಷದ ಯುವತಿಯನ್ನು ಕರೆದುಕೊಂಡು ಹೋಗಿರುವ ಆಶಿಶ್ ಶುಕ್ಲಾ ವಿರುದ್ಧ ಕ್ರಮ ಕೈಗೊಳ್ಳಬೇಕು. ಆತನನ್ನು ಬಂಧಿಸದಿದ್ದರೆ ನಾವು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತೇವೆ ಎಂದು ಹರ್ದೋಯಿ ನಗರ ಸ್ಥಳೀಯ ಎಸ್​ಪಿ ಮುಖಂಡ ಜೀತೇಂದ್ರ ಶರ್ಮಾ ಎಚ್ಚರಿಕೆ ನೀಡಿದ್ದಾರೆ. ಶುಕ್ಲಾ ವಿವಾಹವಾಗಿ ಇಬ್ಬರು ಮಕ್ಕಳಿದ್ದರೂ ತಮ್ಮ ಪಕ್ಷದ ಮಗಳನ್ನು ಓಡಿಸಿಕೊಂಡು ಹೋಗಿರುವುದಕ್ಕೆ ಎಸ್​ಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಸರಿ ಪಕ್ಷದ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಬೇಟಿ ಬಚಾವೋ ಎಂಬುದು ಬಿಜೆಪಿಯ ಕೇವಲ ಕಣ್ಣೊರೆಸುವ ತಂತ್ರವಷ್ಟೆ ಎಂದು ಎಸ್​ಪಿ ಪಕ್ಷದ ಸ್ಥಳೀಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.