Home latest 16ರ ಬಾಲಕನಿಂದ ಮೂಕ ಪ್ರಾಣಿಯ ಮೇಲೆ ಪೈಶಾಚಿಕ ಕೃತ್ಯ | ಹಸುವಿನ ಮೇಲೆ ಅತ್ಯಾಚಾರ

16ರ ಬಾಲಕನಿಂದ ಮೂಕ ಪ್ರಾಣಿಯ ಮೇಲೆ ಪೈಶಾಚಿಕ ಕೃತ್ಯ | ಹಸುವಿನ ಮೇಲೆ ಅತ್ಯಾಚಾರ

Hindu neighbor gifts plot of land

Hindu neighbour gifts land to Muslim journalist

ಕಾಮುಕ ವ್ಯಕ್ತಿತ್ವದವರು ಹೆಣ್ಣು ಮಕ್ಕಳ ಮೇಲೆ ತಮ್ಮ ಪೌರುಷ ತೋರ್ಪಡಿಸಿ ಲೈಂಗಿಕ ಕಿರುಕುಳ ಪ್ರಕರಣಗಳೂ ಎಗ್ಗಿಲ್ಲದೆ ನಡೆಯುತ್ತಿದೆ. ಈ ನಡುವೆ ಮೂಕ ಪ್ರಾಣಿಗಳ ಮೇಲೆ ಕೂಡ ತಮ್ಮ ಪುರುಷತ್ವದ ಪ್ರದರ್ಶನ ಮಾಡುತ್ತಿರುವ ಪ್ರಕರಣಗಳೂ ಕೂಡ ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿವೆ.ಇದೆ ರೀತಿಯ ಪ್ರಕರಣ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದು, ಬಾಲಕನೊಬ್ಬ ಹಸುವಿನ ಮೇಲೆ ಅತ್ಯಾಚಾರ ಎಸಗಿದ ಹೀನ ಕೃತ್ಯವೊಂದು ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಪುಣೆಯ ಫರ್ಸುಂಗಿಯಲ್ಲಿ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದ್ದು, 16 ವರ್ಷದ ಬಾಲಕ ಹಸುವಿನ ಮೇಲೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಫರ್ಸುಂಗಿ ಗ್ರಾಮದ ಬಾಲಕನೊಬ್ಬ ಬಯಲಿನಲ್ಲಿ ಹಸುವಿನ ಕಾಲುಗಳನ್ನು ಕಟ್ಟಿಹಾಕಿ ಹಸುವಿನ ಜೊತೆ ಅಸಹಜ ಕ್ರಿಯೆ ನಡೆಸುತ್ತಿದ್ದ ಎನ್ನಲಾಗಿದೆ.

ಪುಣೆಯ ಹದಪ್ಸರ್​ ಪೊಲೀಸ್ ಠಾಣೆಯಲ್ಲಿ ಬಾಲಕನ ವಿರುದ್ಧ ಅತ್ಯಾಚಾರ ಪ್ರಕರಣ ಮತ್ತು ಪ್ರಾಣಿ ಹಿಂಸೆ ಪ್ರಕರಣ ದಾಖಲಿಸಿ ಹಸುವಿನ ಮೇಲೆ ಅತ್ಯಾಚಾರವೆಸಗಿದ್ದ 16 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ. ಈ ಅಘಾತಕಾರಿ ಘಟನೆಯಿಂದಾಗಿ ಸಾಮಾನ್ಯ ಜನತೆ ಕಳವಳ ವ್ಯಕ್ತಪಡಿಸಿದ್ದಾರೆ.