

ಭಾರತೀಯ ಟೆಲಿಕಾಂ ವಲಯದ ಕಂಪನಿಗಳು ದಿನೇ ದಿನೇ ಒಂದಕ್ಕೊಂದು ಪೈಪೋಟಿಯನ್ನು ನೀಡುತ್ತಲೇ ಬಂದಿದೆ. ಹೊಸ ಹೊಸ ಆಫರ್’ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯಲು ಪ್ರಯತ್ನ ಮಾಡುತ್ತಲೇ ಇದೆ. ಇದೀಗ ಟೆಲಿಕಾಂ ಗ್ರಾಹಕರು ಹೊಸ ವರ್ಷಕ್ಕೆ ಯಾವ ಕಂಪನಿ ಹೊಸ ಆಫರ್ ನೀಡಿದೆ ಎಂಬ ಕುತೂಹಲದಲ್ಲಿರುವಾಗ, ವೊಡಫೋನ್ ಐಡಿಯಾ ಹೊಸ ರೀಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಹೌದು, ದೇಶದ ಜನಪ್ರಿಯ ಮೂರನೇ ಟೆಲಿಕಾಂ ಕಂಪನಿಯಾಗಿರುವ ವೊಡಫೋನ್ ಐಡಿಯಾ ಗ್ರಾಹಕರಿಗಾಗಿ ಹೊಸ ರೀಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಯಾವ್ಯಾವ ರಿಚಾರ್ಜ್ ಪ್ಲಾನ್’ಗಳಿವೆ ಎಂಬುದನ್ನು ತಿಳಿಯೋಣ ಬನ್ನಿ.
601 ರೂಪಾಯಿ ಪ್ರೀಪೇಯ್ಡ್ ಪ್ಲಾನ್ :- ವೊಡಫೋನ್ ಐಡಿಯಾದ ವಿಐ ಟೆಲಿಕಾಂನ 601 ರೂಪಾಯಿ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಗ್ರಾಹಕರಿಗೆ ಒಂದು ವರ್ಷದವರೆಗೆ ಡಿಸ್ನಿ + ಹಾಟ್‌ಸ್ಟಾರ್ ಉಚಿತ ಚಂದಾದಾರಿಕೆ ಪಡೆಯಬಹುದಾಗಿದೆ. ಇನ್ನು ಈ ರೀಚಾರ್ಜ್ ಪ್ಲಾನ್‌ನಲ್ಲಿ ಅನಿಯಮಿತ ಕರೆಗಳು, ಪ್ರತೀದಿನ 3 ಜಿಬಿ ಡೇಟಾ ಹಾಗೂ 100 ಎಸ್ಎಮ್‌ಎಸ್ ಪ್ರಯೋಜನವನ್ನು ಪಡೆಯಬಹುದಾಗಿದೆ. ಅಲ್ಲದೇ, ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ 28 ದಿನಗಳಲ್ಲಿ ಗ್ರಾಹಕರು ಒಟ್ಟು 84 ಜಿಬಿ ಡೇಟಾ ಸೌಲಭ್ಯವನ್ನು ಪಡೆಯುತ್ತಾರೆ. ಇದರೊಂದಿಗೆ ಹೆಚ್ಚುವರಿಯಾಗಿ 16 ಜಿಬಿ ಡೇಟಾ ಸೌಲಭ್ಯ ಸಹ ಸಿಗಲಿದೆ. ಜೊತೆಗೆ ವಿಐ ಆಯಪ್ಸ್ ಸೇವೆ ಹಾಗೂ ಡೇಟಾ ರೋಲ್ ಓವರ್ ಕೂಡ ಮಾಡುವ ಅವಕಾಶವಿರುತ್ತದೆ.
1,499 ರೂಪಾಯಿ ರೀಚಾರ್ಜ್ ಪ್ಲಾನ್ :- ವೊಡಫೋನ್ ಐಡಿಯಾದ ಈ ಪ್ಲಾನ್ ಮೂಲಕ ಪ್ರತಿದಿನ 1.5 ಜಿಬಿ ಡೇಟಾ ಪ್ರಯೋಜನ ನಿಮಗೆ ಸಿಗಲಿದೆ. ಇದರೊಂದಿಗೆ ಯಾವುದೇ ನೆಟವರ್ಕ್‌ಗೆ ಉಚಿತವಾಗಿ ಅಲ್ಲಿಮಿಟೆಡ್ ಕಾಲ್ ಕೂಡ ಮಾಡಬಹುದು. ಹಾಗೂ ಪ್ರತಿದಿನ 100 ಉಚಿತ ಸಂದೇಶಗಳ ಪ್ರಯೋಜನವನ್ನು ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಫ್ಲ್ಯಾನ್ ಒಟ್ಟು 180 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿರುತ್ತದೆ. ಇದರೊಂದಿಗೆ ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ಗ್ರಾಹಕರಿಗೆ ವಿಕೆಂಡ್ ಡೇಟಾ ರೋಲ್ ಓವರ್ ಸೌಲಭ್ಯವು ಲಭ್ಯವಿದೆ.
2,899 ರೂಪಾಯಿ ರೀಚಾರ್ಜ್ ಪ್ಲಾನ್ :- విఐ ಟೆಲಿಕಾಂ ಕಂಪನಿಯ ಈ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ ಒಟ್ಟು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ರೀಚಾರ್ಜ್ ಮೂಲಕ ಗ್ರಾಹಕರಿಗೆ ಪ್ರತಿದಿನ 1.5 ಜಿಬಿ ಡೇಟಾ ಪ್ರಯೋಜನಗಳು ಲಭ್ಯವಾಗಲಿವೆ. ಜೊತೆಗೆ ಉಚಿತವಾಗಿ ಅನ್ಲಿಮಿಟೆಡ್ ಕಾಲ್ ಸಹ ಮಾಡಬಹುದಾಗಿದೆ. ಹಾಗೂ ದಿನಕ್ಕೆ 100 ಸಂದೆಶಗಳನ್ನು ಕಳುಹಿಸಬಹುದು.
3099 ರೂಪಾಯಿ ರೀಚಾರ್ಜ್ ಪ್ಲಾನ್ :- ಈ ಪ್ರೀಪೇಯ್ಡ್ ಪ್ಲಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ಗ್ರಾಹಕರಿಗೆ 75 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಪ್ರತಿದಿನ 2 ಜಿಬಿ ಡೇಟಾದ ಜೊತೆಗೆ ಯಾವುದೇ ನೆಟ್‌ವರ್ಕ್‌ಗಳಿಗೆ ಅನ್ಲಿಮಿಟೆಡ್ ಕರೆಯನ್ನು ಕೂಡ ಮಾಡಬಹುದು. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್‌ಎಸ್ ಸಹ ಮಾಡಬಹುದಾಗಿದೆ. ಇನ್ನು ಹಾಗೆಯೇ ಈ ಯೋಜನೆ ಮೂಲಕ ಒಂದು ವರ್ಷದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಬಹುದು.













