Home latest 13ರ ಬಾಲಕಿಯನ್ನು 55 ಸಾವಿರಕ್ಕೆ ಖರೀದಿಸಿದ ಮಹಿಳೆ! ಗಂಡ ಮತ್ತು ಮಗನಿಂದ ನಿರಂತರವಾಗಿ ಅತ್ಯಾಚಾರ ಮಾಡಿಸಿದಳು!!

13ರ ಬಾಲಕಿಯನ್ನು 55 ಸಾವಿರಕ್ಕೆ ಖರೀದಿಸಿದ ಮಹಿಳೆ! ಗಂಡ ಮತ್ತು ಮಗನಿಂದ ನಿರಂತರವಾಗಿ ಅತ್ಯಾಚಾರ ಮಾಡಿಸಿದಳು!!

Hindu neighbor gifts plot of land

Hindu neighbour gifts land to Muslim journalist

ಹೆಣ್ಣೊಬ್ಬಳು ಸಂಕಷ್ಟದಲ್ಲಿದ್ದಾಗ ಬೇರೆ ಯಾರಾದರೂ ಆಕೆಗೆ ಸಹಾಯ ಹಸ್ತ ಚಾಚುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ತನ್ನದೇ ರೀತಿಯ ಹೆಣ್ಣೊಬ್ಬಳು ಆಕೆಯ ರಕ್ಷಣೆಗೆ ಮುಂದಾಗುತ್ತಾಳೆ. ಆದರೆ ಇಲ್ಲೊಬ್ಬಳು ಪಾಪಿ ಹೆಂಗಸು, ತನ್ನಂತೆ ಹೆಣ್ಣು ಜೀವವಾದ 13ರ ಬಾಲಕಿಯ ಬದುಕನ್ನೇ ಹರಿದು ಮುಕ್ಕಿರುವಂತಹ ಅವಮಾನಕರವಾದ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು 55 ಸಾವಿರ ರೂ.ಗೆ ಬಾಲಕಿಯನ್ನು ಖರೀದಿಸಿ ತನ್ನ ಮಗ ಹಾಗೂ ಪತಿಯಿಂದ ನಿರಂತರವಾಗಿ ಅತ್ಯಾಚಾರ ಮಾಡಿಸಿ ವಿಕೃತಿ ಮೆರೆದಂತಹ ಪ್ರಕರಣ ಇದಾಗಿದ್ದು, ಎಲ್ಲರ ಮನ ಮಿಡಿದಿದೆ.

ರಾಜಸ್ಥಾನದ ಜೈಪುರದಲ್ಲಿ ಇಂತಹ ಹೀನಾಯ ಕೃತ್ಯ ನಡೆದಿದ್ದು, ಜಾರ್ಖಂಡ್‌ನ 13 ವರ್ಷದ ಬಾಲಕಿ ನಗರದ ಮನಕ್ ಚೌಕ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ತನ್ನನ್ನು ಜೈಪುರದಿಂದ 55 ಸಾವಿರ ರೂ.ಗೆ ಖರೀದಿಸಿ ಕರೆತಂದು ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿಸಿದ್ದಾಳೆ ಎಂದು ಬಾಲಕಿ ಆರೋಪಿಸಿದ್ದಾರೆ. ದೂರಿನನ್ವಯ ತನಿಖೆ ಆರಂಭಿಸಿದ ಪೊಲೀಸರು, ಸದ್ಯ ಓರ್ವ ಆರೋಪಿಯನ್ನ ಬಂಧಿಸಿದ್ದಾರೆ. ಆರೋಪಿ ವಿಕಾಸ್ ರಾಣಾ ಎಂದು ಗುರುತಿಸಲಾಗಿದೆ.

ಪ್ರಕರಣದ ಬೆನ್ನತ್ತಿ ಹೋದಾಗ ನಿಜಾಂಶ ಹೊರಬಿದ್ದಿದೆ. ಈ ಪಾಪಿ ಹೆಂಗಸು, ಸುಮಾರು 2 ತಿಂಗಳಿನಿಂದ ಜಾರ್ಖಂಡ್ ನಗರದಲ್ಲಿ ತರಕಾರಿ ಮಾರಾಟ ಮಾಡಿಕೊಂಡಿದ್ದಳು. ಈ ವೇಳೆ ಆಕೆ ಬಾಲಕಿಯನ್ನ ನೋಡಿದ್ದಾಳೆ. ನಂತರ ಮಾಹಿತಿ ಕಲೆಹಾಕಿ ಮದುವೆ ಪ್ರಸ್ತಾಪದೊಂದಿಗೆ ಬಾಲಕಿ ಕುಟುಂಬವನ್ನ ಸಂಪರ್ಕಿಸಿದ್ದಾಳೆ. ಬಾಲಕಿ ಮನೆಗೆ ಬಂದು ಜೈಪುರದ ಉತ್ತಮ ಕುಟುಂಬಕ್ಕೆ ನಿಮ್ಮ ಹುಡುಗಿಯನ್ನು ಮದುವೆ ಮಾಡಿಸಿಕೊಡುವುದಾಗಿ ಆಕೆಯ ತಾಯಿ ಹಾಗೂ ಅಜ್ಜಿಗೆ ಹೇಳಿದ್ದಾಳೆ. ಅಲ್ಲದೇ ಹುಡುಗಿಯನ್ನು ತನ್ನೊಂದಿಗೆ ಕಳುಹಿಸಿಕೊಟ್ಟರೆ 55 ಸಾವಿರ ರೂ. ನೀಡುವುದಾಗಿ ಆಸೆ ತೋರಿಸಿದ್ದಾಳೆ.

ಇದರಿಂದ ಮೊಮ್ಮಗಳ ಬದುಕು ಹಸನಾಗುತ್ತದೆ ಎಂಬ ಆಸೆಯಿಂದ, ಬಾಲಕಿಯ ಅಜ್ಜಿ ಮರುದಿನವೇ ರೈಲಿನಲ್ಲಿ ಬಾಲಕಿಯನ್ನು ಜೈಪುರಕ್ಕೆ ಕರೆತಂದಿದ್ದಾರೆ. ನಂತರ ಬಾಲಕಿಯನ್ನು ಮಹಿಳೆಯ ಕುಟುಂಬದೊಂದಿಗೆ ಬಿಟ್ಟು, ಹಣದೊಂದಿಗೆ ಅಜ್ಜಿ ಮರಳಿದ್ದಾಳೆ. ಈ ವೇಳೆ ಬಾಲಕಿಯನ್ನು ಖರೀದಿಸಿದ ಮಹಿಳೆ ತನ್ನ ಮಗನಿಂದ ಅತ್ಯಾಚಾರ ಮಾಡಿಸಿದ್ದಾಳೆ. ಆಕೆಯ ಪತಿ ಎಂದು ಹೇಳಿಕೊಂಡ ವ್ಯಕ್ತಿ ಸಹ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಈ ನರಕಯಾತನೆಯಿಂದ ಹೇಗೋ ತಪ್ಪಿಸಿಕೊಂಡ ಬಾಲಕಿ, ಸೀದಾ ಪೋಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.