Home Karnataka State Politics Updates Cauvery Protest: ಕಾವೇರಿ ನೀರಿಗಾಗಿ ಹೋರಾಟ ಮಾಡೋರಿಗೆಲ್ಲಾ ಬಿಗ್ ಶಾಕ್ – ಇನ್ಮುಂದೆ ಯಾರೂ ಬಂದ್...

Cauvery Protest: ಕಾವೇರಿ ನೀರಿಗಾಗಿ ಹೋರಾಟ ಮಾಡೋರಿಗೆಲ್ಲಾ ಬಿಗ್ ಶಾಕ್ – ಇನ್ಮುಂದೆ ಯಾರೂ ಬಂದ್ ಮಾಡುವಂತಿಲ್ಲ ಎಂದ ಡಿಕೆಶಿ !!

Cauvery Protest

Hindu neighbor gifts plot of land

Hindu neighbour gifts land to Muslim journalist

Cauvery protest : ಕಾವೇರಿ ಹೋರಾಟದ(cauvery protest) ಕಾವು ರಾಜ್ಯಾದ್ಯಂತ ಹಬ್ಬಿದೆ. ಎಲ್ಲೆಡೆ ಬಂದ್ ಕೂಗು ಕೇಳಿಬರುತ್ತಿದೆ. ರೈತರು, ಮಹಿಳೆಯರು, ಆಟೋ ಚಾಲಚರು, ಸಿನಿಮಾ ನಟರು ಬೀದಿಗಿಳಿದು ಹೋರಾಡುತ್ತಿದ್ದಾರೆ. ಆದರೆ ಈ ನಡುವೆ ಮತ್ತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC)ಯು ಕನ್ನಡಿಗರ ಗಾಯದ ಮೇಲೆ ಮತ್ತೆ ಬರೆ ಎಳೆದಿದೆ.

ಹೌದು, ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕಕ್ಕೆ (Karnataka) ಮುಂದಿನ 18 ದಿನಗಳ ಕಾಲ ಪ್ರತಿ ದಿನ 3 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಆದೇಶಿಸಿದೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಿಡಬ್ಲ್ಯೂಆರ್‌ಸಿ ಸಭೆ ನಡೆಸಿ ಅಕ್ಟೋಬರ್‌ 15ರವರೆಗೆ 3 ಸಾವಿರ ಕ್ಯೂಸೆಕ್‌ ನೀರನ್ನು ತಮಿಳುನಾಡಿನ (Tamil Nadu) ಬಿಳಿಗುಂಡ್ಲುಗೆ ಹರಿಸುವಂತೆ ಆದೇಶಿಸಿದ್ದು ಮತ್ತೆ ಕನ್ನಡಿಗರನ್ನು ಕೆರಳಿಸಿದೆ.

ಅಂದಹಾಗೆ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಿರುದ್ದ ಆದೇಶ ಹೊರಬೀಳುತ್ತಿದ್ದಂತೆ ಕರ್ನಾಟಕದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಕನ್ನಡ ಪರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಎರಡು ಬಂದ್‌ಗೆ ಕರೆ ನೀಡಿದೆ. ಇಂದು ಬೆಂಗಳೂರು ಬಂದ್ ನಡೆಸಲಾಗಿದೆ. ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಇಂದಿನ ಬೆಂಗಳೂರು ಬಂದ್ ಬಹುತೇಕ ಯಶಸ್ವಿಯಾಗಿದೆ. ಈ ಬಂದ್ ನಡುವೆಯೇ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ ಆದೇಶ ಕನ್ನಡಿಗರನ್ನು ಮತ್ತಷ್ಟು ಕೆರಳಿಸಿದೆ.

ಆದರೆ ಈ ಬಾರಿಯು ಆದೇಶವು ಸಂಕಷ್ಟದ ಮಧ್ಯೆಯೂ ಕರ್ನಾಟಕಕ್ಕೆ ತುಸು ಸಮಾಧಾನಕರ ಎನ್ನಲಾಗಿದೆ. ಈ ಹಿಂದಿನ ಆದೇಶಗಳಿಗಿಂತ ತುಸು ಕಡಿಮೆ ಪ್ರಮಾಣದಲ್ಲಿ ನೀರು ಬಿಡುಗಡೆಗೆ ಈ ಬಾರಿ ಆದೇಶ ನೀಡಲಾಗಿದೆ. ಮುಂದಿನ 15 ದಿನಗಳಿಗೆ ಪ್ರತಿ ದಿನ ಮೂರು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಲಾಗಿದೆ.

ಇನ್ನು ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ತಮಿಳುನಾಡು 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕೇಳಿತ್ತು. ಆದರೆ, CWRC ತಮಿಳುನಾಡು ಮನವಿ ತಿರಸ್ಕರಿಸಿದ್ದು, ಬರೀ 3 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶ ಹೊರಡಿಸಿದೆ ಎಂದಿದ್ದಾರೆ.

ಇದನ್ನೂ ಓದಿ: Transportation department : ಬೆಳ್ಳಂಬೆಳಗ್ಗೆಯೇ ಸಾರಿಗೆ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ – ಈ ನೌಕರರ ಭತ್ಯೆಯಲ್ಲಿ ಬರೋಬ್ಬರಿ 10 ಪಟ್ಟು ಹೆಚ್ಚಳ !!