Home latest ಬೆಂಗಳೂರು ರಸ್ತೆಯಲ್ಲಿ ಮಾರ್ಚ್ ಫಾಸ್ಟ್ ಮಾಡುತ್ತ ಬರುತ್ತವೆ ಎಮ್ಮೆ, ದನಗಳು ! ಓಡಿಸಿ ಓಡಿಸಿ ಸುಸ್ತಾಗಿ,...

ಬೆಂಗಳೂರು ರಸ್ತೆಯಲ್ಲಿ ಮಾರ್ಚ್ ಫಾಸ್ಟ್ ಮಾಡುತ್ತ ಬರುತ್ತವೆ ಎಮ್ಮೆ, ದನಗಳು ! ಓಡಿಸಿ ಓಡಿಸಿ ಸುಸ್ತಾಗಿ, ಶಾಸಕರ ಮೊರೆ ಹೋದ ಟೆಕ್ಕಿಗಳು !

Hindu neighbor gifts plot of land

Hindu neighbour gifts land to Muslim journalist

ಉದ್ಯಾನ ನಗರಿ ಬೆಂಗಳೂರಿನ ಬಹು ದೊಡ್ಡ ಸಮಸ್ಯೆಗಳಲ್ಲಿ ಟ್ರಾಫಿಕ್ ಜಾಮ್ ಮುಖ್ಯವಾದುದು. ಹೆಜ್ಜೆ ಹೆಜ್ಜೆಗೂ ಸಿಗ್ನಲ್ ಇದ್ದರೂ ಅದೂ ಒಂದು ಕಿರಿಕಿರಿ. ಇದು ಬಿಟ್ರೆ ರಸ್ತೆ ತುಂಬೆಲ್ಲಾ ಹೊಂಡ ಗುಂಡಿಗಳ ಹಾವಳಿ. ಮಳೆ ಬಂತೆಂದ್ರೆ ನೀರಿನಲ್ಲಿ ಒದ್ದಾಡುವ ತಲೆ ಬಿಸಿ. ಇವೆಲ್ಲದರ ನಡುವೆ ನಮ್ಮ ಟೆಕ್ಕಿಗಳಿಗೆ ಸದ್ಯ ಹೊಸದೊಂದು ಟೆನ್ಶನ್ ಶುರುವಾಗಿದೆ. ದಿನಬೆಳಗಾದರೆ ಆಫೀಸ್ ಗೆ ಹೋಗುವ ಬದಲು ಹಸು, ಎಮ್ಮೆಗಳನ್ನ ಓಡಿಸೋದೆ ಕೆಲಸವಾಗಿದೆ.

ಹೌದು, ಸಿಲಿಕಾನ್ ಸಿಟಿಯ ಟೆಕ್ಕಿಗಳಿಗೆ ಹಸು, ಎಮ್ಮೆಗಳದ್ದೇ ದೊಡ್ಡ ಟೆನ್ಶನ್ ಆಗಿದೆ. ಆಫೀಸ್ ಹೋಗಬೇಕು ಅಂತ ಕಾರು, ಬೈಕ್ ಹತ್ತಿದ್ರೆ, ರಸ್ತೆಯಲ್ಲಿ ಅವುಗಳನ್ನ ಓಡಿಸೋದೆ ನಿತ್ಯ ಕಾಯಕವಾಗ್ತಿದೆ. ಪ್ರತಿ ದಿನ ಇವುಗಳನ್ನು ಓಡಿಸಿ ಓಡಿಸಿ ಸುಸ್ತಾದ ಬೆಂಗಳೂರಿನ ಜನರು, ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುವ ಹಸು, ಎಮ್ಮೆಗಳಿಂದ ದಯವಿಟ್ಟು ಮುಕ್ತಿ ಕೊಡಿಸಿ ಸರ್ ಅಂತ ಶಾಸಕ ಅರವಿಂದ ಲಿಂಬಾವಳಿಗೆ ರಿಕ್ವೆಸ್ಟ್ ಮಾಡ್ತಿದ್ದಾರೆ.

ಸರ್ಜಾಪುರ ರಸ್ತೆಯಲ್ಲಿ ಹಲವು ಐಟಿ ಕಂಪನಿಗಳಿದ್ದು, ಬೆಳಗಾಯಿತೆಂದರೆ ಎಲ್ಲರೂ ತಮ್ಮ ತಮ್ಮ ಆಫೀಸ್ ಹೋಗಲು ರೆಡಿಯಾಗುತ್ತಾರೆ. ಆದರಿಲ್ಲಿ ವಿಪ್ರೋ, ರೇನೋ ಬೋ ಮೂಲಕ ಸರ್ಜಾಪುರ ಮುಖ್ಯ ರಸ್ತೆಯ 2 ಕಿಲೋ ಮೀಟರ್ ವರೆಗೂ ಗುಂಪು ಗುಂಪಾಗಿ ಎಮ್ಮೆ, ಹಸುಗಳು ರಸ್ತೆಗಿಳಿಯುತ್ತಿವೆ. ಇವುಗಳಿಗೆ ಎಷ್ಟೇ ಹಾರ್ನ್ ಮಾಡಿದ್ರೂ ಪಕ್ಕಕ್ಕೇ ಸರಿಯೋದೆ ಇಲ್ಲ. ಇದರಿಂದ ಆಫೀಸ್‍ಗೆ ಹೋಗಲು ನಿತ್ಯ 40 ರಿಂದ 50 ನಿಮಿಷ ಲೇಟಾಗ್ತಿದೆ. ಸರಿಯಾದ ಸಮಯಕ್ಕೆ ಆಫೀಸ್‍ಗೆ ಹೊಗಲು ಆಗ್ತಿಲ್ಲ.

ಟ್ರಾಫಿಕ್ ಪಾಯಿಂಟ್‍ಗಳಲ್ಲಿ ಎಮ್ಮೆ, ಹಸುಗಳಿಂದ ಟ್ರಾಫಿಕ್ ಆದಾಗ ಅಲ್ಲಿರುವ ಟ್ರಾಫಿಕ್ ಪೊಲೀಸರೇ ಅವುಗಳನ್ನ ಓಡಿಸ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳಿಗೆ, ಶಾಸಕರಿಗೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಟೆಕ್ಕಿಗಳು ದೂರಿನಲ್ಲಿ ತಿಳಿಸಿದ್ದಾರೆ

ಮಹಾದೇವಪುರ ವಿಧಾನಸಭಾ ಕ್ಷೇತ್ರದ ಕಸವನಹಳ್ಳಿ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ಎಮ್ಮೆ ಹಸುಗಳು ವಾಹನಗಳಿಗೆ ಅಡ್ಡ ಬರುತ್ತಿವೆ. ಪ್ರತಿದಿನ ಬೆಳಗ್ಗೆ ಆಫೀಸ್‍ ಗೆ ಹೋಗೋ ಹೊತ್ತಲ್ಲೇ, ಮಾರ್ಚ್ ಫಾಸ್ಟ್ ಮಾಡೋ ರೀತಿಯಲ್ಲಿ ಸರತಿ ಸಾಲಿನಲ್ಲಿ ಎಮ್ಮೆ, ಹಸುಗಳು ಹೋಗ್ತಿರುತ್ತೆ. ಕಳೆದ ಆರು ತಿಂಗಳಿನಿಂದ ಈ ರಗಳೆ ಇದ್ದು, ಈ ಬಗ್ಗೆ ಟ್ವಿಟ್ಟರ್‍ನಲ್ಲಿ ಶಾಸಕ ಅರವಿಂದ ಲಿಂಬಾವಳಿ, ಬಿಬಿಎಂಪಿ ಕಮಿಷನರ್ ಪೊಲೀಸರಿಗೆ ಹಾಗೂ ಪಶುಸಂಗೋಪನಾ ಇಲಾಖೆಗೆ ಟ್ಯಾಗ್ ಮಾಡಿ ಎಂಎನ್‍ಸಿ ಟೆಕ್ಕಿಗಳು ಸಾಲು ಸಾಲು ದೂರು ನೀಡಿದ್ದಾರೆ.