Home latest APL-BPL ಕಾರ್ಡ್‌ದಾರರಿಗೆ ರಾಜ್ಯಸರಕಾರದಿಂದ ಮತ್ತೊಂದು ಸಿಹಿ ಸುದ್ದಿ!!!

APL-BPL ಕಾರ್ಡ್‌ದಾರರಿಗೆ ರಾಜ್ಯಸರಕಾರದಿಂದ ಮತ್ತೊಂದು ಸಿಹಿ ಸುದ್ದಿ!!!

Puneeth rajkumar Hrudayajyoti scheme

Hindu neighbor gifts plot of land

Hindu neighbour gifts land to Muslim journalist

Puneeth rajkumar Hrudayajyoti scheme: ಇಂದು ಕನ್ನಡ ರಾಜ್ಯೋತ್ಸವದಂದು ಬಿಪಿಎಲ್‌ ಸೇರಿ ಎಲ್ಲಾ ಪಡಿತರ ಚೀಟಿದಾರರಿಗೆ ರಾಜ್ಯ ಸರಕಾರ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಡಾ.ಪುನೀತ್‌ ರಾಜ್‌ಕುಮಾರ್‌ ಹೃದಯಜ್ಯೋತಿ ಯೋಜನೆಯನ್ನು (Puneeth rajkumar Hrudayajyoti scheme)ನವೆಂಬರ್‌ನಲ್ಲಿ ಜಾರಿ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಹೃದಯಾಘಾತಕ್ಕೆ ಒಳಗಾದವರಿಗೆ ತಕ್ಷಣ ಚಿಕಿತ್ಸೆ ನೀಡುವುದು ಈ ಯೋಜನೆಯ ಉದ್ದೇಶ ಎಂದು ಹೇಳಿದ್ದಾರೆ.

ನವೆಂಬರ್‌ ಅಂತ್ಯದಲ್ಲಿ ಪುನೀತ್‌ ರಾಜ್‌ಕುಮಾರ್‌ ಹೃದಯ ಜ್ಯೋತಿ ಯೋಜನೆಗೆ ಚಾಲನೆ ನೀಡುವುದಾಗಿ, ರಾಜ್ಯದ 16 ಸೂಪರ್‌ ಸ್ಪೆಷಾಲಿಟಿ, 85 ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಯೋಜನೆ ಜಾರಿಯಾಗಲಿದೆ ಎಂದು ಸುದ್ದಿಗಾರರೊಂದಿಗೆ ಮಾತಾಡುತ್ತಾ ಈ ಮಾತನ್ನು ಹೇಳಿದ್ದಾರೆ.

ಯಾರಿಗಾದರೂ ಎದೆ ನೋವು ಕಾಣಿಸಿಕೊಂಡರೆ, ಸ್ಪೋಕ್‌ ಕೇಂದ್ರಗಳಿಗೆ ಭೇಟಿ ನೀಡಿದ ಕೂಡಲೇ ಅವರಿಗೆ ಇಸಿಜಿ ಮಾಡಿಸಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಪರಿಸ್ಥಿತಿ ಅವಲೋಕಿಸಲಾಗುವುದು. ಗಂಭೀರವಾಗಿದ್ದರೆ ಟೆನೆಕ್ಟ್‌ ಪ್ಲಸ್‌ ಇಂಜೆಕ್ಷನ್‌ ನೀಡಲಾಗುವುದು. ನಂತರ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದ್ದಾರೆ. ಅಂದ ಹಾಗೆ ಟೆನೆಕ್ಟ್‌ ಪ್ಲಸ್‌ ಇಂಜೆಕ್ಷನ್‌ಗೆ 35 ರಿಂದ 45 ಸಾವಿರ ರೂ ಖರ್ಚಾಗಲಿದೆ. ಆದರೆ ಸ್ಪೋಕ್‌ ಕೇಂದ್ರದಲ್ಲಿ ಉಚಿತವಾಗಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

85 ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳನ್ನು ಸ್ಪೋಕ್‌ ಕೇಂದ್ರಗಳಾಗಿ, 16 ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹಬ್‌ಗಳನ್ನಾಗಿ ರೂಪಿಸಲಾಗುತ್ತಿದೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

ಇದನ್ನೂ ಓದಿ : Bengalore: ನಟ ದರ್ಶನ್ ಮನೆ ಮುಂದೆ ಕಾರು ನಿಲ್ಸಿದಕ್ಕೆ ಮಹಿಳೆ ಮೇಲೆ ಮನೆಯ ನಾಯಿಯಿಂದ ಅಟ್ಯಾಕ್- ಛೂ ಬಿಟ್ಟದ್ದು ಯಾರು ಗೊತ್ತಾ !!