Home latest Rajasthan Accident: ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಐವರು ಪೊಲೀಸ್ ಅಧಿಕಾರಿಗಳು ಮೃತ್ಯು!

Rajasthan Accident: ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಐವರು ಪೊಲೀಸ್ ಅಧಿಕಾರಿಗಳು ಮೃತ್ಯು!

Rajasthan Accident

Hindu neighbor gifts plot of land

Hindu neighbour gifts land to Muslim journalist

Rajasthan Accident: ಇಂದು ಮುಂಜಾನೆ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ (Rajasthan Accident)ಟ್ರಕ್‌ಗೆ ಕಾರು ಡಿಕ್ಕಿ ಹೊಡೆದು ಐವರು ಪೊಲೀಸ್ ಅಧಿಕಾರಿಗಳು ಮೃತಪಟ್ಟ(Death)ಘಟನೆ ವರದಿಯಾಗಿದೆ. ಜುಂಜುನುವಿನಲ್ಲಿ ಪ್ರಧಾನಿ ರ್ಯಾಲಿಗೆ ತೆರಳುತ್ತಿದ್ದ ಸಂದರ್ಭ ಕಾರು ಅಪಘಾತ (Car Accident) ಸಂಭವಿಸಿದೆ ಎನ್ನಲಾಗಿದೆ.

ಈ ಅವಘಡದಲ್ಲಿ ಮೂವರು ಪೊಲೀಸರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.ವರದಿಗಳ ಅನುಸಾರ, ಪೊಲೀಸರ ಶವಗಳು ಕಾರಿನೊಳಗೆ ಸಿಲುಕಿಕೊಂಡಿವೆ ಎನ್ನಲಾಗಿದೆ. ಈ ದಾರುಣ ಘಟನೆ ನಗೌರ್ ಜಿಲ್ಲೆಯ ಕಣುತ ಗ್ರಾಮದ ಬಳಿ ನಡೆದಿದೆ ಎನ್ನಲಾಗಿದ್ದು, ಈ ಅಪಘಾತಕ್ಕೆ ನೈಜ ಕಾರಣವೇನು ಎಂಬುದು ತಿಳಿದುಬಂದಿಲ್ಲ.

ನಗೌರ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ರಾಣಹಾನಿಯಾಗಿರುವ ಕುರಿತಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ವ್ಯಕ್ತಪಡಿಸಿದ್ದಾರೆ. ಚುರುವಿನ ಸುಜನ್‌ಗಢ್ ಸದರ್ ಪ್ರದೇಶದಲ್ಲಿ ನಡೆದ ಅಪಘಾತ ಸುದ್ದಿ ಕೇಳಿ ಬೇಸರವಾಗಿದ್ದು, ಅಪಘಾತದಲ್ಲಿ ಮೃತಪಟ್ಟ ಎಲ್ಲಾ ಪೊಲೀಸರ ಕುಟುಂಬಗಳಿಗೆ ದುಃಖವನ್ನು ಮರೆಯುವ ಶಕ್ತಿ ನೀಡಲಿ, ಗಾಯಗೊಂಡಿರುವ ಪೊಲೀಸರು ಬೇಗ ಚೇತರಿಸಿಕೊಳ್ಳಲಿ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Deep Fake Helpline: ಮಹಿಳೆಯರೇ ಗಮನಿಸಿ, ಡೀಪ್ ಫೇಕ್ ಬಗ್ಗೆ ಚಿಂತೆ ಬಿಡಿ!! ನಗರ ಪೊಲೀಸ್ ಇಲಾಖೆಯಿಂದ ಸಹಾಯವಾಣಿಗೆ ಕರೆ ಮಾಡಲು ಮನವಿ!