Home latest Congress guarantee: ಮಹಿಳೆಯರಿಗೆ 10 ಗ್ರಾಂ ಚಿನ್ನ, 1 ಲಕ್ಷ ಹಣ, ಉಚಿತ ಇಂಟರ್ನೆಟ್ ಸೌಲಭ್ಯ-...

Congress guarantee: ಮಹಿಳೆಯರಿಗೆ 10 ಗ್ರಾಂ ಚಿನ್ನ, 1 ಲಕ್ಷ ಹಣ, ಉಚಿತ ಇಂಟರ್ನೆಟ್ ಸೌಲಭ್ಯ- ಮತ್ತೆ ಹೊಸ ಗ್ಯಾರಂಟಿಗಳನ್ನು ಘೋಷಿಸಿದ ಕಾಂಗ್ರೆಸ್

Congress guarantee

Hindu neighbor gifts plot of land

Hindu neighbour gifts land to Muslim journalist

Congress guarantee: ಕರ್ನಾಟಕದಲ್ಲಿ ಕಾಂಗ್ರೆಸ್ ಬಹುಮತವನ್ನು ಪಡೆದು ಸರ್ಕಾರವನ್ನು ರಚಿಸಿದೆ. ಇದಕ್ಕೆ ಮುಖ್ಯ ಕಾರಣ ಪಂಚ ಗ್ಯಾರಂಟಿಗಳು. ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಪಂಚ ತಾನು ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಗಳನ್ನು(Congress guarantee)ಜಾರಿಗೊಳಿಸುವುದಾಗಿ ಭರವಸೆ ನೀಡಿ ಅದರ ಮೂಲಕ ಬಂಪರ್ ಮತಗಳನ್ನು ಪಡೆದು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಇದರಲ್ಲಿ ಸಂಪೂರ್ಣ ಸಕ್ಸಸ್ ಕಂಡಿರೋ ಸರ್ಕಾರ ಈ ಪ್ರಯೋಗಗಳನ್ನು ಇತರ ರಾಜ್ಯಗಳಲ್ಲಿಯೂ ಕಾಂಗ್ರೆಸ್ ಪ್ರಯೋಗಿಸಲು ಮುಂದಾಗಿದೆ.

ಹೌದು, ತೆಲಂಗಾಣದಲ್ಲಿ(Telangana) ಕರ್ನಾಟಕದ ಮಂತ್ರವನ್ನೇ ಜಪಿಸಿರವ ಕಾಂಗ್ರೆಸ್ ನವೆಂಬರ್ ನಲ್ಲಿ ನಡೆಯುವ ಚುನಾವಣೆಯಲ್ಲಿ ಗೆದ್ದು ತಾನು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ 10 ಗ್ರಾಂ ಚಿನ್ನ, ಒಂದು ಲಕ್ಷ ರೂ. ನಗದು ಜೊತೆಗೆ ವಿದ್ಯಾರ್ಥಿಗಳಿಗೆ ಉಚಿತ ಇಂಟರ್ನೆಟ್, 400 ರೂಗೆ LPG ಸಿಲಿಂಡರ್ ಸೇರಿದಂತೆ ಹಲವು ಮಹಾಪೂರ ಭರವಸೆಗಳನ್ನು ಘೋಷಿಸಿದೆ.

ಅಂದಹಾಗೆ ತೆಲಂಗಾಣ ಚುನಾವಣೆ 2023ರ (Telangana Election 2023) ಪ್ರಣಾಳಿಕೆಯನ್ನು ಕಾಂಗ್ರೆಸ್ (Congress Manifesto) ಇನ್ನೂ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ. ಆದರೆ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (TPCC) ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಡಿ. ಶ್ರೀಧರ್ ಬಾಬು ಅವರ ಪ್ರಕಾರ, ಪ್ರಣಾಳಿಕೆಯು ವಧು-ವರರಿಗೆ ನಗದು (Cash) ಮತ್ತು ಚಿನ್ನ (Gold) ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಇಂಟರ್ನೆಟ್ (Free Internet) ಅನ್ನು ಒಳಗೊಂಡಿರುವ ಸಾಧ್ಯತೆಯಿದೆ ಎಂದು ಘೋಷಿಸಿದ್ದಾರೆ.

ಇನ್ನು ಸದ್ಯ ತೆಲಂಗಾಣದ ಆಡಳಿತರೂಡವಾಗಿರುವ ಬಿಆರ್‌ಎಸ್‌ ಸರ್ಕಾರವು ಕಲ್ಯಾಣ ಲಕ್ಷ್ಮೀ ಮತ್ತು ಶಾದಿ ಮುಬಾರಕ್ ಯೋಜನೆಗಳನ್ನು ಹೊಂದಿದ್ದು. ಅವುಗಳ ಅಡಿಯಲ್ಲಿ ಮದುವೆಯಾಗುವ 18 ವರ್ಷ ಮೀರಿದ ವಧುವಿಗೆ 1,00,116 ರೂ. ಅನ್ನು ಸರ್ಕಾರ ನೀಡುತ್ತಿದೆ. ಇದಕ್ಕೆ ತನ್ನ ಗ್ಯಾರಂಟಿಗಳ ಮೂಲಕ ಟಾಂಗ್ ಕೊಡಲು ಕಾಂಗ್ರೆಸ್ ಮುಂದಾಗಿದೆ.

ಇದರಿಂದಾಗಿ ಕರ್ನಾಟಕದಲ್ಲಿ ಗ್ಯಾರಂಟಿಗಳ ಗೆಲುವಿನ ರುಚಿ ಕಂಡ ಕಾಂಗ್ರೆಸ್, ದಕ್ಷಿಣ ಭಾರತದಲ್ಲಿ ತನ್ನ ಅಧಿಪತ್ಯ ಸಾಧಿಸಲು ಮುಂಬರುವ ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಈ ಟ್ರಿಕ್ಸ್ ಬಳಸಿ ಗೆಲುವಿನ ನಗೆ ಬೀರಲು ಮುಂದಾಗಿದೆ. ಆದರೆ ಉಚಿತ ಸಂಸ್ಕೃತಿಗಳು ದೇಶವನ್ನು ದಿವಾಳಿಮಾಡುತ್ತವೆ ಎಂಬುದನ್ನು 60 ವರ್ಷಗಳ ಕಾಲ ದೇಶವನ್ನಾಳಿದ ರಾಷ್ಟ್ರೀಯ ಪಕ್ಷವೊಂದು ನೆನಪಿನಲ್ಲಿಡಬೇಕು.

ಇದನ್ನೂ ಓದಿ: DA Hike: ಕೊನೆಗೂ ಡಿಎ ಹೆಚ್ಚಳ ಘೋಷಿಸಿದ ಸರ್ಕಾರ- ಇನ್ನು ಸರ್ಕಾರಿ ನೌಕರರ ಕೈ ಸೇರಲಿದೆ ಈ ಭರ್ಜರಿ ಸಂಬಳ !!