Home latest KSRTC ಬಸ್‌ನಲ್ಲೂ ನಡೆಯಿತು ಮೂತ್ರ ಪ್ರಸಂಗ ! ಯುವತಿ ಸೀಟಿನ ಮೇಲೆ ಉಚ್ಚೆ ಮಾಡಿದ ಯುವಕ,...

KSRTC ಬಸ್‌ನಲ್ಲೂ ನಡೆಯಿತು ಮೂತ್ರ ಪ್ರಸಂಗ ! ಯುವತಿ ಸೀಟಿನ ಮೇಲೆ ಉಚ್ಚೆ ಮಾಡಿದ ಯುವಕ, ಮುಂದೇನಾಯ್ತು?

KSRTC

Hindu neighbor gifts plot of land

Hindu neighbour gifts land to Muslim journalist

KSRTC : ಕೆಎಸ್‌ಆರ್‌ಟಿಸಿ (KSRTC) ಬಸ್‌ನಲ್ಲಿ ಯುವತಿಯೊಬ್ಬಳು ಕುಳಿತಿದ್ದ ಸೀಟಿನ ಮೇಲೆ ಯುವಕನೊಬ್ಬ ಮೂತ್ರವಿಸರ್ಜನೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಸದ್ಯ ಯುವಕನ ಈ ನೀಚ ಕಾರ್ಯಕ್ಕೆ ಸಹಪ್ರಯಾಣಿಕರಿಂದ ಧರ್ಮದೇಟು ಸಿಕ್ಕಿದೆ.

ನಿನ್ನೆ ರಾತ್ರಿ (ಫೆ.22) ವಿಜಯಪುರದಿಂದ ಮಂಗಳೂರಿಗೆ ಹೊರಟ ಕೆಎಸ್‌ಆರ್‌ಟಿಸಿಯ ನಾನ್‌ ಎಸಿ ಸ್ಲೀಪರ್‌ ಕೋಚ್‌ ಬಸ್‌ ನಲ್ಲಿ 20 ವರ್ಷದ ಯುವತಿಯೊಬ್ಬಳು ಪ್ರಯಾಣಿಸುತ್ತಿದ್ದಳು. ಆಕೆಯ ಪಕ್ಕದ ಸೀಟಿನಲ್ಲಿ ಮದ್ಯಪಾನ ಮಾಡಿದ್ದ ಯುವಕನೊಬ್ಬ ಕುಳಿತಿದ್ದ. ಈತ ಎಂತಹ ನೀಚ ಕೆಲಸ ಮಾಡಿದ್ದಾನೆ ಗೊತ್ತಾ? ಮದ್ಯಪಾನ ಮಾಡಿದ್ದ 30 ವರ್ಷದ ಯುವಕ ಯುವತಿಯ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾನೆ.

ವಿಜಯಪುರದಿಂದ ಹೊರಟ ಬಸ್ ಅನ್ನು ಹುಬ್ಬಳ್ಳಿ ಬಳಿಯ ಕಿರೇಸೂರ್‌ ಡಾಬಾದ ಬಳಿ ಊಟ, ತಿಂಡಿಗೆಂದು ನಿಲ್ಲಿಸಲಾಯಿತು. ಈ ವೇಳೆ ಬಸ್ ನಲ್ಲಿದ್ದ ಪ್ರಯಾಣಿಕರೆಲ್ಲಾ ಕೆಳಗಿಳಿದು ಊಟ ಮಾಡಲು ಹೋದರು. ಹಾಗೆಯೇ ಯುವತಿಯೂ ಬಸ್ ನಿಂದಿಳಿದು ಹೋದಳು. ಆದರೆ ಮದ್ಯಪಾನ ಮಾಡಿದ್ದ ಯುವಕ ಮಾತ್ರ ಬಸ್ ನಿಂದು ಹೊರಗೆ ಹೋಗದೆ, ತನ್ನ ಸೀಟಿನ ಪಕ್ಕದಲ್ಲಿದ್ದ ಯುವತಿಯ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ.

ಊಟ ಮುಗಿಸಿ ವಾಪಸ್‌ ಬಂದ ಯುವತಿ ತನ್ನ ಸೀಟಿನ ಮೇಲೆ ಮೂತ್ರ ಇರುವುದನ್ನು ನೋಡಿದ್ದಾಳೆ. ಆಶ್ಚರ್ಯಗೊಂಡು, ಯಾರು ಈ ಹೀನ ಕೃತ್ಯ ಮಾಡಿರಬಹುದು ಎಂದು ಬಸ್ಸಿನಲ್ಲಿ ಕಣ್ಣಾಡಿಸಿದಾಗ
ಪಕ್ಕದ ಸೀಟಿನಲ್ಲಿ ಆ ವ್ಯಕ್ತಿ ಒಬ್ಬನೇ ಇರುವುದು ತಿಳಿದಿದೆ. ಆತನದೇ ಕಾರ್ಯ ಎಂದು ತಿಳಿದು, ಯುವತಿ ಚಾಲಕ ಮತ್ತು ನಿರ್ವಾಹಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ. ಇದನ್ನು ಕಂಡು ಕೋಪಗೊಂಡ ಸಹ ಪ್ರಯಾಣಿಕರು ಕುಡಿದ ಮತ್ತಿನಲ್ಲಿ ಮೂತ್ರ ಮಾಡಿದ ಯುವಕನಿಗೆ ಸರಿಯಾಗಿ ಥಳಿಸಿ, ಬಸ್‌ನಿಂದ ಹೊರಗಟ್ಟಿದ್ದಾರೆ.

ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರಿಂದ ಅಲ್ಲಿ ಮಲಗಲು ಸಾಧ್ಯವೇ ಇರಲಿಲ್ಲ. ಹಾಗಾಗಿ ಬಸ್‌ ಅನ್ನು ಹುಬ್ಬಳ್ಳಿಯ ಬಸ್‌ ನಿಲ್ದಾಣದ ಕಡೆಗೆ ತಿರುಗಿಸಿ, ಅಲ್ಲಿ ಬಸ್‌ ನಿಲ್ಲಿಸಿದ್ದಾರೆ. ಅಲ್ಲಿಂದ ಯುವತಿ ಹಾಗೂ ಅಕ್ಕಪಕ್ಕದ 6 ಸೀಟುಗಳಲ್ಲಿನ ಸಹ ಪ್ರಯಾಣಿಕರು ಆ ಬಸ್‌ನಿಂದ ಇಳಿದು ಬೇರೊಂದು ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಆದರೆ ಯುವಕ ಯಾರೆಂಬುದು ತಿಳಿದುಬಂದಿಲ್ಲ. ಆತನ ಬಗ್ಗೆ ಯಾರೂ ವಿಚಾರಿಸಲಿಲ್ಲ. ಆತನಿಗೆ ಚೆನ್ನಾಗಿ ಥಳಿಸಿ ಬಸ್ ನಿಂದ ಕೆಳಗಿಳಿಸಿದ್ದಾರೆ. ಯುವಕನ ಬಗ್ಗೆ ಯಾವುದೇ ಮಾಹಿತಿ ಇಲ್ಲದ್ದರಿಂದ ಯುವತಿ ಪೊಲೀಸ್‌ ಠಾಣೆ ಅಥವಾ ಸಂಚಾರ ವಿಭಾಗಕ್ಕೆ ದೂರು ನೀಡಿಲ್ಲ ಎಂದು ತಿಳಿದುಬಂದಿದೆ.