Home latest ಮಗನ ಹೆಂಡತಿಯ ಕನ್ಯತ್ವ ಪರೀಕ್ಷೆ ಮಾಡಿದ ಅತ್ತೆ, ವರ್ಜಿನ್ನಾ ನೀ ಎಂದ ಗಂಡ – ನಗ್ನಳಾದಳು...

ಮಗನ ಹೆಂಡತಿಯ ಕನ್ಯತ್ವ ಪರೀಕ್ಷೆ ಮಾಡಿದ ಅತ್ತೆ, ವರ್ಜಿನ್ನಾ ನೀ ಎಂದ ಗಂಡ – ನಗ್ನಳಾದಳು ಸೊಸೆ !

Hindu neighbor gifts plot of land

Hindu neighbour gifts land to Muslim journalist

ಮದುವೆಯಾದ ಮೇಲೆ ಎಲ್ಲಾ ದಂಪತಿಗಳು ಹನಿಮೂನ್ ಗೆ ಹೋಗುತ್ತಾರೆ. ಒಬ್ಬರನ್ನೊಬ್ಬರು ಅರಿತುಕೊಳ್ಳಲು ಜೊತೆಗೆ ಏಕಾಂತವಾಗಿ ಸಮಯ ಕಳೆಯಲು ಹನಿಮೂನ್ ಎಂಬುದು ಇದೊಂದು ಪ್ರಶಸ್ತ ಸಮಯ ಎಂದೇ ಹೇಳಬಹುದು. ಆದರೆ ಇಲ್ಲೊಂದು ದಂಪತಿ ಹನಿಮೂನ್ ಗೆಂದು ಹೊರಟಾಗ ಅತ್ತೆಯಾದವಳು ಸೊಸೆಯ ಕನ್ಯತ್ವ ಪರೀಕ್ಷೆ(Virginity Test) ಮಾಡಿಸಿರುವ ಘಟನೆ ನಡೆದಿದೆ.

ಈ ಘಟನೆ ನಡೆದಿರುವುದು ಮದ್ಯಪ್ರದೇಶದಲ್ಲಿ. ಇದೀಗ ಪತ್ನಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಅತ್ತೆ, ಪತಿ ಮತ್ತು ಪತಿಯ ಸಹೋದರನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪೆರೆಗ್ರೆಯ್ನ್ ಫಾಲ್ಕನ್ ಹಕ್ಕಿ | ಇವುಗಳ ವೇಗಕ್ಕೆ ಡೊಮೆಸ್ಟಿಕ್ ವಿಮಾನಗಳು ಬೆಚ್ಚಿ ಬೀಳುತ್ತವೆ !

ಮದ್ಯಪ್ರದೇಶದ ಇಂದೋರ್ ನಿವಾಸಿ ಯುವತಿಯ ವಿವಾಹ ಸ್ಥಳೀಯ ಯುವಕನೊಂದಿಗೆ ನಡೆದಿತ್ತು. ವಿವಾಹದ ನಂತರ ತನ್ನ ಪತಿಯೊಂದಿಗೆ ಹನಿಮೂನ್ ಗೆ ಹೋಗಲು ಯವತಿ ಪ್ಲ್ಯಾನ್ ಮಾಡಿದ್ದಾಳೆ.

Money Tips : ಮನೆಯ ಆರ್ಥಿಕ ಸಮಸ್ಯೆಗೆ ನಿಮ್ಮಲ್ಲಿರುವ ಈ ಅಭ್ಯಾಸಗಳೇ ಕಾರಣ !

ಆದರೆ ಅತ್ತೆ ಮದುವೆಯಾದ 2 ದಿನಗಳ‌ ಬಳಿಕ ಸೊಸೆಯನ್ನು ಬಾತ್ ರೂಂ ಗೆ ಬರುವಂತೆ ಹೇಳಿ ಅಲ್ಲಿ ಬಟ್ಟೆಯನ್ನು ಬಿಚ್ಚುವಂತೆ ಹೇಳಿದ್ದಾಳೆ. ಇದರಿಂದ ಶಾಕ್ ಗೆ ಒಳಗಾದ ನವವಿವಾಹಿತೆ ಪತಿಗೆ ಈ ವಿಚಾರ ತಿಳಿಸಿದ್ದಾಳೆ. ಆದರೆ ಆತ ಅಮ್ಮ‌ಹೇಳಿದ ಹಾಗೆ ಮಾಡು ಎಂದು ಹೇಳಿದ್ದ. ಪತಿಯ ಮಾತಿನಿಂದ ಬೇಸರಗೊಂಡ ಆಕೆ ಇಷ್ಟವಿಲ್ಲದಿದ್ದರೂ ಅತ್ತೆಯ ಎದುರು ಬೆತ್ತಲಾಗಿ ನಿಂತುಕೊಂಡಿದ್ದಾಳೆ.

Peepapl Tree : ಅಶ್ವತ್ಥ ಮರವನ್ನು ಯಾವಾಗ ಪೂಜಿಸಿದ್ರೆ ಉತ್ತಮ?

ಆ ಬಳಿಕ ಪತಿ ಪತ್ನಿ ಇಬ್ಬರನ್ನೂ ಹನಿಮೂನ್ ಗೆ ಕಳಿಸಿದ್ದಾಳೆ ಅತ್ತೆ. ಆದರೆ ನಾಲ್ಕು ತಿಂಗಳು ಕಳೆದ ಬಳಿಕ ಪತಿಯ ಸಹೋದರ ಆಕೆಗೆ ಲೈಂಗಿಕ ಕಿರುಕುಳ ಕೊಟ್ಟಿದ್ದ. ಇದನ್ನು ಅತ್ತೆಯಲ್ಲಿ ಹೇಳಿದಾಗ ಹೆಚ್ಚು ತಲೆಕೆಡಿಸಿಕೊಳ್ಳದೆ ಸುಮ್ಮನಿದ್ದರು. ನಂತರ ತನ್ನ‌ ಹಿರಿಮಗನ ಕೋಣೆ ಸ್ವಚ್ಛ ಮಾಡುವಂತೆ ಅತ್ತೆ ಕಳುಹಿಸಿದಾಗ ಆಗ ಅಲ್ಲಿದ್ದ ಪತಿಯ ಸಹೋದರ ಬಾಗಿಲನ್ನು ಮುಚ್ಚಿ ಅತ್ಯಾಚಾರ ಮಾಡಿದ್ದ.

ಈ ಬಗ್ಗೆ ಅತ್ತೆಯಲ್ಲಿ ಹೇಳಿದಾಗ ಅತ್ತೆ ಈಕೆಗೆನೇ ಬೈದಿದ್ದಳು. ಕೊನೆಗೆ ಕುಟುಂಬಸ್ಥರ ಕಿರುಕುಳ ತಾಳಲಾರದೇ ಆಕೆ ತವರು ಮನೆಗೆ ಬಂದಿದ್ದಳು. ಆದರೆ ಪೋಷಕರಲ್ಲಿ ಇದನ್ನೆಲ್ಲಾ ಹೇಳಲು ಮುಜುಗುರಪಟ್ಟ ಆಕೆ ಸುಮ್ಮನಿದ್ದಳು. ಕೆಲ ದಿನಗಳ ಬಳಿಕ ಪೋಷಕರು ಅತ್ತೆ ಮನೆಗೆ ಹೋಗುವಂತೆ ಹೇಳಿದ ಸಂದರ್ಭದಲ್ಲಿ ಅನಿವಾರ್ಯವಾಗಿ ಆಕೆ ನಡೆದ ಘಟನೆಗಳನ್ನು ಪೋಷಕರಿಗೆ ಹೇಳಿದ್ದಾಳೆ. ಈಗ ಪೋಷಕರು ಮಗಳನ್ನು ಕರೆದುಕೊಂಡು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಈ ಕುರಿತು ಪ್ರಕರಣ ದಾಖಲು ಮಾಡಲಾಗಿದೆ.