Home Jobs ಕೇಂದ್ರೀಯ ವಿದ್ಯಾಲಯ ಉಡುಪಿಯಲ್ಲಿ ಉದ್ಯೋಗವಕಾಶ | ನೇರ ಸಂದರ್ಶನಕ್ಕೆ ಆಹ್ವಾನ!

ಕೇಂದ್ರೀಯ ವಿದ್ಯಾಲಯ ಉಡುಪಿಯಲ್ಲಿ ಉದ್ಯೋಗವಕಾಶ | ನೇರ ಸಂದರ್ಶನಕ್ಕೆ ಆಹ್ವಾನ!

Hindu neighbor gifts plot of land

Hindu neighbour gifts land to Muslim journalist

ಕೇಂದ್ರೀಯ ವಿದ್ಯಾಲಯ ಉಡುಪಿ, ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನೇರ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ. ಎಜುಕೇಟರ್ ಹುದ್ದೆಗಳು ಹಾಗೂ ಕ್ರೀಡಾ ಇನ್‌ಸ್ಟ್ರಕ್ಟರ್ ಹುದ್ದೆಗಳ ಭರ್ತಿಗೆ ನೇಮಕ ಪ್ರಕಟಣೆ ಹೊರಡಿಸಿದ್ದು, ಆಸಕ್ತರು ಅರ್ಜಿಹಾಕಬಹುದು. ಈ ಹುದ್ದೆಗಳ ಆಯ್ಕೆಗೆ ನೇರ ಸಂದರ್ಶನವನ್ನು ನಡೆಸಲಿದ್ದು, ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ವಾಕ್‌ ಇನ್‌ ಇಂಟರ್‌ವ್ಯೂ ಗೆ ಹಾಜರಾಗಲು ಸೂಚಿಸಲಾಗಿದೆ.

ಉದ್ಯೋಗ ಸಂಸ್ಥೆ : ಕೇಂದ್ರೀಯ ವಿದ್ಯಾಲಯ ಉಡುಪಿ.
ಹುದ್ದೆಗಳ ಹೆಸರು : ಸ್ಪೆಷಿಯಲ್ ಎಜುಕೇಟರ್ ಮತ್ತು ಸ್ಪೋರ್ಟ್ಸ್‌ ಇನ್‌ಸ್ಟ್ರಕ್ಟರ್
ನೇರ ಸಂದರ್ಶನ ದಿನಾಂಕ: 16-11-2022
ನೇರ ಸಂದರ್ಶನ ಸಮಯ : ಬೆಳಿಗ್ಗೆ 08-30 ಗಂಟೆಗೆ ರಿಪೋರ್ಟ್‌ ಮಾಡಿಕೊಳ್ಳಬೇಕು.
ನೇರ ಸಂದರ್ಶನ ಸ್ಥಳ : ಕೇಂದ್ರೀಯ ವಿದ್ಯಾಲಯ ಉಡುಪಿ, ಡಯಟ್ ಬಲ್ಡಿಂಗ್, ಐಟಿಐ ಕಾಲೇಜು ಹತ್ತಿರ, ಪ್ರಗತಿ ನಗರ, ಮಣಿಪಾಲ್, ಉಡುಪಿ – 576104.

ಎಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಕೇಂದ್ರೀಯ ವಿದ್ಯಾಲಯ ಉಡುಪಿ ತಿಳಿಸಿಲ್ಲ. ಆದರೆ ಈ ಹುದ್ದೆಗಳನ್ನು 2022-23ನೇ ಸಾಲಿಗೆ ಗುತ್ತಿಗೆ ಆಧಾರಿತವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.

ಕೇಂದ್ರೀಯ ವಿದ್ಯಾಲಯ ಉಡುಪಿ ಅಧಿಕೃತ ವೆಬ್‌ಸೈಟ್‌ ವಿಳಾಸ : http://udupi.kvs.ac.in
ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವ ವೇಳೆ ತಮ್ಮ ಶೈಕ್ಷಣಿಕ ಅರ್ಹತೆಯ ಪ್ರತಿ ಸೆಮಿಸ್ಟರ್‌ಗಳ ಅಂಕಪಟ್ಟಿ ಮೂಲ ದಾಖಲೆ ಹಾಗೂ ಜೆರಾಕ್ಸ್‌ ಪ್ರತಿಗಳ ಸ್ವಯಂ ದೃಢೀಕರಣ ಪ್ರತಿಗಳನ್ನು, ಒಂದು ಪಾಸ್ ಪೋರ್ಟ್‌ ಅಳತೆಯ ಭಾವಚಿತ್ರವನ್ನು ಹಾಜರುಪಡಿಸಬೇಕಾಗಿದೆ.
ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದ್ದಲ್ಲಿ ಪ್ರತ್ಯೇಕ ದಾಖಲೆ ಪ್ರತಿಗಳನ್ನು ಹಾಜರುಪಡಿಸಬೇಕು. ಅರ್ಜಿ ನಮೂನೆಯನ್ನು ಕೇಂದ್ರೀಯ ವಿದ್ಯಾಲಯ ಉಡುಪಿ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಮೇಲಿನ ಸದರಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೇಂದ್ರೀಯ ವಿದ್ಯಾಲಯದ ನಿಯಮಗಳ ಪ್ರಕಾರ ವೇತನ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ – 0820-2950079