Home latest Vote from Home : 80 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ...

Vote from Home : 80 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ : ಹೆಚ್ಚಿತೇ ಅಂಗನವಾಡಿ ಸಿಬ್ಬಂದಿಗಳಿಗೆ ಕೆಲಸ!

Vote from Home

Hindu neighbor gifts plot of land

Hindu neighbour gifts land to Muslim journalist

Vote from Home :ಮತದಾನ ಪ್ರತಿಯೊಬ್ಬರ ಹಕ್ಕು ಎನ್ನುವ ದೃಷ್ಟಿಯಿಂದ 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲಿಯೇ ಮತದಾನ (Vote from Home) ಮಾಡಲು ಸರ್ಕಾರ ಅನುವು ಮಾಡಿಕೊಟ್ಟಿದ್ದು, ವಿಧಾನಸಭಾ ಚುನಾವಣೆಯ ಪೂರ್ವ ತಯಾರಿಯನ್ನು ಚುನಾವಣ ಆಯೋಗ ಜಾರಿಗೊಳಿಸಿದೆ.

ವಿಧಾನಸಭಾ ಚುನಾವಣೆ ಕರ್ತವ್ಯಕ್ಕೆ ಸಂಬಂಧಿಸಿದಂತೆ ಅಂಗನವಾಡಿ ಸಿಬಂದಿಗೆ ಜವಾಬ್ದಾರಿ ಹೆಚ್ಚಿಸಲಾಗಿದೆ. ಹೌದು. 80 ವರ್ಷ ಮೇಲ್ಪಟ್ಟವರು, ಅಂಗವಿಕಲರಿಗೆ ಮನೆಯಿಂದಲೇ ವೋಟು ಮಾಡುವ ಈ ವರ್ಷದ ಹೊಸ ಪರಿಕಲ್ಪನೆಯನ್ನು ಚುನಾವಣ ಆಯೋಗ ಜಾರಿಗೊಳಿಸಿದೆ. ಇದರ ಜವಾಬ್ದಾರಿಯನ್ನು ಅಂಗನವಾಡಿ ಸಿಬ್ಬಂದಿಗೆ ವಹಿಸಲಾಗಿದೆ.

ದ.ಕ. ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 46,927 ಹಾಗೂ ಅಂಗವಿಕಲ ಮತದಾರರು 14,007 ಇದ್ದಾರೆ. ಉಡುಪಿ ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 31 ಸಾವಿರ ಮತದಾರರಿಗೆ ಮತ್ತು 11,751 ಅಂಗವಿಕಲ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಅನುಕೂಲವಾಗಲಿದೆ. ಮನೆಯಲ್ಲೇ ವೋಟು ಮಾಡುತ್ತೀರಾ? ಮತಗಟ್ಟೆಗೆ ತೆರಳಿ ವೋಟು ಹಾಕುತ್ತೀರಾ? ಎಂದು ಕೇಳಿ ವಾಹನ, ವೀಲ್‌ಚೇರ್‌ ವ್ಯವಸ್ಥೆ ಬಗ್ಗೆ ಮಾಹಿತಿ ಸಂಗ್ರಹಿಸುವ ಕೆಲಸ ಈ ಬಿಎಲ್‌ಒಗಳಿಂದ ನಡೆಯುತ್ತಿದೆ. ತತ್‌ಕ್ಷಣಕ್ಕೆ ರಿಪೋರ್ಟ್‌ ಮಾಡುವುದು, ತಾಲೂಕು ಕಚೇರಿಗಳಿಗೆ ಹಾಜರಾಗಿ ಮಾಹಿತಿ ನೀಡುವುದನ್ನು ಬಿಎಲ್‌ಒಗಳು ನಿರ್ವಹಿಸಬೇಕಿದೆ. ಆದರೆ, ಈ ಜವಾಬ್ದಾರಿಯಿಂದ ಅಂಗನವಾಡಿ ಸಿಬ್ಬಂದಿಗಳಿಗೆ ಹೊರೆ ಹೆಚ್ಚಾಗಲಿದೆ ಎಂಬುದು ಸಿಬ್ಬಂದಿಗಳ ಮಾತಾಗಿದೆ.

ಬಹುತೇಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬಿಎಲ್‌ಒಗಳಾಗಿದ್ದು, ಸದ್ಯ ಒಂದೊಂದು ಗ್ರಾ.ಪಂ.ನಲ್ಲಿ 150ರಿಂದ 200 ಮನೆಗಳಿಗೆ “ಫಾರಂ-12′ ಹಿಡಿದುಕೊಂಡು ಅಂಗನವಾಡಿ ಕಾರ್ಯಕರ್ತೆಯರು ಎರಡೆರಡು ಬಾರಿ ಮನೆಗಳಿಗೆ ಓಡಾಡಬೇಕಿದೆ. ಮೇಲಧಿಕಾರಿಗಳ ಸೂಚನೆಯಂತೆ ನಿರ್ದಿಷ್ಟ ಸಮಯದೊಳಗೆ ವಹಿಸಿದ ಜವಾಬ್ದಾರಿ ಕೆಲವು ಸಲ ಪೂರ್ಣಗೊಳ್ಳುವುದಿಲ್ಲ ಎಂಬ ಆತಂಕ ನಮ್ಮದು ಎಂಬುದು ಕೆಲವು ಬಿಎಲ್‌ಒ ಜವಾಬ್ದಾರಿ ಹೊಂದಿರುವ ಅಂಗನವಾಡಿ ಸಿಬಂದಿ ಅಭಿಪ್ರಾಯ ಪಟ್ಟಿದ್ದಾರೆ.