

Girl viral video: ಮಕ್ಕಳು ಯಾವಾಗಲೂ ಅನುಕರಣೆ ಸ್ವಭಾವ ಹೊಂದಿರುತ್ತಾರೆ. ತನ್ನ ಎದುರಿಗಿರುವ ವಸ್ತುವಾಗಲಿ, ಸಂದರ್ಭಗಳಾಗಲಿ ತನಗೂ ಅನ್ವಯಿಸುತ್ತದೆ ಎಂಬಂತೆ ಮನಸಿನಲ್ಲಿ ಅಂದುಕೊಳ್ಳುತ್ತದೆ. ಅಂತೆಯೇ ಇತ್ತೀಚೆಗೆ ಬಾಲಕಿಯೊಬ್ಬಳು ನನ್ನ ಗಂಡ ಕಾಣುತ್ತಿಲ್ಲ? ಎಂದು ಮುದ್ದಾದ ಬಾಲಕಿ ಕಣ್ಣೀರು ಹಾಕಿ ರಂಪಾಟ ಮಾಡಿದ್ದಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Girl viral video) ಆಗಿದೆ.
ವಿಡಿಯೋ ದಲ್ಲಿ ಬಾಲಕಿ ಬಳಿ ತಾಯಿ ಬಂದು ಯಾಕೆ ಅಳುತ್ತಿದ್ದಿಯಾ ಎಂದು ಕೇಳಿದ್ದಾಳೆ. ಅದಕ್ಕೆ ಬಾಲಕಿ ನನ್ನ ಗಂಡ ಎಲ್ಲೋ ಹೋಗಿದ್ದಾನೆ.. ಎಲ್ಲಿಯೂ ಕಾಣುತ್ತಿಲ್ಲ’ ಎಂದು ಜೋರಾಗಿ ಅಳುತ್ತಾಳೆ. ಮಗುವಿನ ತಾಯಿ ಸಾಂತ್ವನ ಹೇಳಲು ಪ್ರಯತ್ನಿಸುತ್ತಾಳೆ.. ಬೇಟಾ ನಿನಗೆ ಇನ್ನೂ ಗಂಡ ಸಿಕ್ಕಿಲ್ಲ. ದೊಡ್ಡವನಾದ ಮೇಲೆ ಬರುತ್ತಾನೆ. ಅಪ್ಪ ನನ್ನ ಪತಿ ಎಂದು ಹೇಳಿ ಸಮಾಧಾನ ಪಡಿಸಿದ್ದಾಳೆ. ಆದರೆ ಬಾಲಕಿ ಮಾತ್ರ ನನ್ನ ಪತಿ ಎಲ್ಲಿ ಹೋಗಿದ್ದಾನೆಂದು ಊಟ ನೀರು ಬಿಟ್ಟು ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದ್ದಾಳೆ.
ಇದೀಗ ಮಗುವಿನ ಮಾತಿಗೆ ತಾಯಿಯೇ ದಿಕ್ಕು ತೋಚದಂತೆ ಆಗಿದ್ದಾಳೆ. ಈ ಮಗು ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಲೈಕ್‌ಗಳು ಮತ್ತು ಕಾಮೆಂಟ್‌ಗಳ ಮಹಾ ಪೂರವೇ ಬರುತ್ತಿವೆ.
https://www.instagram.com/p/CxIv5B1v82h/?utm_source=ig_web_copy_link
ಇದನ್ನೂ ಓದಿ: ತಿಂಗಳಾಗುತ್ತಾ ಬಂದ್ರೂ ಗೃಹಲಕ್ಷ್ಮೀ ಹಣ ಬಂದಿಲ್ವಾ? ಹಾಗಿದ್ದರೆ ಈ ಕೂಡಲೇ ಈ ದಾಖಲೆ ಸರಿ ಪಡಿಸಿ













